ಪ್ರಶಾಂತ್ ಭೂಷಣ್ ಅವರ ವಿರುದ್ದ ಸುಪ್ರಿಂಕೋರ್ಟ್‌ನಲ್ಲಿ ಇತ್ತೀಚಿಗೆ ನಡೆದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭುಷಣ್ ಅಪರಾಧಿ ಕೋರ್ಟ್ ತೀರ್ಪು ನೀಡಿತ್ತು. ಸುಪ್ರಿಂಕೋರ್ಟ್‌ನ ನಡವಳಿಕೆ ಹಾಗೂ CJI ಎಸ್ ಎ ಬೊಬ್ಡೆ ಅವರ ವಿರುದ್ದ ಟ್ವಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಕಾರಣಕ್ಕಾಗಿ ಅವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿತ್ತು. ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ಪ್ರಶಾಂತ್ ಭೂಷಣ್ ಅವರಿಗೆ ಒಂದು ರೂಪಾಯಿ ದಂಡ ವಿಧಿಸಿತ್ತು.
Also Read: ನ್ಯಾಯಾಗ ನಿಂದನೆ ಪ್ರಕರಣ: ವಕೀಲ ಪ್ರಶಾಂತ್ ಭೂಷಣ್‌ಗೆ ರೂ. 1 ದಂಡ ವಿಧಿಸಿದ ಸುಪ್ರಿಂ
ಆದರೆ, ಈಗ ಪ್ರಶಾಂತ್ ಭೂಷಣ್ ತಮ್ಮ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಬಳಸಿಕೊಂಡು ಹೊಸ ಪೀಠದಲ್ಲಿ ಹೊಸದಾಗಿ ವಿಚಾರಣೆ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಈ ಮೂಲಕ, ಒಂದು ರೂಪಾಯಿ ದಂಡವನ್ನು ತಾನು ಕಟ್ಟುವುದಿಲ್ಲ ಎಂಬ ವಿಚಾರವನ್ನು ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.
Also Read: ನ್ಯಾಯಾಗ ನಿಂದನೆ ಪ್ರಕರಣ: ವಕೀಲ ಪ್ರಶಾಂತ್ ಭೂಷಣ್‌ಗೆ ರೂ. 1 ದಂಡ ವಿಧಿಸಿದ ಸುಪ್ರಿಂ
ಪ್ರಶಾಂತ್ ಭೂಷಣ್ ಅವರ ವಕೀಲರಾದ ಕಾಮಿನಿ ಜೈಸ್ವಾಲ್ ಅವರು ಸುಪ್ರಿಂಗೆ ನೀಡಿದ ಅರ್ಜಿಯಲ್ಲಿ “ಮೇಲ್ಮನವಿ ಸಲ್ಲಿಸುವುದು ಸಂವಿಧಾನದತ್ತ ಮೂಲಭೂತ ಹಕ್ಕು ಹಾಗೂ ಅಂತರಾಷ್ಟ್ರೀಯ ಕಾನೂನು ನಿಯಮಗಳಲ್ಲಿಯೂ ಇದು ಖಾತರಿಪಡಿಸಿದ ಹಕ್ಕಾಗಿದೆ,” ಎಂದು ಹೇಳಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಪ್ರಶ್ನಿಸಲು ಅನುಮತಿ ನೀಡಿದರೆ ಅದು ಒಂದು ತಪ್ಪು ತೀರ್ಪಿನ ವಿರುದ್ದ ಹೋರಾಡಲು ಇರುವಂತಹ ಅಸ್ತ್ರವಾಗುತ್ತದೆ. ಸತ್ಯವನ್ನು ರಕ್ಷಣಾ ಕವಚವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.
Also Read: ಪ್ರಜಾಸತ್ತೆ ಸ್ವಾಸ್ಥ್ಯ, ನ್ಯಾಯಾಂಗ ಸ್ವಾಯತ್ತತೆ ಚರ್ಚೆಗೆ ಬಿರುಸು ತಂದ ನ್ಯಾಯಾಂಗ ನಿಂದನೆ ಪ್ರಕರಣ
ಪ್ರಶಾಂತ್ ಭೂಷಣ್ ಅವರ ಅರ್ಜಿಯ ಪ್ರಮುಖ ಅಂಶಗಳೇನು?
