• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಧ್ವೇಷ ಭಾಷಣ: ಬಿಜೆಪಿ ಶಾಸಕ ರಾಜಾಸಿಂಗ್‌ ಖಾತೆಯನ್ನು ರದ್ದುಗೊಳಿಸಿದ ಫೇಸ್‌ಬುಕ್

by
September 3, 2020
in ದೇಶ
0
ಧ್ವೇಷ ಭಾಷಣ: ಬಿಜೆಪಿ ಶಾಸಕ ರಾಜಾಸಿಂಗ್‌ ಖಾತೆಯನ್ನು ರದ್ದುಗೊಳಿಸಿದ ಫೇಸ್‌ಬುಕ್
Share on WhatsAppShare on FacebookShare on Telegram

ಭಾರತದಲ್ಲಿ ಫೇಸ್‌ಬುಕ್‌ ರಾಜಕೀಯ ಪಕ್ಷಗಳೊಳಗೆ ಪಕ್ಷಪಾತ ನಡೆಸುತ್ತಿದೆ ಎಂಬ ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣ ದಿಗ್ಗಜ ಸಂಸ್ಥೆ ಫೇಸ್‌ಬುಕ್‌ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾರ ಫೇಸ್‌ಬುಕ್‌ ಖಾತೆಯನ್ನು ವಜಾಗೊಳಿಸಿದೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಟಿ. ರಾಜಾ ಸೇರಿದಂತೆ ಹಲವು ಹಿಂದುತ್ವ ಹಾಗೂ ಬಿಜೆಪಿ ನಾಯಕರ ಧ್ವೇಷ ಭಾಷಣವನ್ನು ತಡೆಹಿಡಿಯದಂತೆ ಫೇಸ್‌ಬುಕ್‌ ಭಾರತದ ಎಕ್ಸಿಕ್ಯೂಟಿವ್‌ ಅಂಖಿ ದಾಸ್‌ ಹೇಗೆ ಪ್ರಭಾವ ಬೀರಿದ್ದರು ಎಂಬ WSJಯ (The Wall Street Journal) ತನಿಖಾ ವರದಿ ಬಂದ ಬಳಿಕ ಫೇಸ್‌ಬುಕ್‌ ಈ ಕ್ರಮ ತೆಗೆದುಕೊಂಡಿದೆ.

“ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಧ್ವೇಷ ಹರಡುವುದನ್ನು ನಿಷೇಧಿಸುತ್ತೇವೆ ಹಾಗಾಗಿ ನಾವು ರಾಜಾ ಸಿಂಗ್ ಅವರನ್ನು ಫೇಸ್‌ಬುಕ್‌ನಿಂದ ನಿಷೇಧಿಸಿದ್ದೇವೆ, ಅವರು ನಮ್ಮ ನೀತಿ& ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಂಭಾವ್ಯ ಉಲ್ಲಂಘಿಸುವವರನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯು ವಿಸ್ತಾರವಾಗಿದೆ ಮತ್ತು ಇದು ಈ ನಿರ್ಧಾರಕ್ಕೆ ಬರಲು ನಮ್ಮನ್ನು ಕರೆದೊಯ್ಯಿತು” ಎಂದು ಫೇಸ್‌ಬುಕ್ ವಕ್ತಾರರು WSJ ಗೆ ತಿಳಿಸಿದ್ದಾರೆ.

ವರದಿಯ ಪ್ರಕಾರ ಆತನಿಗೆ ಸೇರಿರುವ 5 ಖಾತೆಗಳನ್ನು ಫೇಸ್‌ಬುಕ್‌ ವಜಾಗೊಳಿಸಿದೆ, ಅಲ್ಲದೆ ಇನ್ಸ್ಟಗ್ರಾಮ್‌ ಖಾತೆಯನ್ನೂ ರದ್ದುಗೊಳಿಸಲಾಗಿದೆ.

ತೆಲಂಗಾಣದ ಘೋಷ್‌ಮಹಲ್‌ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಮೂಲಕ ಪ್ರತಿನಿಧಿಸುವ‌ ರೌಡಿಶೀಟರ್ ರಾಜಾಸಿಂಗ್‌ ಮೇಲೆ 60 ಕ್ಕಿಂತಲೂ ಹೆಚ್ಚು ಪ್ರಕರಣಗಳಿವೆ. ಅದರಲ್ಲಿ ಬಹುತೇಕ ಪ್ರಕರಣಗಳಿರುವುದು ಧ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ.

ಧ್ವೇಷ ಭಾಷಣಕ್ಕೆ ಕುಖ್ಯಾತಿ ಈ ರಾಜಾ ಸಿಂಗ್

ಜುಲೈ 2018 ರಲ್ಲಿ ಟಿ ರಾಜಾ ಸಿಂಗ್ ರೋಹಿಂಗ್ಯಾ ಮುಸ್ಲಿಮರನ್ನು “ಕೀಟಗಳು” ಎಂದು ಕರೆದಿದ್ದರು.“ರೋಹಿಂಗ್ಯಾ ಮುಸ್ಲಿಮರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಬೇಕು. ಇಂತಹ ಕೀಟಗಳನ್ನು ಭಾರತದಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಹಿಂತಿರುಗದ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳನ್ನು ಗುಂಡಿಕ್ಕಿ ಕೊಲ್ಲಬೇಕು.” ಎಂದಿದ್ದರು.

