ಕರೋನಾ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ 2020 – 21ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಯಾವ ರೀತಿ ಪೂರೈಸುವುದು ಎನ್ನುವ ಬಗ್ಗೆ ಆಲೋಚನೆಯಲ್ಲಿ ಮುಳುಗಿದೆ. ಈ ನಡುವೆ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಶೇಕಡ 30ರಷ್ಟು ಪಠ್ಯವನ್ನು ಕಡಿತ ಮಾಡುವ ಬಗ್ಗೆ ನಿರ್ಧಾರ ಹೊರ ಬಿದ್ದ ಬಳಿಕ ವಿರುದ್ಧ ರಾಜ್ಯ ಸರ್ಕಾವೂ ಅದೇ ಮಾದರಿಯನ್ನು ಅನುಸರಿಸಲು ಮುಂದಾಗಿತ್ತು. ಈ ಬಗ್ಗೆ ನಿನ್ನೆಯಷ್ಟೇ ಒಂದು ಮಾಹಿತಿ ಹೊರ ಬಿದ್ದಿತ್ತು. ಅದು ಸಾಕಷ್ಟು ಟೀಕೆಗಳಿಗೂ ಕಾರಣವಾಗಿತ್ತು. ಇದೀಗ ಸಂಪೂರ್ಣ ತಲೆಕೆಳಗಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪಠ್ಯದಲ್ಲಿ ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಪಠ್ಯ ಕೈ ಬಿಟ್ಟಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ ಗುಡುಗಿದ್ದ ಸಿದ್ದರಾಮಯ್ಯ ಸಿದ್ದರಾಮಯ್ಯ ಅಧಿಕೃತ ಸರ್ಕಾರ ದುರ್ಬಲ, ಅನಧಿಕೃತ ಸಂಘ ಸರ್ಕಾರ ಬಲವಾಗಿದೆ. ಪಠ್ಯ ಕ್ರಮಕೈ ಬಿಡಲು ಸಂಘ ಪರಿವಾರವೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು. ಪಠ್ಯ ಪುಸ್ತಕ ಕೇಸರೀಕರಣ ಆಗುತ್ತಿದ್ದು, ಸಂವಿಧಾನ ಆಶಯ ಬುಡಮೇಲು ಆಗಲಿದೆ. ಕೆಲವೊಂದು ಗುಪ್ತ ಅಜೆಂಡಾ ಅನುಷ್ಠಾನ ಆಗುತ್ತಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಹೋರಾಟ ಅನಿವಾರ್ಯ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರು.
ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ.
ಅಧಿಕೃತ ಸರ್ಕಾರ ದುರ್ಬಲಗೊಳ್ಳುತ್ತಿದೆ,
ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ.
3/1 pic.twitter.com/EQP5ZedhIL— Siddaramaiah (@siddaramaiah) July 29, 2020
ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ ಟಿಪ್ಪು ಜಯಂತಿ ಆಚರಣೆ ಮಾಡುವುದು, ಬಿಡುವುದು ಅವರಿಗೆ ಸೇರಿದ್ದು. ಆದರೆ ಪಠ್ಯಕ್ರಮದಿಂದ ಕೈಬಿಡುವುದು ಸರಿಯಲ್ಲ. ಪಠ್ಯಕ್ರಮದಿಂದ ಕೈಬಿಡದಂತೆ ಹಿಂದೆಯೂ ಒತ್ತಡ ಹಾಕಿದ್ದೆವು. ತನ್ನ ಅಜೆಂಡಾ ಈಡೇರಿಸಲು ಹೀಗೆ ಮಾಡಿದ್ದಾರೆ. ಪಠ್ಯದಿಂದ ಟಿಪ್ಪು ಪಾಠ ಕೈಬಿಟ್ಟಿದ್ದಾರೆ. ಆದರೆ ಟಿಪ್ಪು ಇತಿಹಾಸ ತಿರುಚಲು ಸಾಧ್ಯವಿಲ್ಲ. ಟಿಪ್ಪು, ಹೈದರಾಲಿ ಬಗ್ಗೆ ಬ್ರಿಟೀಷರ ಬಳಿಯೇ ದಾಖಲೆಗಳಿವೆ. ಹೋರಾಟ ಮಾಡಿದ ಬಗ್ಗೆ ದಾಖಲೆಗಳಿವೆ. ಇದು ಬಿಜೆಪಿಯವರಿಗೂ ಗೊತ್ತಿದೆ ಎಂದಿದ್ದರು. ಇನ್ನೂ ಕೆಪಿಸಿಸಿಯಿಂದಲೇ ಆಧ್ಯಯನ ಕಮಿಟಿ ರಚನೆ ಮಾಡ್ತೇವೆ. ಮುಂದಿನ ದಿನದಲ್ಲಿ ಹೋರಾಟ ಮಾಡ್ತೇವೆ. ಎಲ್ಲವನ್ನೂ ಸಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದು ಗುಡುಗಿದ್ದರು.
