2018ರಲ್ಲಿ ಆರಂಭಿಸಿರುವ ಪಿಎಂ-ಕಿಸಾನ್ ಯೋಜನೆಯ ಆರನೇ ಕಂತಿನ ಭಾಗವಾಗಿ ಇಂದು 8.5ಕೋಟಿಗೂ ಅಧಿಕ ರೈತರುಗಳ ಬ್ಯಾಂಕ್ ಖಾತೆಗಳಿಗೆ 17,100 ಕೋ.ರೂಪಾಯಿಗಳನ್ನು ವರ್ಗಾಯಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆ ಅಡಿ ಪ್ರತಿ ರೈತರು ಪ್ರತಿ ವರ್ಷ 6 ಸಾವಿರ ರುಪಾಯಿಗಳ ಮೊತ್ತ ಸ್ವೀಕರಿಸಲಿದ್ದಾರೆ. ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿರುವ ಈ ಯೋಜನೆಯ ನಿಧಿಯನ್ನು ಸಂಪೂರ್ಣವಾಗಿ ಕೇಂದ್ರ ಸರಕಾರವೇ ಭರಿಸಲಿದೆ.
2018ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(ಪಿಎಂ-ಕಿಸಾನ್)ಯನ್ನು ಆರಂಭಿಸಿದ್ದರು. ಪಿಎಂ-ಕಿಸಾನ್ ಯೋಜನೆಯು 9.9 ಕೋಟಿಗೂ ಹೆಚ್ಚು ರೈತರಿಗೆ 75 ಸಾವಿರ ಕೋಟಿ ರೂಪಾಯಿಗಳ ನೇರ ನಗದು ಲಾಭವನ್ನು ಒದಗಿಸಿದೆ. ಇದು ಅವರ ಕೃಷಿ ಅವಶ್ಯಕತೆಗಳನ್ನು ಪೂರೈಸಲು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಅನುವು ಮಾಡಿಕೊಟ್ಟಿದೆ.
ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ನೆರವಾಗಲು ಸುಮಾರು 22 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಮೂಲಕ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರೈತರಿಗೆ ಬೆಂಬಲ ನೀಡುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ.