Also Read: ಫೇಸ್ಬುಕ್-ಬಿಜೆಪಿ ಒಳ ಒಪ್ಪಂದ: ತನಿಖೆಯ ಬೇಡಿಕೆಯನ್ನು ಮತ್ತೆ ಮುಂದಿಟ್ಟ ಕಾಂಗ್ರೆಸ್

2018 ಜನವರಿಯಲ್ಲಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್‌ ಬಿಡುಗಡೆಯಾದ ಸಂಧರ್ಭದಲ್ಲಿ ಚಲನಚಿತ್ರ ಮಂದಿರಗಳನ್ನು ಬೆಂಕಿ ಹಾಕಿ ನಾಶಗೊಳಿಸುವಂತೆ ಪ್ರಚೋದನಾತ್ಮಕ ಭಾಷಣ ಮಾಡಿದ್ದರು.

2017 ರಲ್ಲಿ, ಪಶ್ಚಿಮ ಬಂಗಾಳದಲ್ಲಿ ಕೋಮು ಸಂಘರ್ಷದ ಮಧ್ಯೆ, ರಾಜಾ ಸಿಂಗ್ ಅವರು 2002 ರ ಗುಜರಾತ್ ಗಲಭೆಯನ್ನು ಪ್ರಸ್ತಾಪಿಸಿದ್ದರು ಮತ್ತು ಹಿಂದೂಗಳು ಹಿಂದೆಯೇ ಮಾಡಿದ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಕರೆ ನೀಡಿದ್ದರು. ಗುಜರಾತ್‌ ಗಲಭೆಯ ಸಂಧರ್ಭದಲ್ಲಿ ಅಲ್ಲಿನ ಹಿಂದೂಗಳು ಮಾಡಿದಂತೆ ಬಂಗಾಳದ ಹುಲಿಗಳು ಮಾಡಬೇಕು ಎಂದು ಉದ್ರೇಕಕಾರಿ ಕರೆ ನೀಡಿದ್ದರು.

ವಿಶೇಷವೆಂದರೆ, ರಾಜಾ ಸಿಂಗ್ ಅವರು ಇತ್ತೀಚೆಗೆ ಅಧಿಕೃತ ಫೇಸ್‌ಬುಕ್ ಪುಟವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದು, ಅವರ ಖಾತೆಯನ್ನು 2018 ರಲ್ಲಿ “ಹ್ಯಾಕ್ ಮಾಡಲಾಗಿದೆ ಮತ್ತು ನಿರ್ಬಂಧಿಸಲಾಗಿದೆ” ಎಂದು ಸೇರಿಸಿದ್ದಾರೆ

Also Read: ಬಿಜೆಪಿ ಗೆಲುವು ಸಮಾಜವಾದಿ ರಾಷ್ಟ್ರ ಎಂಬ ಕಳಂಕ ತೊಳೆಯಿತು ಎಂದಿದ್ದ ಅಂಖೀ ದಾಸ್!

Tags: ತೆಲಂಗಾಣಧ್ವೇಷ ಭಾಷಣಫೇಸ್ಬುಕ್ಬಿಜೆಪಿರಾಜಾ ಸಿಂಗ್‌
Previous Post

ವಲಸೆ ಕಾರ್ಮಿಕರನ್ನು ತಲುಪದ ಆತ್ಮನಿರ್ಭರ್ ಭಾರತ ಯೋಜನೆ

Next Post

ಹಿಂದುತ್ವ ಕಾರ್ಯಕರ್ತರ ಕೇಸ್‌ ವಾಪಸ್:‌ ʼಹೋರಾಟಗಾರʼರಿಗೆ ಹೊಸ ವ್ಯಾಖ್ಯಾನ ನೀಡಿದ ಸರ್ಕಾರ

Related Posts

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ
Top Story

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

by ಪ್ರತಿಧ್ವನಿ
August 20, 2026
0

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ ದೆಹಲಿಯಲ್ಲಿ ನಿಧನರಾದರು. https://youtu.be/Ah4XCyz6goI?si=e8Kk4S1jxvCTF1TS ತಿಹಾರ್...

Read moreDetails
ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

August 20, 2026
‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

August 20, 2026
ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

August 20, 2026
ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

August 19, 2026
Next Post
ಹಿಂದುತ್ವ ಕಾರ್ಯಕರ್ತರ ಕೇಸ್‌ ವಾಪಸ್:‌ ʼಹೋರಾಟಗಾರʼರಿಗೆ ಹೊಸ ವ್ಯಾಖ್ಯಾನ ನೀಡಿದ ಸರ್ಕಾರ

ಹಿಂದುತ್ವ ಕಾರ್ಯಕರ್ತರ ಕೇಸ್‌ ವಾಪಸ್:‌ ʼಹೋರಾಟಗಾರʼರಿಗೆ ಹೊಸ ವ್ಯಾಖ್ಯಾನ ನೀಡಿದ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada