ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರೊಬ್ಬರು, ತಮ್ಮ ಭಾವಚಿತ್ರವನ್ನು ತಮ್ಮ ಒಪ್ಪಿಗೆಯಿಲ್ಲದೆ ಹೊಸ ಕೃಷಿ ಕಾನೂನುಗಳನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಬಳಸಿದ್ದಾರೆ ಎಂದು ಆರೋಪಿಸಿ ಬಿಜೆಪಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಹೋಶಿಯಾರ್ಪುರದ ನಿವಾಸಿ ಹರ್ಪ್ರೀತ್ ಸಿಂಗ್ (36) ಸೋಮವಾರ ಸಂಜೆ ಜಾಹೀರಾತಿನಲ್ಲಿ ಅವರ ಛಾಯಾಚಿತ್ರವನ್ನು ಗುರುತಿಸಿ ನೋಟಿಸ್ ಕಳುಹಿಸಿದವರು. ಬಿಜೆಪಿ ಈಗ ಜಾಹೀರಾತನ್ನು ಅಳಿಸಿದೆ ಎಂದು ಸಿಂಗ್ ಹೇಳಿದ್ದಾರೆ.
“ನನ್ನ ಛಾಯಾಚಿತ್ರವನ್ನು ಪಂಜಾಬ್ ಬಿಜೆಪಿಯ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ಜಾಹೀರಾತಿಗಾಗಿ ಬಳಸಿದ್ದಾರೆ ಎಂದು ಸ್ನೇಹಿತರೊಬ್ಬರು ನನಗೆ ಮಾಹಿತಿ ನೀಡಿದರು. ನಾನು 2014 ರಲ್ಲಿ ಒಂದು ಆರ್ಟ್ ವರ್ಕ್‌ಗಾಗಿ ತೆಗೆದ ಚಿತ್ರ, ಇದು ನನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಲಭ್ಯವಿದೆ ”ಎಂದು ನಟ ಹಾಗೂ ಚಲನಚಿತ್ರ ನಿರ್ಮಾಪಕರೂ ಆಗಿರುವ ಹರ್ಪ್ರೀತ್ ಸಿಂಗ್ ಬುಧವಾರ ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಮ್ಮ ಫೋಟೋಗಳನ್ನು ಈ ಹಿಂದೆಯೂ ಬಿಜೆಪಿ ಮತ್ತು ಇತರರು ಇತರ ವಿಷಯಗಳ ಜಾಹೀರಾತುಗಳಿಗಾಗಿ ಬಳಸಲಾಗಿತ್ತು, ಆದರೆ ಈ ಬಾರಿ ಅವರು ತಪ್ಪಾದ ವಿಷಯವನ್ನು ಉತ್ತೇಜಿಸಲು ತಮ್ಮ ಒಪ್ಪಿಗೆಯಿಲ್ಲದೆ ಬಳಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
“ಜಾಹೀರಾತಿನಲ್ಲಿ ಸಂತೋಷದ ರೈತನನ್ನು ತೋರಿಸುವ ಮೂಲಕ ಪಂಜಾಬ್‌ನ ರೈತರು ಮೂರು ಕಾನೂನುಗಳೊಂದಿಗೆ ಸಂತೋಷವಾಗಿದ್ದಾರೆಂದು ತೋರಿಸಲು ಬಿಜೆಪಿ ಪ್ರಯತ್ನಿಸಿದೆ. ಸತ್ಯವೆಂದರೆ ಪಂಜಾಬ್‌ನ ರೈತರು ಈ ಮೂರು ಕಾನೂನುಗಳ ಬಗ್ಗೆ ಸಂತೋಷವಾಗಿಲ್ಲ ಹಾಗೂ ನಿರಂತರ ಪ್ರತಿಭಟಿಸುತ್ತಿದ್ದಾರೆ ” ಎಂದು ಸಿಂಗ್ ಹೇಳಿದ್ದಾರೆ.
#MSPHaiAurRahega ಮತ್ತು #ModiWithFarmers ಎಂಬ ಹ್ಯಾಶ್‌ಟ್ಯಾಗ್ ಸಂದೇಶದ ಜೊತೆಗೆ ನಗುತ್ತಿರುವ ಸಿಂಗ್ ಅನ್ನು ಜಾಹೀರಾತು ತೋರಿಸಿದೆ. ಪಂಜಾಬಿ ಭಾಷೆಯಲ್ಲಿನ ಜಾಹೀರಾತು ಹೀಗಿದೆ: “ಈ ಋತುವಿನಲ್ಲಿ ಎಂಎಸ್‌ಪಿಯಲ್ಲಿ ಬೆಳೆಗಳನ್ನು ಖರೀದಿಸಲಾಗುತ್ತಿದೆ. ಈ ಋ ತುವಿನ ಅಕ್ಕಿಯನ್ನು ಎಂಎಸ್‌ಪಿಯಲ್ಲಿ ಖರೀದಿಸಲಾಗುತ್ತಿದೆ, ಎಂಎಸ್‌ಪಿಯಲ್ಲಿ 77,957.83 ಕೋಟಿ ಅಕ್ಕಿ ಖರೀದಿಸಲಾಗಿದೆ, ಅದರಲ್ಲಿ ಶೇಕಡಾ 49 ರಷ್ಟು ಪಂಜಾಬ್‌ನಿಂದ ಬಂದಿದೆ. ಕೆಲವು ಶಕ್ತಿಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ”
“ಕೃಷಿ ಕಾನೂನುಗಳನ್ನು ಬೆಂಬಲಿಸುವ ಸಲುವಾಗಿ ತನ್ನ ಛಾಯಾಚಿತ್ರವನ್ನು ತಪ್ಪಾಗಿ ಮತ್ತು ಒಪ್ಪಿಗೆಯಿಲ್ಲದೆ ಬಳಸಿದ್ದರಿಂದ, ತಾನು ರೈತರ ಮತ್ತು ಇತರರ ದೃಷ್ಟಿಯಲ್ಲಿ ತಪ್ಪಾಗಿ ಚಿತ್ರಿತವಾಗಿದ್ದೇನೆ. ಇದರಿಂದ ನಾನು ಭಾರಿ ಮಾನಹಾನಿಯನ್ನು ಅನುಭವಿಸಿದ್ದಾರೆ, ಇದು ನನ್ನ ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ” ಎಂದು ಬಿಜೆಪಿಗೆ ನೀಡಿದ ಕಾನೂನು ನೋಟೀಸಿನಲ್ಲಿ ಸಿಂಗ್ ಹೇಳಿದ್ದಾರೆ”.
“ನನ್ನ ಕ್ಲೈಂಟ್ ಪಂಜಾಬ್‌ನಲ್ಲಿ ಮತ್ತು ಈಗ ಸಿಂಘು ಗಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ, ಮತ್ತು ಜಾಹೀರಾತಿನಲ್ಲಿ ಬಳಸಿರುವ ಛಾಯಾಚಿತ್ರವು ಅವರು ಈ ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಿದ್ದಾರೆಂದು ತೋರಿಸುತ್ತದೆ. ಹಾಗಾಗಿ ನಾವು ಮಂಗಳವಾರ ಸಂಜೆ ಬಿಜೆಪಿ ಹೈಕಮಾಂಡ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದೇವೆ ”ಎಂದು ಹರ್ಪ್ರೀತ್ ರ ವಕೀಲ ಹಕಮ್ ಸಿಂಗ್ ತಿಳಿಸಿದ್ದಾರೆ.
via- The Print