ಲಾಕ್‌ಡೌನ್ ಹಿನ್ನಲೆಯಲ್ಲಿ ಮುಂಬೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಸಹಾಯ ಮಾಡಿದ್ದ ಖ್ಯಾತ ಖಳ ನಟ ಸೋನ್ ಸೂದ್ ಸೂಪರ್ ಹೀರೋ ಆಗಿ ಬಿಂಬಿತಗೊಂಡಿದ್ದಾರೆ.
ಊರಿಗೆ ತೆರಳಲು ಸೋನು ಸೂದ್ ನಿಂದ ಸಹಾಯ ಪಡೆದಿದ್ದ ಗರ್ಭಿಣಿಯೊಬ್ಬರು ತಮ್ಮೂರಿಗೆ ತಲುಪಿದ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ಹಾಗೂ ತಮ್ಮ ಮನಸಿನಲ್ಲಿ ನಟನ ಮೇಲೆ ಮೂಡಿದ್ದ ಅಭಿಮಾನ ವ್ಯಕ್ತ ಪಡಿಸಲು ಸಹಾಯ ಪಡೆದುಕೊಂಡಿದ ಮಹಿಳೆಯ ಕುಟುಂಬ ತನ್ನ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ನಾಮಕರಣ ಮಾಡಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಲಾಕ್‌ಡೌನ್ ಹಿನ್ನಲೆಯಲ್ಲಿ ಬಾಕಿಯಾಗಿದ್ದ 100ಕ್ಕೂ ಹೆಚ್ಚು ಹುಡುಗಿಯರನ್ನು ಭುವನೇಶ್ವರದಲ್ಲಿದ್ದ ತಮ್ಮ ಕುಟುಂಬಗಳಿಗೆ ಸೇರಿಕೊಳ್ಳಲು ಬೆಂಗಳೂರಿನಿಂದ ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದರು. ತಮ್ಮಿಂದ ಸಹಾಯ ಪಡೆದುಕೊಂಡವರು ಈ ರೀತಿ ಕೃತಜ್ಞತೆ ಸಲ್ಲಿಸಿರುವುದು ಕಂಡು ಸೋನು ಸೂದ್‌ರ ಮನಸ್ಸು ತುಂಬಿ ಬಂದಿದೆ.
ಕಳೆದ ವಾರ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಸೋನು ಸೂದ್ ಉಚಿತ ಸಹಾಯವಾಣಿ ಆರಂಭಿಸದ್ದರು.











