ಮಾರ್ಚ್ 1ರಂದು ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಗೆ ಸಂಬಂಧಪಟ್ಟಂತೆ ಹಗಲು ರಾತ್ರಿಯೆನ್ನದೇ ಪೋಲಿಸ್ ಅಧಿಕಾರಿಗಳು ಮತ್ತು ಎನ್ಐಎ ಟೀಂ ತನಿಖೆ ಮುಂದುವರೆಸಿದೆ. ಇಲ್ಲಿ ಶಂಕಿತ ಉಗ್ರ ಎಷ್ಟೇ ಜಾಣ್ಮೆ ತೋರಲು ಪ್ರಯತ್ನಿಸಿದ್ರೂ ತನಿಖಾಧಿಕಾರಿಗಳು ಎಲ್ಲವನ್ನೂ ಭೇಧಿಸಿ ಮುನ್ನುಗ್ತಿದ್ದಾರೆ. ತನಿಖೆಯ ದಾರಿ ತಪ್ಪಿಸಲು ಈ ಆರೋಪಿ ಎಷ್ಟೆಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದ, ನಂತರ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದ ಎಂಬೆಲ್ಲಾ ಮಾಹಿತಿಗಳು ಒಂದೊಂದಾಗಿ ಹೊರಬರ್ತಿದೆ.

ಸದ್ಯ ಪೋಲಿಸರು ಕಲೆಹಾಖಿರುವ ಮಾಹಿತಿಯ ಪ್ರಕಾರ, ಈ ಶಂಕಿತ ಉಗ್ರ ಬ್ಲಾಸ್ಟ್ ನಡೆಸುವ ಮುನ್ನ ಬೆಂಗಳೂರಿನಲ್ಲೇ ಇದ್ದು, ಬಾಂಬ್ ಬ್ಲಾಸ್ಟ್ ನಂತರ ಹಲವಾರು ಬಸ್ಗಳನ್ನ ಬದಲಿಸಿ ಮಸೀದಿಯೊಂದರ ಸಮೀಪ ತೆರಳಿ ಬಟ್ಟೆ ಬದಲಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾಗಿ ಕಂಡುಬಂದಿದೆ.
ಅಷ್ಟೇ ಅಲ್ಲದೇ ಈತ ಧರಿಸಿದ್ದ ಟೋಪಿಯನ್ನ ಕೂಡ ಎನ್ಐಎ ಅಧಿಕಾರಿಗಳು ಇದೇ ಮಸೀದಿಯ ಸಮೀಪ ವಶಪಡಿಸಿಕೊಂಡಿದ್ದಾರೆ. ಹೀಗೆ ಹೆಜ್ಜೆ ಹೆಜ್ಜೆಗೂ ಜಾಡು ಪತ್ತೆ ಮಾಡುತ್ತಾ ಸಾಗಿದ ತನಿಖಾಧಿಕಾರಿಗಳಿಗೆ ಈತ ಬಾಂಬ್ ಬ್ಲಾಸ್ಟ್ ಕೃತ್ಯವೆಸಗಿದ ನಂತರ ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿರೋದು ತಿಳಿದು ಬಂದಿದೆ, ಮಾತ್ರವಲ್ಲದೇ ಈತ ಬಳ್ಳಾರಿ ಬಸ್ ಸ್ಟ್ಯಾಂಡ್ನಲ್ಲಿ ಓಡಾಡಿರುವ ಸಿಸಿಟಿವಿ ದೃಶ್ಯಗಳೂ ಕೂಡ ಲಭ್ಯವಾಗಿದೆ.

ಇಲ್ಲಿಂದ ಮತ್ತೆ ಈ ಆರೋಫ ಭಟ್ಕಳದ ಕಡೆ ಹೊರಟಿರಬಹುದು ಎಂದು ಪೋಲಿಸರು ಅಂದಾಜಿಸಿದ್ದಾರೆ. ಇಡೀ ತಂಡ ಭಟ್ಕಳದಲ್ಲಿ ಸಂಪೂರ್ಣ ತನಿಖೆಗೆ ಮುಂದಾಗಿದ್ದು ಈತ ರಾಜ್ಯದಲ್ಲೇ ಇದ್ದಾನೋ ಅಥವಾ ಅಂತರ್ರಾಜ್ಯಕ್ಕೆ ಪರಾರಿಯಾಗಿದ್ದಾನೋ ಎಂಬ ಹುಡುಕಾಡದಲ್ಲಿದೆ. ತನಿಖೆಯ ವೇಗ ಗಮನಿಸುತ್ತಿದ್ದರೆ ಆದಷ್ಟು ಬೇಗ ಅಧಿಕಾರಿಗಳು ಈ ಶಂಕಿತ ಉಗ್ರನ ಹೆಡೆಮುರಿಕಟ್ಟುವಲ್ಲಿ ಯಾವದೇ ಸಂಶಯವಿಲ್ಲ .










