ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೇರೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಅಧಿಕಾರ ಹಿಡಿಯುವ ಕಸರತ್ತು ನಡೆಸಿದ್ದಾರೆ. ಆದರೆ ಟೈಮ್ಸ್ ನಡೆಸಿರುವ ಮತದಾನಪೂರ್ವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅದೆಷ್ಟೇ ಅಬ್ಬರಿಸಿ ಬೊಬ್ಬಿರಿದರೂ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಣಿಸಲು ಸಾಧ್ಯವಿಲ್ಲ ಎನ್ನುವ ವರದಿ ಕಮಲಪಾಳಯದ ನಿದ್ರೆಗೆಡಿಸಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಕೇವಲ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಕಮಲ ಪಾಳಯ ಈ ಬಾರಿ 10 ರಿಂದ 14 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿರುವುದು ಕೊಂಚ ಸಮಾಧಾನದ ವಿಚಾರವಾಗಿದೆ. ಆಮ್ ಆದ್ಮಿ ಪಾರ್ಟಿ 54 – 60 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ: ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡ 20% ಅಭ್ಯರ್ಥಿಗಳು
ವಿಶೇಷ ಎಂದರೆ ಲೋಕಸಭಾ ಚುನಾವಣೆ ಈಗ ನಡೆದರೂ ಬಿಜೆಪಿ ಏಳು ಸ್ಥಾನಗಳ ಪೈಕಿ ಏಳರಲ್ಲೂ ಗೆಲ್ಲಲಿದೆ ಎಂದಿರುವ ಸಮೀಕ್ಷೆ, ಆಮ್ ಆದ್ಮಿ ಪಾರ್ಟಿ ಶೇಕಡ 52ರಷ್ಟು ಮತಗಳಿಕೆ ಮಾಡಲಿದ್ದು, ಬಿಜೆಪಿ ಶೇಕಡ 34 ರಷ್ಟು ಮತ ಗಳಿಸಲಿದೆ. ಈ ಬಾರಿ ಆಮ್ ಆದ್ಮಿ ಪಾರ್ಟಿ 2.5 ರಷ್ಟು ಶೇಕಡವಾರು ಮತಗಳನ್ನು ಕಳೆದುಕೊಳ್ಳಲಿದ್ದು, ಬಿಜೆಪಿ ಶೇಕಡ 1.7ರಷ್ಟು ಮತಗಳನ್ನು ಹೆಚ್ಚುವರಿಯಾಗಿ ಗಳಿಸಲಿದೆ ಎನ್ನುವ ವರದಿ ಬಂದಿದೆ. ಈ ವರದಿ ಬೆನ್ನಲ್ಲೇ ಬಿಜೆಪಿ ಅರವಿಂದ್ ಕೇಜ್ರಿವಾಲ್ ಗುರಿಯಾಗಿಸಿ ಮಾತಿನ ಯುದ್ಧವನ್ನೇ ಶುರು ಮಾಡಿದೆ. ಯಮುನಾ ನದಿ ಕ್ಲೀನ್ ಆಗಿದೆ ಎಂದು ಹೇಳುವ ಅರವಿಂದ್ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಹಾಗು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೀತಿ ಯಮುನಾ ನದಿಯ ನೀರನ್ನು ಒಮ್ಮೆ ಟೇಸ್ಟ್ ಮಾಡಲಿ ಎಂದು ಸವಾಲು ಹಾಕಿದ್ದರು. ಅಮಿತ್ ಷಾ ಸವಾಲಿಗೆ ಪ್ರತಿ ಸವಾಲು ಎಸೆದಿರುವ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದಿದ್ದಾರೆ.
ಇದನ್ನೂ ಓದಿ: ಉಗ್ರಗಾಮಿ ಹಾಗೂ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ : ಬಿಜೆಪಿ
ಕಾಂಗ್ರೆಸ್ ಕೂಡ ಗೆಲುವಿಗೆ ಭಾರೀ ಕರಸತ್ತು ನಡೆಸುತ್ತಿದ್ದು ನರೇಂದ್ರ ಮೋದಿ ತಾಜ್ ಮಹಲ್ ಮಾರಾಟ ಮಾಡಿದರೂ ಅಚ್ಚರಿಯಿಲ್ಲ ಎಂದು ರಾಹುಲ್ ಗಾಂಧಿ ಬಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಎನ್ನುವ ಅದ್ಬುತ ಆಲೋಚನೆಯನ್ನ ಘೋಷಣೆ ಮಾಡಿದರು. ಆದರೆ ಇಲ್ಲೀವರೆಗೆಗೂ ಒಂದೇ ಒಂದು ಫ್ಯಾಕ್ಟರಿ ನಿರ್ಮಾಣ ಮಾಡಲಿಲ್ಲ. ಬದಲಿಗೆ ದೇಶದ ಸರ್ಕಾರಿ ಸಾಮ್ಯದ ಕಂಪನಿಗಳು ಮಾರುತ್ತಾ ಬಂದಿದ್ದಾರೆ. ಇಂಡಿಯನ್ ಆಯಿಲ್, ಏರ್ ಇಂಡಿಯಾ, ಹಿಂದೂಸ್ತಾನ್ ಪೆಟ್ರೋಲಿಯಂ, ರೈಲ್ವೆ ಬೇಕಿದ್ರೆ ರೆಡ್ ಪೋರ್ಟ್ ಕೂಡ ಮಾರಾಟ ಮಾಡ್ತಾರೆ. ಇಷ್ಟೆಲ್ಲಾ ಯಾಕೆ ಆಗ್ರಾದ ತಾಜ್ ಮಹಲ್ ಮಾರಾಟ ಮಾಡಲು ಮೋದಿ ಹಿಂದೆ ಸರಿಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಏರ್‌ಪೋರ್ಟ್ ಹಾಗು ಬಂದರುಗಳನ್ನು ಅದಾನಿಗೆ ಕೊಟ್ಟಿದ್ದಾರೆ. ಇನ್ಮುಂದೆ ನರೇಂದ್ರ ಮೋದಿ ಸರ್ಕಾರ ಅಲ್ಲ, ಅದಾನಿ, ಅಂಬಾನಿ ಸರ್ಕಾರ ಬರೋದು ಬಾಕಿ ಇದೆ. ಕೇವಲ 15 ಮಂದಿ ದೊಡ್ಡ ದೊಡ್ಡವರಿಗೆ ಮಾತ್ರ ಸರ್ಕಾರದಿಂದ ಅನುಕೂಲ ಆಗಲಿದೆ ಎಂದು ಟ್ವೀಟ್ ಮಾಡುವ ಮೂಲಕ ದೆಹಲಿ ಕಾಂಗ್ರೆಸ್ ಬಿಜೆಪಿಯನ್ನು ಕಿಚಾಯಿಸಿದೆ.
ಈ ನಡುವೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಬ್ಬರಿಸಲು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಜಾಮಿಯಾ ಪ್ರತಿಭಟನಾಕಾರರ ಮೇಲೆ ನಡೆದ ಫೈರಿಂಗ್ ಬಗ್ಗೆ ಅಬ್ಬರದ ಪ್ರಚಾರ ನಡೆಸಿದ್ದ ಅರವಿಂದ್ ಕೇಜ್ರಿವಾಲ್‌ಗೆ ಮೋದಿ ಸರ್ಕಾರ ಹೆದರಿಸುವ ಕೆಲಸ ಮಾಡ್ತಿದೆ. ಆದರೆ ದೆಹಲಿ ಮತದಾರರು ಇದಕ್ಕೆಲ್ಲಾ ಹೆದರುವುದಿಲ್ಲ ಎಂದಿದ್ದರು. ಇದೀಗ ದೆಹಲಿಯ ಶಾಹೀನ್ ಬಾಗ್‌ನ ಪ್ರತಿಭಟನೆ ವೇಳೆ ಫೈರಿಂಗ್ ಮಾಡಿದ್ದ ಯುವಕ ಕಪಿಲ್ ಗುರ್ಜಾರ್ ಕಳೆದ ವರ್ಷ ಆಮ್ ಆದ್ಮಿ ಪಾರ್ಟಿ ಸೆರ್ಪಡೆ ಆಗಿದ್ದ ಎನ್ನುವ ಅಂಶವನ್ನು ಪೊಲೀಸರು ತೆರೆದಿಟ್ಟಿದ್ದಾರೆ. ನಾವು ಈ ಫೋಟೋಗಳನ್ನು ನಾವು ಕಪಿಲ್ ಗುರ್ಜಾರ್ ಮೊಬೈಲ್‌ನಿಂದ ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ. ದೆಹಲಿ ಪೊಲೀಸರ ಹೇಳಿಕೆಯನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಾರ್ಟಿ, ಶಾಹೀನ್ ಬಾಗ್‌ನಲ್ಲಿ ಫೈರಿಂಗ್ ನಡೆಸಿದ ಆರೋಪಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಜೊತೆಗೆ ಈ ದೇಶದ ಗೃಹಮಂತ್ರಿ ಆಗಿರುವ ಅಮಿತ್ ಷಾ, ದೆಹಲಿ ಚುನಾವಣೆಗೆ ಮೂರ್ನಾಲ್ಕು ದಿನಗಳಿರುವಾಗ ಈ ರೀತಿಯ ಕುತಂತ್ರ ಮಾಡಿದ್ದಾರೆ. ಇದು ಬಿಜೆಪಿ ಕೊಳಕು ರಾಜಕೀಯ ಎಂದು ಟೀಕಿಸಿದೆ. 2008ರಲ್ಲಿ ನನ್ನ ಸಹೋದರ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು. ಆದರೆ ಆಮ್ ಆದ್ಮಿ ಪಾರ್ಟಿ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಆರೋಪಿಯ ಚಿಕ್ಕಪ್ಪ ಫತೇಶ್ ಸಿಂಗ್ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಮತಕ್ಕಾಗಿ ಬಿಜೆಪಿ ಈ ರೀತಿಯ ಫೋಟೋ ಸೃಷ್ಟಿಸಿದೆಯಾ ಅನ್ನೋ ಅನುಮಾನ ಮೂಡಿಸುತ್ತಿದೆ.