• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

“ಬಿಹಾರ ಘಟನೆಯಲ್ಲಿ ಮಾಧ್ಯಮಗಳು ಕೇವಲ ಅರ್ಧ ಸತ್ಯವನ್ನಷ್ಟೇ ಹೇಳಿದೆ..”

by
June 10, 2020
in ದೇಶ
0
"ಬಿಹಾರ ಘಟನೆಯಲ್ಲಿ ಮಾಧ್ಯಮಗಳು ಕೇವಲ ಅರ್ಧ ಸತ್ಯವನ್ನಷ್ಟೇ ಹೇಳಿದೆ.."
Share on WhatsAppShare on FacebookShare on Telegram

ಬಿಹಾರದ ಮುಜಫರಾಪುರ ರೈಲ್ವೇ ನಿಲ್ದಾಣದಲ್ಲಿ ʼಸಾವನ್ನಪ್ಪಿದ ತಾಯಿಯನ್ನ ಎಬ್ಬಿಸುವʼ ಮಗುವಿನ ವೀಡಿಯೋ ತುಣುಕೊಂದು ಜಾಲತಾಣಗಳಲ್ಲಿ ಹರಡಿ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಈ ಮನಕಲಕುವ ದೃಶ್ಯ ಕಂಡು ದೇಶದ ಜನ ಮರುಗಿದ್ದರು. ಹಸಿವಿನಿಂದ ಕಂಗೆಟ್ಟು ಆಕೆ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ರೈಲ್ವೇ ಅಧಿಕಾರಿಗಳು ಅದನ್ನ ನಿರಾಕರಿಸಿದ್ದರು. ಇದೀಗ ಪಾಟ್ನಾ ಹೈಕೋರ್ಟ್‌ ಮುಂದೆ ಭಾರತೀಯ ರೈಲ್ವೇ “ಈ ವೀಡಿಯೋವನ್ನ ಹರಿಯಬಿಡುವ ಮೂಲಕ ಸಂವೇದನಾಶೀಲಗೊಳಿಸಿ ಕೇವಲ ಅರ್ಧ ಸತ್ಯ ಮಾತ್ರ ಹರಿಯಬಿಡಲಾಗಿದೆ” ಎಂದಿದೆ.

ADVERTISEMENT

ಮೇ 28 ರಂದು ವೈರಲ್‌ ಆಗಿದ್ದ ವೀಡಿಯೋದ ಬಗ್ಗೆ ಪಾಟ್ನಾ ಹೈ ಕೋರ್ಟ್‌ ಮುಖ್ಯ ನ್ಯಾಯಾಧೀಶ ಸಂಜಯ್‌ ಕಾರೊಲ್‌ ಹಾಗೂ ಜಸ್ಟಿಸ್‌ ಎಸ್‌. ಕುಮಾರ್‌ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. “ಇದೊಂದು ಆಘಾತಕಾರಿ ಹಾಗೂ ದುರಾದೃಷ್ಟಕರ ಸಂಗತಿ” ಎಂದು ಕರೆದಿದ್ದರು. ಮಾತ್ರವಲ್ಲದೇ ಬಿಹಾರ ರಾಜ್ಯ ಸರಕಾರ ಹಾಗೂ ರೈಲ್ವೇ ಇಲಾಖೆಗೂ ಉತ್ತರಿಸುವಂತೆ ನೋಟೀಸ್‌ ನೀಡಿತ್ತು. ಇದೀಗ ರೈಲ್ವೇ ಇಲಾಖೆ ಪರವಾಗಿ ಆಶಿಶ್‌ ಗಿರಿ ತಮ್ಮ ವಾದ ಮಂಡಿಸಿದ್ದಾರೆ.

ಹೈಕೋರ್ಟ್‌ ಮುಂದೆ ಬಂದ ಈ ಪ್ರಕರಣ ಸೋಮವಾರ ವಿಚಾರಣೆ ನಡೆದು ಮುಂದೂಡಲ್ಪಟ್ಟಿತು. ಜೂನ್‌ 15ಕ್ಕೆ ನಿಗದಿಪಡಿಸಿರುವ ವಿಚಾರಣೆ ಸಂದರ್ಭ ಪ್ರಕರಣ ಸಂಬಂಧ ರಾಜ್ಯ ಗೃಹ ಸಚಿವಾಲಯ, ಭಾರತೀಯ ರೈಲ್ವೇ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯಿಂದ ಅಫಿಡವಿಟ್‌ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ರೈಲ್ವೇ ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ ವರದಿಗಾರ ತನಗೆ ಬೇಕಾದಲ್ಲಿ ದೃಶ್ಯವನ್ನ ಕತ್ತರಿಸಿ, ದೃಶ್ಯದ ನೈಜತೆ ಮರೆಮಾಚಲು ತೆಗೆದು ಹಾಕಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಮಾತ್ರವಲ್ಲದೇ ಆ ರೀತಿ ಮಾಡುವ ಬದಲು ವರದಿಗಾರನಿಗೆ ಈ ಘಟನೆ ಬಗ್ಗೆ ರೈಲ್ವೇ ಅಧಿಕಾರಿಗಳು ಇಲ್ಲವೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು ಎಂದೂ ತಿಳಿಸಿದೆ.

