1936 ಫೆಬ್ರವರಿ 5 ರಂದು ಆಗಿನ ಮೈಸೂರು ಪ್ರಾಂತ್ಯದ ದೇವನಹಳ್ಳಿಯಲ್ಲಿ ಜನಿಸಿದ ಕೆ. ಎಸ್. ನಿಸಾರ್ ಅಹಮದ್ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧಿ ಹೊಂದಿದವರು.
ರಾಜ್ಯೋತ್ಸವ ಪ್ರಶಸ್ತಿ, ಪಂಪ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
‘ಮನಸು ಗಾಂಧಿ ಬಝಾರು’, ‘ನಿತ್ಯೋತ್ಸವ’ , ‘ಮನದೊಂದಿಗೆ ಮಾತುಕತೆ’ ಹಾಗೂ ‘ಸಂಜೆ ಐದರ ಮಳೆ’ ಮೊದಲಾದ ಪ್ರಸಿದ್ಧ ಕೃತಿ.

ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷದ ಹಿರಿಯ ಕವಿ ಇಂದು (ಮೇ 3) ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಗಣ್ಯರನೇಕರು ನಿಸಾರ್ ಅಹಮದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ತನ್ನ ಟ್ವೀಟ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಮನಸು ಗಾಂಧಿಬಜಾರು ಕವನ ಸಂಕಲನ, ಬೆಣ್ಣೆ ಕದ್ದ ನಮ್ಮ ಕೃಷ್ಣದಂತಹ ಕವನ ನಮಗೆ ಕೊಟ್ಟು, ಜೋಗದ ಸಿರಿ ಬೆಳಕಿನ ಮೂಲಕ ನಿತ್ಯೋತ್ಸವವನ್ನು ವರ್ಣಿಸಿದ ಶ್ರೇಷ್ಠ ಕವಿ ಕೆ.ಎಸ್ ನಿಸಾರ್ ಅಹಮದ್ ಅವರ ನಿಧನದ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ.
ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ,ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ pic.twitter.com/1g83l3MPbR
— C T Ravi ಸಿ ಟಿ ರವಿ (@CTRavi_BJP) May 3, 2020