ಭಾರತದೊಂದಿಗೆ ಗಡಿ ತಕರಾರು ಎತ್ತಿರುವ ನೇಪಾಳ ಬಿಹಾರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯನೊಬ್ಬನನ್ನು ಬಲಿ ಪಡೆದುಕೊಂಡಿತ್ತು. ನೇಪಾಳ ಚೀನಾದ ಕುಮ್ಮಕ್ಕಿನೊಂದಿಗೆ ಭಾರತದೊಂದಿಗೆ ಜಗಳಕ್ಕೆ ನಿಂತಿದೆ. ಅದಕ್ಕೆ ಪೂರಕವೆಂಬಂತೆ ಚೀನಾ ಈಗಾಗಲೇ ಲಢಾಕ್ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಭಾಗವನ್ನು ಅತಿಕ್ರಮಿಸಿಕೊಂಡಿದೆ. ಶನಿವಾರ ಭಾರತದ ಪ್ರದೇಶವನ್ನು ತನ್ನ ನಕ್ಷೆಯಲ್ಲಿ ಅಳವಡಿಸಿ ನೇಪಾಳ, ಸಂಸತಿನಲ್ಲಿ ಮಸೂದೆ ಅಂಗೀಕರಿಸಿತ್ತು.
ಈ ನಡುವೆ ಭಾರತದ ಸಾಮಾಜಿಕ ಜಾಲತಾಣ ಬಳಕೆದಾರರು ಚೀನಾ ವಸ್ತುವನ್ನು ಬಹಿಷ್ಕರಿಸುವಂತೆ ಪತಂಜಲಿಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ನೇಪಾಳ ಮೂಲದವರೆಂದು, ಅವರ ಷೇರು ಮೌಲ್ಯ ಹೆಚ್ಚಿರುವ ಪತಂಜಲಿ ಕಂಪೆನಿಯ ಉತ್ಮನ್ನಗಳನ್ನು ಭಾರತದಲ್ಲಿ ಬಹಿಷ್ಕರಿಸಬೇಕೆಂದು ಭಾರತೀಯರು ಜಾಲತಾಣದಲ್ಲಿ ಆಂದೋಲನ ಶುರುವಿಟ್ಟಿದ್ದಾರೆ.
ನೇಪಾಳದ ಮೂಲದ ಆಚಾರ್ಯ ನಕಲಿ ದಾಖಲೆಯೊಂದಿಗೆ ಭಾರತದ ಪಾಸ್‌ಪೋರ್ಟ್ ಪಡೆದಿದ್ದರೆಂದು 2011 ರಲ್ಲಿ ಸಿಬಿಐ ತನಿಖಾ ಸಂಸ್ಥೆ ಆಚಾರ್ಯರ ಮೇಲೆ ಆರೋಪ ಹೊರಿಸಿ ತನಿಖೆ ಮಾಡಿತ್ತು. ಈ ಆರೋಪದ ಆಧಾರದ ಮೇಲೆ ಆಚಾರ್ಯರನ್ನು ನೇಪಾಳ ಸಂಜಾತ ಎಂದು ಭಾರತೀಯರು ಅವರ ಕಂಪೆನಿಯ ಉತ್ಪನ್ನಗಳನ್ನು ಬಹಿಷ್ಕರಿಸಿ ನೇಪಾಳದೊಂದಿಗಿನ ತಮ್ಮ ಕೋಪವನ್ನು ಪ್ರಕಟಿಸುತ್ತಿದ್ದಾರೆ.
How is Patanjali's 98.6% shareholder Balkrishna an Indian citizen when his parents are Nepalese citizens still living in Nepal? Why no #BoycottPatanjali call in a week when Nepal has shot & killed Indians at border & Nepal govt issued official map showing parts of India as Nepal?
— Garga Chatterjee (@GargaC) June 13, 2020
ಈ ನಡುವೆ ಪತಂಜಲಿ ಕೋವಿಡ್-19 ಗೆ ಆಯುರ್ವೇದ ಮದ್ದು ಎಂದು ಫೇಕ್ ಔಷಧಿಗಳನ್ನು ಮಾರುತ್ತಿದೆ. ಅದಕ್ಕಾಗಿ ಆಚಾರ್ಯರನ್ನು ಬಂಧಿಸಬೇಕೆಂದೂ ಕೂಗು ಏಳುತ್ತಿದೆ. ಅಲ್ಲದೆ ಪತಂಜಲಿ ಉತ್ಪನ್ನಗಳಿಗೆ ಬಳಸುವ ಕೆಲವು ಕಚ್ಛಾ ವಸ್ತುಗಳು ಚೀನಾದಿಂದ ಆಮದಾಗುತ್ತಿದೆ ಎಂದು ಆರೋಪವಿದೆ.
In any civilized country, this guy would be immediately arrested for selling fake medicine at the time of a pandemic! pic.twitter.com/Xlj2dEr2kD
— Ashok Swain (@ashoswai) June 13, 2020