
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಕೆಲವೆಡೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ. ತುರ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ನಗರದ ಜಯದೇವ ಉಪವಿಭಾಗದ ವಿವಿಧ ಪ್ರದೇಶಗಳು ಸೇರಿದಂತೆ ಕೆಲವೆಡೆ ಬೆಳಗ್ಗೆ 10 ರಿಂದ 5ರವರೆಗೆ ವಿದ್ಯುತ್ ವ್ಯತಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಡಿ. 28 ರಂದು ಜಯನಗರ ಮತ್ತು ನಾರಾಯಣನಗರದ ಕೆಲವು ವಾರ್ಡ್ಗಳಲ್ಲಿ ವಿದ್ಯುತ್ ವ್ಯತಯವಾಗುವ ಸಾಧ್ಯತೆಯಿದೆ. ಡಿ .29 ರಂದು ದೊಡ್ಡಕಲ್ಲಸಂದ್ರ, ಶ್ರಾವಂತಿ ಕಲ್ಯಾಣಮಂಟಪ, ಡಿ.30 ನಮ್ಮೂರ ಹೋಟೆಲ್ ಸುತ್ತಮುತ್ತ ಪ್ರದೇಶಗಳು, ಡಿ.31 ರಂದು ಲಕ್ಷೀ ವಿಲಾಸ್ ಬ್ಯಾಂಕ್, ಶಂಕರ ಪೌಂಡೇಷನ್, ದೊಡ್ಡಕಲ್ಲ ಸಂದ್ರ, ಜನವರಿ 2 ರಂದು ರಾಜನಂದಿ ಆಸ್ಪತ್ರೆ, ಜ.3 ದೇವೇಂದ್ರಪ್ಪ ಮತ್ತು ಗ್ಲಾಸ್ ಕಾರ್ಖಾನೆ ಸುತ್ತಮುತ್ತ ಪ್ರದೇಶದಲ್ಲಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.

ಈ ಮೇಲಿನ ಸ್ಥಳಗಳಲ್ಲಿ ಮಾತ್ರವಲ್ಲದೆ ನಗರದ ಇನ್ನೂ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಕಂಡು ಬರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎನ್ಎಸ್ ಪಾಳ್ಯ ಇಂಡಸ್ಟ್ರಿಯಲ್ ಏರಿಯಾ, ಬಿಟಿಎಂ ಲೇಔಟಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಸಹಕರಿಸ ಬೇಕೆಂದು ಬೆಸ್ಕಾಂ ವಿನಂತಿಸಿದೆ.
ಗ್ರಾಹಕರೆ,
3 ನೇ ಬ್ಲಾಕ್ 1 ನೇ ಹಂತ ಎಚ್ ಬಿ ಆರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಅಂದಾಜು ಪುನಃಸ್ಥಾಪನೆ ಸಮಯ 17:00 ಗಂಟೆ 24.12.2020
ಅನಾನುಕೂಲತೆಗಾಗೆ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಿ.
— @NammaBESCOM (@NammaBESCOM) December 24, 2020
ಗ್ರಾಹಕರೆ,
ಎಸ್ ಆರ್ ನಗರ, ವಿಲ್ಸನ್ ಗಾರ್ಡನ್, ಶಾಂತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಅಂದಾಜು ಪುನಃಸ್ಥಾಪನೆ ಸಮಯ 17:15 ಗಂಟೆ 24.12.2020
ಅನಾನುಕೂಲತೆಗಾಗೆ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಿ.
— @NammaBESCOM (@NammaBESCOM) December 24, 2020
ಗ್ರಾಹಕರೆ,
ಅಮೃತ್ ನಗರ, ಪೊಲೀಸ್ ಠಾಣೆ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಅಂದಾಜು ಪುನಃಸ್ಥಾಪನೆ ಸಮಯ 17:00 ಗಂಟೆ 24.12.2020
ಅನಾನುಕೂಲತೆಗಾಗೆ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಿ.
— @NammaBESCOM (@NammaBESCOM) December 24, 2020












