ಅರುಣಾಚಲ ಪ್ರದೇಶ ಚೀನಾ ದೇಶಕ್ಕೆ ಅಂಟಿಕೊಂಡಂತೆ ಕಾಣುವ ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮ ಖಂಡು. ತಮ್ಮ ಕ್ಷೇತ್ರದ ಜನರನ್ನು ಭೇಟಿ ಮಾಡುವ ಉದ್ದೇಶದಿಂದ ಬರೋಬ್ಬರಿ 24 ಕಿಲೋಮೀಟರ್ ಕಾಡುಮೇಡುಗಳನ್ನು ಸುತ್ತಿಕೊಂಡು 11 ಗಂಟೆಗಳ ಪ್ರಯಾಣ ಮಾಡಿದ್ದಾರೆ. ಅದರಲ್ಲೂ ಅರಣ್ಯದೊಳಗೆ ಕಾಲ್ನಡಿಗೆಯಲ್ಲೇ ಸಾಗಿರುವುದು ವಿಶೇಷ.
ತವಾಂಗ್ ಜಿಲ್ಲೆಯ ನೊಮಾಡಿಕ್ ಗ್ರಾಮ ಸಮುದ್ರ ಮಟ್ಟದಿಂದ 14,500 ಅಡಿಗಳಷ್ಟು ಎತ್ತರದಲ್ಲಿರುವ ಜಾಗದಲ್ಲಿ ಕೇವಲ 10 ಕುಟುಂಬಗಳ 50 ಮಂದಿ ಬೌದ್ಧ ಧರ್ಮದ ಜನರು ಮಾತ್ರ ವಾಸ ಮಾಡುತ್ತಾರೆ. 16 ಸಾವಿರ ಅಡಿಗಳ ಎತ್ತರದಲ್ಲಿರುವ ಕರ್ಪು-ಲಾ ಶಿಖರವನ್ನು ಏರಿ ಹೋಗಿದ್ದು, ಜೀವನದ ಅವಿಸ್ಮರಣೀಯ ಎಂದು ತಮ್ಮ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಹಾಗೂ ಫೋಟೋ ವಿಡಿಯೋಗಳನ್ನು ಹಾಕುವ ಮೂಲಕ ತಮ್ಮ ಮಾತಿಗೆ ಸಾಕ್ಷೀಕರಿಸಿದ್ದಾರೆ.
A 24 Kms trek, 11 hours of fresh air & Mother Nature at her best; crossing Karpu-La (16000 ft) to Luguthang (14500 ft) in Tawang district. A paradise untouched. @PMOIndia @HMOIndia @DefenceMinIndia @MDoNER_India @KirenRijiju @TapirGao @RebiaNabam @ChownaMeinBJP @TseringTashis pic.twitter.com/Jxh4Ymtv8K
— Pema Khandu པདྨ་མཁའ་འགྲོ་། (@PemaKhanduBJP) September 10, 2020
“ಜೀವನವು ಒಂದು ಅವಕಾಶ ಕೊಡುತ್ತದೆ. ಆ ದಿನವನ್ನು ನಾವು ಬಳಸಿಕೊಳ್ಳಬೇಕು. ಪ್ರತಿದಿನ ನಾವು ಬದುಕುತ್ತೇವೆ. ಜೀವನವು ಒಂದು ಯೋಜನೆಯಲ್ಲ, ಆನಂದಿಸಬೇಕಾದ ಪ್ರಯಾಣ ಎಂದು ಕ್ಯಾಥರೀನ್ ಪುಲ್ಸಿಫರ್ ಮಾತನ್ನು ಪೇಮಾ ಖಂಡು ಉಲ್ಲೇಖಿಸಿದ್ದಾರೆ. ಇಂಡೋ-ಚೀನಾ ಗಡಿಯಲ್ಲಿರುವ ತವಾಂಗ್ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಚಾರಣ ಮಾಡಿ ಅಲೆಮಾರಿ ಜನಾಂಗ ಭೇಟಿ ಮಾಡಿದ್ದಾರೆ. ಲುಂಗುಥಾನ್ ಗ್ರಾಮ ಈ ಜನರು ಬೌದ್ಧಧರ್ಮದ ಅನುಯಾಯಿಗಳಾಗಿದ್ದು ಲುಂಗುಥಾನ್ ಗ್ರಾಮದಲ್ಲಿ ಬುದ್ಧ ಸ್ತೂಪವನ್ನು ನಿರ್ಮಿಸಿದ್ದರು. ಮುಖ್ಯಮಂತ್ರಿ ಪೆಮಾ ಖಂಡುವಿನ ತಂದೆ ಆಗಿರುವ ಮಾಜಿ ಮುಖ್ಯಮಂತ್ರಿ ಡೊರ್ಗೆ ಖಂಡು ನೆನಪಿಗಾಗಿ ಜಂಗ್ಸಾಬ್ ಸ್ತೂಪವನ್ನು ನಿರ್ಮಿಸಲಾಗಿದೆ. ಸ್ತೂಪವನ್ನು ಉದ್ಘಾಟಿಸಲು ಮತ್ತು ಜನರನ್ನು ಭೇಟಿ ಮಾಡಿ ಅವರ ಜೀವನ ಪರಿಸ್ಥಿತಿಗಳ ಬಗ್ಗೆ ತಿಳುದುಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಪಾದಯಾತ್ರೆ ಮೂಲಕ ಕುಗ್ರಾಮಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
163 ಕೋಟಿ ಮೌಲ್ಯದ ಘೋಷಿತ ಆಸ್ತಿಯನ್ನು ಹೊಂದಿರುವ ಪೆಮಾ ಖಂಡು ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೂ ಭಾರತ-ಚೀನಾ ಗಡಿಯಲ್ಲಿರುವ ಈ ಹಳ್ಳಿಗೆ ಚಾರಣ ಮೂಲಕ ಪ್ರಯಾಸಕರವಾದ ಚಾರಣ ಮಾಡಿದ್ದಾರೆ. ಬಳಿಕ ಈ ಪ್ರದೇಶವು ಯಾರೂ ಸ್ಪರ್ಶಿಸದೇ ಇರುವಂತಹ ಸ್ವರ್ಗವೆಂದು ಉಲ್ಲೇಖಿಸಿದ್ದಾರೆ. ಪ್ರಕೃತಿಯು ಸಾಕಷ್ಟು ತಾಜಾ ಗಾಳಿಯಿಂದ ತುಂಬಿರುತ್ತೆ,
ಸರ್ಕಾರ ಘೋಷಣೆ ಮಾಡುವ ಪ್ರತಿ ಕಾರ್ಯಕ್ರಮದ ಪ್ರಯೋಜನಗಳು ಕೊನೆಯ ಮನುಷ್ಯನ ತನಕ ತಲುಪುತ್ತದೆಯೇ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ಲುಗುಥಾಂಗ್ ಗ್ರಾಮಸ್ಥರೊಂದಿಗೆ ವಿಮರ್ಶೆ ಸಭೆ ನಡೆಸಿದ್ದಾರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು. ನೈಸರ್ಗಿಕ ಸರೋವರಗಳನ್ನು ದಾಟಿಕೊಂಡು ಮುಖ್ಯಮಂತ್ರಿ, ತವಾಂಗ್ ಶಾಸಕ ತ್ಸೆರಿಂಗ್ ತಾಶಿ ಮತ್ತು ತವಾಂಗ್ ಮಠದ ಗ್ರಾಮಸ್ಥರು ಮತ್ತು ಸನ್ಯಾಸಿಗಳು ಯಾತ್ರೆ ಮಾಡಿದ್ದಾರೆ. ಮುಖ್ಯಮಂತ್ರಿ ಗ್ರಾಮಸ್ಥರ ಮನೆಯಲ್ಲಿ ಎರಡು ರಾತ್ರಿಗಳನ್ನು ಕಳೆದಿದ್ದಾರೆ.