ಕಾಂಗ್ರೆಸ್ ಪಕ್ಷ ಸೇರಿದಂತೆ ಸಾಕಷ್ಟು ಕಡೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಉಲ್ಟಾ ಹೊಡೆದ ಶಿಕ್ಷ ಸಚಿವ ಸುರೇಶ್‌ಕುಮಾರ್, ಟಿಪ್ಪು, ಅಬ್ಬಕ್ಕ, ರಾಯಣ್ಣ ವಿಚಾರಗಳನ್ನು ಈ ಶೈಕ್ಷಣಿಕ ವರ್ಷದ ಪಠ್ಯದಿಂದ ಕಡಿತ ಮಾಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ 1 ರಿಂದ 10ನೇ ತರಗತಿ ತನಕ ಎಲ್ಲಾ ವಿಷಯಗಳ ಪಠ್ಯ ಕಡಿತಕ್ಕೆ ನಿರ್ಧಾರ ಮಾಡಲಾಗಿದೆ. ಆದರೆ ಇನ್ನೂ ಈ ಬಾರಿ ಶೈಕ್ಷಣಿಕ ವರ್ಷದ ಅವಧಿಯೇ ನಿಗದಿಯಾಗಿಲ್ಲ. ಹೀಗಾಗಿ ಪಠ್ಯಕ್ರಮ ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
10ನೇ ತರಗತಿ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸಚಿವ @nimmasuresh ಹೇಳಿದ್ದಾರೆ.
ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಂಸ್ಥೆಯೇ?
ಅದನ್ನು ತಕ್ಷಣ ವಾಪಸು ಪಡೆಯಿರಿ, ಇಲ್ಲದೆ ಇದ್ದರೆ ನಿಮ್ಮ ಪಾತ್ರ ಒಪ್ಪಿಕೊಳ್ಳಿ
2/3 pic.twitter.com/5xsQ3goZVj— Siddaramaiah (@siddaramaiah) July 29, 2020
ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ. ಶಿಕ್ಷಣ ಸಚಿವರು ಹೀಗೆ ಹೇಳುತ್ತಿದ್ದ ಹಾಗೆ ಶಿಕ್ಷಣ ಇಲಾಖೆಯೂ ಒಂದು ಸ್ಪಷ್ಟನೆ ನೀಡಿದ್ದು, ಶಿಕ್ಷಣ ಸಚಿವರ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷವನ್ನು 120 ದಿನಗಳಿಗೆ ನಿಗದಿ ಮಾಡಿ ಪಠ್ಯವನ್ನು ಕಡಿತ ಮಾಡಲಾಗಿತ್ತು ಎಂದೂ ಕೂಡ ಸ್ಪಷ್ಟ ನೀಡಿದ್ದಾರೆ.
ಕರೋನಾ ಕಾಲದಲ್ಲಿ ಶಿಕ್ಷಣ ಸಚಿವರಿಂದ ಸರಣಿ ಸುಳ್ಳು..!
ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್ ಕಾಲಘಟ್ಟದಲ್ಲಿ ಸರಣಿ ಸುಳ್ಳುಗಳನ್ನು ಹೇಳಿಕೊಳ್ಳುತ್ತಲೇ ಸಾಗಿದ್ದಾರೆ. ಮೊದಲಿಗೆ ಶಾಲೆಗಳನ್ನು ಜುಲೈ 15ರಿಂದ ಆರಂಭ ಮಾಡುವ ಬಗ್ಗೆ ಶಿಕ್ಷಣ ಇಲಾಖೆಯಿಂದಲೇ ಅಧಿಸೂಚನೆ ಹೊರಡಿಸಿದ್ದರು. ಆ ಬಳಿಕ ವಿರೋಧ ವ್ಯಕ್ತವಾದ ಬಳಿಕ ಇಲ್ಲ, ಅದು ಕೇವಲ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಸೂಚನೆ ಕೊಡಲಾಗಿದೆ ಎಂದು ಉಲ್ಟಾ ಹೊಡೆದರು. ಅದಕ್ಕೂ ಮೊದಲೂ ಫೀಸ್ ಕಲೆಕ್ಟ್ ಮಾಡುತ್ತಾ ಅಡ್ಮಿಷನ್ ಮಾಡಿಕೊಳ್ಳುತ್ತಿದ್ದ ಖಾಸಗಿ ಶಾಲಾ ಕಾಲೇಜುಗಳ ವಿರುದ್ಧ ಗುಡುಗಿದ್ದ ಶಿಕ್ಷಣ ಸಚಿವ ಯಾವುದೇ ಕಾರಣಕ್ಕೂ ಫೀಸ್ ಕಟ್ಟಿಸಿಕೊಳ್ಳಬಾರದು. ಒಂದು ವೇಳೆ ಪೋಷಕರಿಂದ ಹಣ ಕಟ್ಟಿಸಿಕೊಂಡರೆ ಮಾನ್ಯತೆ ರದ್ದು ಮಾಡಲಾಗುವುದು ಎಂದಿದ್ದರು. ಆ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದವರು ಒಮ್ಮೆ ಶಿಕ್ಷಣ ಸಚಿವರನ್ನು ಭೇಟಿಯಾದ ಬಳಿ ಫೀಸ್ ಕಲೆಕ್ಟ್ ಮಾಡಲು ಅನುಮತಿ ನೀಡಿದ್ದರು. ಒಟ್ಟಾರೆ ಸಾಕಷ್ಟು ವಿಚಾರಗಳಲ್ಲಿ ಮೊದಲು ಒಂದು ರೀತಿ ಹೇಳಿ ಆ ಬಳಿಕ ಮತ್ತೊಂದು ರೀತಿಯಲ್ಲಿ ಮಾಡುತ್ತಿರುವುದು ಮಾತ್ರ ಸತ್ಯ. ಈ ವಿಚಾರದಲ್ಲಿ ಮುಂದೇನು ಮಾಡಲಿದ್ದಾರೆ ಕಾದು ನೋಡಬೇಕು.
