ಗದಗ:-ಮಹಾಮಾರಿ ಡೆಂಘೀಗೆ ಐದು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ.ಬೆಡ್ ಇಲ್ಲದೇ ಎರಡು ಗಂಟೆ ಮಗು ನರಳಾಟ ಮಾಡಿದ್ದು, ಅಡ್ಮಿಟ್ ಮಾಡಿಕೊಳ್ಳಲು ಸಹ ಜಿಲ್ಲಾ ಆಸ್ಪತ್ರೆ ವೈದ್ಯರು ಹಿಂದೇಟು ಹಾಕಿದ್ದರು. ಬೆಡ್ ಇಲ್ಲ ಬೇರೆ ಕಡೆ ಹೋಗಿ ಅಂತ ಹೇಳಿದ್ರು. ಎರಡು ಗಂಟೆ ಬಳಿಕ ಅಡ್ಮಿಟ್ ಮಾಡಿಕೊಂಡರೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಒಂದೇ ಇದೆ ಅಂತ ಐಸಿಯುನಲ್ಲಿ ಚಿಕಿತ್ಸೆ ನೀಡಲಿಲ್ಲ. ಆಕ್ಸಿಜನ್ ಸಹ ಹಚ್ಚದೇ ನಿರ್ಲಕ್ಷ್ಯ ತೋರಿದರುಕೇವಲ ಪಿಜಿ ಡಾಕ್ಟರ್ ಗಳಿಂದ ಮಾತ್ರವೇ ಚಿಕಿತ್ಸೆ ನೀಡಿದರು . ತಜ್ಞ ವೈದ್ಯರು ಒಂದೇ ಒಂದು ಬಾರಿ ಬಂದು ಚಿಕಿತ್ಸೆ ನೀಡಿಲ್ಲ ಎಂದು ಗದಗ ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಮಗು ತಂದೆ ತಾಯಿ ಸಾಲು ಸಾಲು ಆರೋಪ ಮಾಡಿದ್ದಾರೆ.ಮಗುವಿನ ಮನೆಯಲ್ಲಿ ತಂದೆ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ತಾಲೂಕಿನ ಶಿರುಂಜ ಗ್ರಾಮದ ಐದು ವರ್ಷದ ಮಗು ಸಾವನ್ನಪ್ಪಿತ್ತು. ಚಿರಾಯಿ ಮಂಜುನಾಥ ಹೊಸಮನಿ 5 ವರ್ಷದ ಮಗು ಸಾವನ್ನಪ್ಪಿತ್ತು. ಘಟನೆ ಹಿನ್ನೆಲೆ ತಂದೆ ಮಂಜುನಾಥ ಹೊಸಮನಿ ತಾಯಿ ಸುಜಾತಾ ಕಣ್ಣೀರು ಹಾಕಿದ್ದಾರೆ. ಮೂವರು ಮಕ್ಕಳಲ್ಲಿ ಚಿರಾಯು ಮಾತ್ರ ಗಂಡು ಮಗನಾಗಿದ್ದ ಎನ್ನಲಾಗಿದೆ.
ಕೇಂದ್ರ ಹಣಕಾಸು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರೆ ಹೇಗೆ? ಸಿಎಂ ಪ್ರಶ್ನೆ
ರಾಜ್ಯಕ್ಕೆ ನಬಾರ್ಡ್ ನೀಡುವ ಸಾಲದಲ್ಲಿ ಇಳಿಕೆ: ರಾಜ್ಯದ ರೈತರಿಗೆ ಮಾಡುತ್ತಿರುವ ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ, ನವೆಂಬರ್ 21: ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ...
Read moreDetails