ಕಾಂಗ್ರೆಸ್ ಜಾಹಿರಾತಿಗೆ ಬಿಜೆಪಿ ಜಾಹಿರಾತು ಮೂಲಕವೇ ಕೌಂಟರ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಸದ್ಯ ಅಷ್ಟು ಎಚ್ಚರಿಕೆ ಆಗಿದೆಯಲ್ಲ, ಚೊಂಬಿನಿಂದ ಎಂದು ವ್ಯಂಗ್ಯವಾಡಿದ್ದು, ಮಾಜಿ ಪ್ರಧಾನಿ ದೇವೇಗೌಡರೇ ಖಾಲಿ ಚೊಂಬು ತೋರಿಸಿ, ನಿಮ್ಮಿಂದ ಅನ್ಯಾಯ ಆಯ್ತು ನಮ್ಮ ರಾಜ್ಯಕ್ಕೆ. ನಮಗೆ ಮಾತನಾಡುವುದಕ್ಕೆ ಶಕ್ತಿ ಇಲ್ಲ ಅಂತ ದೇವೇಗೌಡ್ರು ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ ಎಂದಿದ್ದಾರೆ.
ಅವರು ಸಾರ್ವಜನಿಕರಿಗೆ ಏನು ಬೇಕಾದ್ರು ಹೇಳಬಹುದು. ಈ ಹಿಂದೆ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ದೇವೇಗೌಡರು, ಕುಮಾರಸ್ವಾಮಿ ಭಾಷಣ ಮಾಡಿದ್ರು. ನಾವು ಕೂಡ ಪ್ರಶ್ನೆ ಕೇಳಿದ್ದೇವೆ. ಎರಡನ್ನೂ ಯೋಚನೆ ಮಾಡುವ ಶಕ್ತಿ ಜನರಿಗಿದೆ ಎಂದಿದ್ದಾರೆ.
ಚೊಂಬಲ್ಲಿ ಬಂದಿದ್ಯಲ್ಲ 15 ಲಕ್ಷ ಹಣ, ನಮ್ಮ ಕಾರ್ಯಕರ್ತರು, ನಮ್ಮ ನಾಯಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಉದ್ಯೋಗ ಕೊಡುವ ಬಗ್ಗೆ ಖಾಲಿ ಚೆಂಬು ಕೊಟ್ಟಿದ್ದಾರೆ. ಅದನ್ನು ಬಿಟ್ಟು ಬೇರೆ ರೀತಿ ಮಾತನಾಡುವುದು ಎಷ್ಟು ಸರಿ ಎಂದಿದ್ದಾರೆ.
ಬಿಜೆಪಿಯ ಚಿಪ್ಪು ಅಭಿಯಾನ ವಿಚಾರಕ್ಕೆ ಉತ್ತರಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಯಾವ ಚಿಪ್ಪು..? ಕನ್ನಡ ಬಾವುಟ ಹಿಡಿದವರು ನಾವು, ಕನ್ನಡಿಗರ ಹಕ್ಕು ಕೇಳಿರುವವರು ನಾವು, ನಾವು ನಮ್ಮ ತೆರಿಗೆ ನಮ್ಮ ಹಕ್ಕು ಕೇಳಿದ್ದೇವೆ ಎಂದಿದ್ದಾರೆ.
ಇನ್ನು ಮುಸ್ಲಿಂ ತುಷ್ಟೀಕರಣದ ಆರೋಪಕ್ಕೆ ತಿರುಗೇಟು ಕೊಟ್ಟಿದ್ದು, ನಮ್ಮದು ಶಾಂತಿಯ ತೋಟ, ಅವರು ಮುಸ್ಲಿಂ ಬಾಂಧವರಿಗೆ ಮಾನಸಿಕವಾಗಿ ಹಿಂಸೆ ಕೊಡ್ತಿದ್ದಾರೆ. ದೇಶದಿಂದ ಓಡಿ ಹೋಗಬೇಕು ಅಂತಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ.
ನಾವು ಯಾವುದೇ ಕ್ರಿಮಿನಲ್ ಆಕ್ಟಿವಿಟಿಸ್ಗೆ ಉತ್ತೇಜನ ಕೊಡಲ್ಲ, ರಾಜ್ಯವನ್ನು ಶಾಂತಿಯಿಂದ ನಡೆಸಿಕೊಂಡು ಹೋಗುತ್ತೇವೆ ಎಂದಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಟಾಂಗ್ ಕೊಟ್ಟಿರುವ ಡಿಸಿಎಂ ಅವರಿಗೆ ಬೇರೆ ಯಾವುದೇ ವಿಚಾರ ಇಲ್ಲ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲ್ ಆಗಿದೆ, ದೊಡ್ಡ ಇಂಜಿನ್ ಕೂಡ ಫೇಲ್ ಆಗಲಿದೆ ಎನ್ನುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.01:54 PM