ಸುಮಾರು ಮೂರು ವಾರಗಳ ಹಿಂದೆ ಅಮೇರಿಕಾದ ವೈಟ್‌ಹೌಸ್‌ನ ಅಧಿಕೃತ ಟ್ವಿಟರ್ ಖಾತೆಯಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಹಾಗೂ ಭಾರತ ಪ್ರಧಾನಿಯವರ ಅಧಿಕೃತ ಟ್ವಿಟರ್ ಖಾತೆಯನ್ನು ಫಾಲೋ ಮಾಡಿದ ವಿಷಯ ಭಾರಿ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಕೇವಲ ಮೂರು ವಾರಗಳ ನಂತರ ಇವರೆಲ್ಲರ ಟ್ವಟರ್ ಖಾತೆಯನ್ನು ಅನ್‌ಫಾಲೋ ಮಾಡಿ ಮತ್ತೆ ವೈಟ್‌ಹೌಸ್ ಸುದ್ದಿಯಲ್ಲಿದೆ.
ಇವರಷ್ಟೇ ಅಲ್ಲದೇ, ಬಹುತೇಕ ಟ್ವಿಟರ್ ಖಾತೆಗಳನ್ನು ಫಾಲೋವರ್ಸ್ ಲಿಸ್ಟ್‌ನಿಂದ ಅನ್‌ಫಾಲೋ ಮಾಡಿರುವ ವೈಟ್‌ಹೌಸ್, ಯಾವ ಕಾರಣಕ್ಕಾಗಿ ಈ ರೀತಿ ಮಾಡಿದೆ ಎನ್ನುವ ಕುರಿತು ಪ್ರಶ್ನೆಗಳು ಎದ್ದಿವೆ. ಈವರೆಗೆ 19 ಜನರನ್ನು ಫಾಲೋ ಮಾಡುತ್ತಿದ್ದ ವೈಟ್‌ಹೌಸ್ ಟ್ವಿಟರ್ ಖಾತೆ ಇಂದು ಕೇವಲ 13 ಜನರನ್ನು ಮಾತ್ರ ಫಾಲೋ ಮಾಡುತ್ತಿದೆ.

ಇನ್ನೂ ಆಶ್ಚರ್ಯಕರ ಸುದ್ದಿಯೆಂದರೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅನ್‌ಫಾಲೋ ಮಾಡಿದ್ದಾರೆ. ಈ ವಿದ್ಯಾಮಾನಗಳ ಕುರಿತಾಗಿ ವಿವರಣೆ ನೀಡಬೇಕೆಂಬ ವಾದ ಟ್ವಿಟರ್‌ನಲ್ಲಿ ಕೇಳಿ ಬರುತ್ತಿದೆ.
Turns out, after White House, Donald Trump too has blocked/unfollowed PM Modi. What's happening here?
Govt owes an explanation to people!
— Gaurav Pandhi (@GauravPandhi) April 29, 2020
ಇನ್ನು ಕೆಲವು ಟ್ವಿಟರಾತಿಗಳು ಈ ವಿಷಯವನ್ನು ಹೈಡ್ರಾಕ್ಸಿಕ್ಲೋರೋಕ್ವಿನ್‌ನೊಂದಿಗೆ ತಳುಕು ಹಾಕಿದ್ದು, ಭಾರತವನ್ನು ಓಲೈಸಲು ಫಾಲೋ ಮಾಡುವ ಸುದ್ದಿಯನ್ನು ವೈಟ್‌ಹೌಸ್ ಹುಟ್ಟು ಹಾಕಿತು ಎಂಬ ರೀತಿಯ ವಿಶ್ಲೇಷಣೆಯನ್ನು ನಡೆಸುತ್ತಿದ್ದಾರೆ. ಇನ್ನು ಕೆಲವರು, ʼನಮಸ್ತೆ ಟ್ರಂಪ್ʼ ಕಾರ್ಯಕ್ರಮದ ನೆನಪುಗಳು ಅಳಿಸಿಹೋಗಿರಬೇಕು ಎನ್ನುವ ರೀತಿಯಲ್ಲಿ ವ್ಯಂಗ್ಯವನ್ನು ಮಾಡಿದ್ದಾರೆ.
I think they got Hydroxychloroquine from some other country now….Bye bye Modi….
— Armaan (@Armaan06738634) April 29, 2020
Howdy Modi . What happened to ” abki baar Trump Sarkar ????????????
— nirlep sohal (@dijuli22) April 29, 2020
Chronology:
Before HCQ demand : Not following
When HCQ required : following
When HCQ received : Unfollowed
My friend Mr Doland Trump— babar (@MagrayBabar) April 29, 2020