1. 21ನೇ ವಿಧಿಯ ಉಲ್ಲಂಘನೆ:
ಸಂವಿಧಾನದ 21ನೇ ವಿಧಿಯ ಪ್ರಕಾರ ಯಾವುದೇ ಕ್ರಿಮಿನಲ್ ಕೇಸ್‌ನ ಮೂಲ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವ ಹಕ್ಕು ಪ್ರತಿಯೊಬ್ಬರಿಗಿದೆ. ಒಂದಯ ವೇಳೆ, ಆ ಅವಕಾಶವನ್ನು ನೀಡದಿದ್ದಲ್ಲಿ ಅದು 21ನೇ ವಿಧಿಯ ಉಲ್ಲಂಘನೆ ಎಂದು ಹೇಳಿದ್ದಾರೆ.
2. ಮೇಲ್ಮನವಿ ಸಲ್ಲಿಸುವ ಹಕ್ಕು:
ಅಂತರಾಷ್ಟ್ರೀಯ ನಾಗರೀಕ ಮತ್ತು ರಾಜಕೀಯ ಹಕ್ಕುಗಳ 14(5) ವಿಧಿಯ ಪ್ರಕಾರ ಮೇಲ್ಮನವಿ ಸಲ್ಲಿಸುವುದು ಒಂದು ಖಾತರೀಪಡಿಸಿದ ಹಕ್ಕಾಗಿದೆ. ಈ ಅಂತರಾಷ್ಟ್ರೀಯ ನಿಯಮಗಳನ್ನು ಭಾರತ ಅನುಸರಿಸುತ್ತಿದೆ.
Also Read: ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ ತಪ್ಪಿತಸ್ಥ ಎಂದ ಸುಪ್ರೀಂಕೋರ್ಟ್
3. ಪಕ್ಷಪಾತದ ಸಾಧ್ಯತೆ:
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿರುವ ಇಬ್ಬರು ವಾದಿಗಳ ಪೈಕಿ ಒಬ್ಬರು ಖುದ್ದು ಸುಪ್ರಿಂಕೋರ್ಟ್ ಆಗರುತ್ತದೆ. ಈ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ವಕೀಲರಾಗಿ, ಸಾಕ್ಷಿಗಳಾಗಿ ಹಾಗೂ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಚಾರವು ಪಕ್ಷಪಾತದ ಸಾಧ್ಯತೆಯನ್ನು ಪುಷ್ಟೀಕರಿಸುತ್ತದೆ. ಒಂದೇ ಪ್ರಕರಣದಲ್ಲಿ ಒಬ್ಬರು ವಾದಿಯಾಗಿಯೂ, ನ್ಯಾಯವಾದಿಯಾಗಿಯೂ ಇರಲು ಸಾಧ್ಯವಿಲ್ಲ. ಹಾಗಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು.
Also Read: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದ ಗಾಂಧಿ ಹೇಳಿಕೆ!
ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಶಾಂತ್ ಭೂಷಣ್ ಅವರು ಸುಪ್ರಿಂ ಮೊರೆ ಹೋಗಿದ್ದು, ನ್ಯಾಯಂಗ ನಿಂದನೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ವಾಕ್ ಸ್ವಾತಂತ್ರ್ಯ ಹಾಗೂ ನ್ಯಾಯಾಂಗ ನಿಂದನೆ ವಿಚಾರದ ಚರ್ಚೆ ವಿಸ್ತೃತವಾಗಿ ನಡೆಯಲು ಹೊಸ ಪೀಠದ ರಚನೆ ಮಾಡಲು ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರಿಂ ನಿರ್ದೇಶನ ನೀಡಿತ್ತು. ಈಗ ಮತ್ತೊಮ್ಮೆ ವಾಕ್ ಸ್ವಾತಂತ್ರ್ಯದ ಚರ್ಚೆಗಳು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.
Also Read: ಪ್ರಶಾಂತ್ ಭೂಷಣ್ ವಿರುದ್ದ ಸುಪ್ರಿಂ ಕೋರ್ಟ್ ನಿರ್ಧಾರ ದುರದೃಷ್ಟಕರ: ಎಸ್ ಆರ್ ಹಿರೇಮಠ