“ನಿಜವಾಗಿಯೂ ಅಗತ್ಯ ಸಹಾಯ ಮಾಡುವ ಬದಲು, ಅವರು ಅದನ್ನ ತನ್ನ ಪ್ರಚಾರಕ್ಕಾಗಿ ಚಿತ್ರೀಕರಿಸಿದ್ದಾರೆ ಮತ್ತು ಅದನ್ನ ಅರ್ಧ ಸತ್ಯ ಹಾಗೂ ನೈಜತೆ ಮರೆಮಾಚಿ ಪ್ರಚುರಪಡಿಸಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

“ಇಂತಹ ಅರ್ಧ ಸತ್ಯಾಂಶ ಮುಂದಿಡುವ ನಡೆ ಅತ್ಯಂತ ಅಪಾಯಕಾರಿಯಾಗಿದ್ದು, ಆದ್ದರಿಂದ ನ್ಯಾಯಾಲಯ ಇಂತಹ ವಿಚಾರದಲ್ಲಿ ನ್ಯಾಯಯುತವಾಗಿ ವ್ಯವಹರಿಸುವ ಅಗತ್ಯವಿದ್ದು, ಅಸಮರ್ಪಕ ಸುದ್ದಿಗಳನ್ನ ಪರಿಶೀಲಿಸದೇ ಮಾಧ್ಯಮಗಳು ಪ್ರಕಟಿಸುವುದರಿಂದ ಇದು ಸಮಾಜದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ” ಎಂದು ತಿಳಿಸಿದೆ.

ಮಾತ್ರವಲ್ಲದೇ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲು ನಿಗದಿಪಡಿಸಿದ ಬಳಿಕ ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ-ಹಗಲೆನ್ನದೆ ವಲಸೆ ಕಾರ್ಮಿಕರು ಸುರಕ್ಷಿತ ಪ್ರಯಾಣಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದಾರೆ” ಎಂದೂ ದಾಖಲಿಸಲಾದ ಅಫಿಡವಿಟ್‌ ನಲ್ಲಿ ತಿಳಿಸಲಾಗಿದೆ. ಜೊತೆಗೆ ಪ್ರಕರಣ ಗಮನಕ್ಕೆ ಬಂದ ತಕ್ಷಣವೇ ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಪಂದಿಸಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾಗಿ ನ್ಯಾಯಾಲಯಕ್ಕೆ ಭಾರತೀಯ ರೈಲ್ವೇ ತಿಳಿಸಿದೆ. ಮಾತ್ರವಲ್ಲದೇ ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ನಡೆದಿಲ್ಲ ಎಂದಿದೆ.

ಇನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆರಂಭಿಕ ಹಂತದಲ್ಲಿ ತಾನು ನಿರ್ವಹಿಸಿದ ಕೆಲಸವನ್ನ ನ್ಯಾಯಾಲಯ ಮುಂದಿಟ್ಟಿದೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಅವರ ಖರ್ಚಿಗಾಗಿ ತಕ್ಷಣವೇ ಮೃತ ಮಹಿಳೆ ತಾಯಿಯ ಬ್ಯಾಂಕ್‌ ಖಾತೆಗೆ 2 ಸಾವಿರ ರೂಪಾಯಿಯನ್ನು ಒದಗಿಸಲಾಗಿದ್ದು, ಅಲ್ಲದೇ ಮೃತ ಮಹಿಳೆಯ ಹೆಸರಿನಲ್ಲಿ ರೇಷನ್‌ ಕಾರ್ಡ್‌ ನೀಡಲಾಗಿದೆ. ಇನ್ನು ಮಕ್ಕಳ ಆರೈಕೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 20 ಸಾವಿರ ರೂಪಾಯಿ ಧನ ಸಹಾಯ ಹಾಗೂ ಮೃತ ಮಹಿಳೆ ಪೋಷಕರಿಗೆ ಜಮೀನನ್ನೂ ನೀಡಲಾಗಿದೆ ಅಂತ ನ್ಯಾಯಾಲಯಕ್ಕೆ ತಿಳಿಸಿದೆ.

