ಕರ್ನಾಟಕದಲ್ಲಿ ಇಂದು ಕರೋನಾ ಸೋಂಕಿನಿಂದ 164 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ ಸೋಂಕಿನಿಂದ 2,605 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೋಂಡಿದ್ದಾರೆಂದಿ ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.
ಜೂನ್ 08 ರ ಸಂಜೆ 5 ರಿಂದ ಜೂನಗ 9 ಸಂಜೆ 5 ರವರೆಗೆ ಹೊಸ 164 ಕರೋನಾ ಪ್ರಕರಣಗಳಜು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 5921 ಕರೋನಾ ಪ್ರಕರಣಗಳು ಇದುವರೆಗೂ ದಾಖಲಾಗಿದೆ. ಸದ್ಯ ರಾಜ್ಯದಲ್ಲಿ 3248 ಸಕ್ರಿಯ ಕರೋನಾ ಪ್ರಕರಣಗಳಿದ್ದು, 12 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಇಂದು ಕರೋನಾ ಸೋಂಕಿಗೆ ತುತ್ತಾಗಿದ್ದ 17 ವರ್ಷದ ಬಾಲಕಿ ಹಾಗೂ 65 ವರ್ಷದ ವ್ಯಕ್ತಿ ಬಲಿಯಾಗಿದ್ದು ಇದುವರೆಗೂ ರಾಜ್ಯದಲ್ಲಿ 66 ಮಂದಿ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ದೇಶಾದ್ಯಂತ 9,983 ಹೊಸ ಕರೋನಾ ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 67 ಸಾವಿರ ದಾಟಿದೆ. ದೇಶಾದ್ಯಂತ 1 ಲಕ್ಷದ 29 ಸಾವಿರ ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದು ಇದುವರೆಗೂ 7,466 ಮಂದಿ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.