ಇನ್ನು ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸದಿರುವ ಬಗ್ಗೆಯೂ ನ್ಯಾಯಾಲಯ ರಾಜ್ಯದ ಗೃಹ ಇಲಾಖೆಯಿಂದ ಮಾಹಿತಿ ಕೇಳಿದ್ದು, ಅದರಂತೆ ಗೃಹ ಇಲಾಖೆ ಅಧಿಕಾರಿಗಳು ಒದಗಿಸಿದ ಮಾಹಿತಿ ಪ್ರಕಾರ, ಮೃತ ಮಹಿಳೆಯ ಕುಟುಂಬವು ಮರಣೋತ್ತರ ಪರೀಕ್ಷೆ ನಡೆಸದಂತೆ ಒತ್ತಾಯಿಸಿತ್ತು ಎಂದಿದೆ. ಅದಾಗ್ಯೂ, ಮರಣೋತ್ತರ ಪರೀಕ್ಷೆ ನಡೆಸದೇ ಹೊಣೆಗೇಡಿತನ ಪ್ರದರ್ಶಿಸಿದ ಅಧಿಕಾರಿಯನ್ನ ಗುರುತಿಸಲು ಜೂನ್‌ 1 ರಂದು ತನಿಖೆಗೆ ಆದೇಶಿಸಲಾಗಿದೆ ಅಂತಾ ನ್ಯಾಯಾಲಯಕ್ಕೆ ತಿಳಿಸಿದೆ.

ಆದರೆ ನ್ಯಾಯಾಲಯದ ಮುಂದೆ ಪ್ರಬಲ ಸಾಕ್ಷಿಯಾಗಿಸಲು ರೈಲ್ವೇ ಹಾಗೂ ಗೃಹ ಇಲಾಖೆ ಅಧಿಕಾರಿಗಳು ನೆಚ್ಚಿಕೊಂಡಿರುವುದು ಮೃತ ಮಹಿಳೆಯ ಸೋದರ ಮಾವನ ಹೇಳಿಕೆಯನ್ನೇ ಆಧರಿಸಿದ್ದಾರೆ. ಅವರ ಹೇಳಿಕೆ ಪ್ರಕಾರ, ಮೃತಪಟ್ಟಿರುವ ಮಹಿಳೆಯು ಮಾನಸಿಕ ಅಸ್ವಸ್ಥತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದರಿಂದಾಗಿ ಸದ್ಯ ದೇಶವನ್ನೇ ಬೆಚ್ಚಿಬೀಳಿಸಿದ್ದ ಬಿಹಾರ ಮುಜಫರಪುರದಲ್ಲಿ ನಡೆದ ಘಟನೆಗೆ ನ್ಯಾಯಾಲಯದಲ್ಲಿ ಟ್ವಿಸ್ಟ್‌ ಸಿಕ್ಕರೂ ಅಚ್ಚರಿಪಡುವಂತಿಲ್ಲ.

Tags: Bihargovt of BiharIndian railwaysmuzaffarpurಬಿಹಾರಬಿಹಾರ ರಾಜ್ಯ ಸರ್ಕಾರಭಾರತೀಯ ರೈಲ್ವೇಮುಜಫರಾಪುರ
Previous Post

ಧಾರ್ಮಿಕ ನಂಬಿಕೆಯ ಆಧಾರದ ಮೇಲಿನ ತಾರತಮ್ಯ‌ ಕೂಡ ಜನಾಂಗೀಯಬೇಧ: ಇರ್ಫಾನ್‌ ಪಠಾಣ್

Next Post

ಕರೋನಾ ಸೋಂಕಿಗೆ ತಮಿಳುನಾಡು ಶಾಸಕ ಬಲಿ

Related Posts

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್
ಇದೀಗ

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

by ಪ್ರತಿಧ್ವನಿ
January 18, 2026
0

ಬೆಂಗಳೂರು : ರಾಜ್ಯದ ಅಬಕಾರಿ ಇಲಾಖೆಯಲ್ಲಿ ಕೇಳಿ ಬಂದಿರುವ ಲಂಚ ಹಗರಣದಲ್ಲಿ ಬೆಂಗಳೂರು ನಗರ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು...

Read moreDetails
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Next Post
ಕರೋನಾ ಸೋಂಕಿಗೆ ತಮಿಳುನಾಡು ಶಾಸಕ ಬಲಿ

ಕರೋನಾ ಸೋಂಕಿಗೆ ತಮಿಳುನಾಡು ಶಾಸಕ ಬಲಿ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada