• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಜೀವ ವೈವಿಧ್ಯತೆಗೆ ಮಾರಕವಾದ ಕೃತಕ ಅರಣ್ಯದ ಅಗತ್ಯವಿದೆಯೇ?

by
January 8, 2020
in ದೇಶ
0
ಜೀವ ವೈವಿಧ್ಯತೆಗೆ ಮಾರಕವಾದ ಕೃತಕ ಅರಣ್ಯದ ಅಗತ್ಯವಿದೆಯೇ?
Share on WhatsAppShare on FacebookShare on Telegram

ದೇಶದ ರಾಜಧಾನಿ ದೆಹಲಿಯಿಂದ 750 ಮೈಲು ದೂರ ಹಚ್ಚ ಹಸಿರಿನ ಹುಲ್ಲುಗಾವಲಿನ ನಡುವೆ ಹೊಸದಾಗಿ ನೆಟ್ಟ ಸಸಿಗಳು ಕಣ್ ಸೆಳೆಯುತ್ತವೆ. ದೇಶದ ಇಂಗಾಲದ ಹೊರಸೂಸುವಿಕೆಯನ್ನು 2030ರ ಒಳಗೆ ಗಮನಾರ್ಹವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ತೇಗದ ಸಸಿಗಳನ್ನು ನೆಡುವ ಅಭಿಯಾನವೊಂದು ಸದ್ದಿಲ್ಲದೆ ಸಾಗಿದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಯಾವುದೇ ಸರಕಾರಿ ಅಥವಾ ಖಾಸಗಿ ಸಂಘಟನೆಗಳು ದೇಶದ ಯಾವುದೇ ಭಾಗದಲ್ಲಿ ಹೊಸ ಕಾಡು ಸೃಷ್ಟಿಸುವ ಅಭಿಯಾನದ ಭಾಗವಾಗಿ ಅಂಬಗಡ್ ಚೌಕಿ ಅರಣ್ಯ ಪ್ರದೇಶದಲ್ಲಿ ತೇಗದ ನವ ಚಿಗುರು ನಳನಳಿಸುತ್ತಿದೆ.

ADVERTISEMENT

ಆದರೆ, ಒಂದು ವ್ಯವಸ್ಥಿತವಾದ ರೀತಿಯಲ್ಲಿ ಸರ್ಕಾರ ಯೋಜನೆಯನ್ನು ರೂಪಿಸದಿದ್ದರೆ ವಿರೋಧವನ್ನು ಕಟ್ಟಿಕೊಳ್ಳುವುದು ಖಚಿತ ಎಂಬುದನ್ನು ಈ ಹೊಸ ಅರಣ್ಯ ಸೃಷ್ಟಿಯು ಸ್ಪಷ್ಟ ಉದಾಹರಣೆಯಾಗಿದೆ.

ದೇಶದ ರಾಜಧಾನಿಯಾಗಿರುವ ದೆಹಲಿ ವರ್ಷವಿಡೀ ವಾಯು ಮಾಲಿನ್ಯದಿಂದ ತತ್ತರಿಸಿ ಹೋಗುತ್ತಿದೆ. ಈ ವಾಯು ಮಾಲಿನ್ಯವನ್ನು ತಡೆಯಲು ಸರ್ಕಾರ ಅತಿಯಾದ ವಾಹನಗಳ ಸಂಚಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಸುತ್ತಿರುವ ಎಲ್ಲಾ ರೀತಿಯ ಸರ್ಕಸ್ ವಿಫಲವಾಗುತ್ತಿದೆ.

ದೆಹಲಿಯ ದಕ್ಷಿಣ ಭಾಗದಲ್ಲಿ 750 ಮೈಲುಗಳ ದೂರ ಎಲ್ಲಿ ನೋಡಿದರೂ ಭೂಮಿ ಹಚ್ಚ ಹಸಿರಿನ ಸೀರೆಯನ್ನುಟ್ಟಂತೆ ಕಾಣುತ್ತಿದೆ. ಈಗ ಅಂಬಗಡ್ ಚೌಕಿ ಅರಣ್ಯ ವಲಯದಲ್ಲಿ ಲಕ್ಷಾಂತರ ಗಿಡವಾಗಿರುವ ಹಸಿರಿನಿಂದ ಕಂಗೊಳಿಸುತ್ತಿರುವ ತೇಗದ ಮರಗಳು ದೊಡ್ಡ ಮಟ್ಟಕ್ಕೆ ಬೆಳೆದರೆ ದೇಶದ ಸುಸ್ಥಿರತೆಗೆ ಕಾರಣವಾಗಬಲ್ಲವು. ಆದರೆ, ಈ ಯೋಜನೆ ಬಗ್ಗೆ ಇಲ್ಲಿನ ಮೂಲನಿವಾಸಿಗಳೆನಿಸಿಕೊಂಡಿರುವ ಆದಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಿವಾಸಿಗಳ ಪ್ರಕಾರ ಇಲ್ಲಿ ಅವರು ತಲೆತಲಾಂತರದಿಂದ ನೆಲೆಸಿದ್ದಾರೆ. ಈಗ ಕೃತಕ ಕಾಡು ಸೃಷ್ಟಿ ಮಾಡುವ ಸಲುವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ, ನಮಗೂ ಕಾಡಿಗೂ ಭಾವನಾತ್ಮಕ ಸಂಬಂಧವಿದೆ. ಇಲ್ಲಿ ಸಸಿಗಳನ್ನು ನೆಡುವ ಮೂಲಕ ನಮ್ಮ ಮೂಲಕ್ಕೇ ಕೊಡಲಿ ಪೆಟ್ಟು ಕೊಡಲಾಗುತ್ತಿದೆ. ಈ ಕೃತಕ ಕಾಡುಗಳು ಪರಿಸರಕ್ಕೆ ನೈಸರ್ಗಿಕ ಕಾಡಿನಷ್ಟು ಕೊಡುಗೆಯನ್ನು ನೀಡುವುದಿಲ್ಲ.

ಈ ಕಾರಣದಿಂದಲೇ ಆದಿವಾಸಿಗಳು ಇಂತಹ ಕೃತಕ ಕಾಡಿನ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಇಲ್ಲಿ ಕೇವಲ ತೇಗದ ಸಸಿಗಳನ್ನು ನೆಡಲಾಗುತ್ತಿದೆ. ಈ ಮೂಲಕ ವೈವಿಧ್ಯಮಯವಾದ ಕಾಡಿನಲ್ಲಿ ಏಕಸಂಸ್ಕೃತಿ ಅಥವಾ ಏಕ ಪ್ರಬೇಧವನ್ನು ಬೆಳೆಸಿದಂತಾಗುತ್ತದೆ. ಇದರಿಂದ ನೈಸರ್ಗಿಕ ಅರಣ್ಯದ ಸಂಸ್ಕೃತಿಯನ್ನೇ ನಾಶ ಮಾಡಲು ಹೊರಟಿದೆ ಸರ್ಕಾರ ಎಂದು ಆರೋಪಿಸುತ್ತಾರೆ ಅರಣ್ಯ ಪ್ರದೇಶದ ವಾಸಿ ನೇತಿ ಬಾಯ್ ಯಾದವ್.

ಸರ್ಕಾರ ಉದ್ದೇಶಪೂರ್ವಕವಾಗಿಯೇ ವ್ಯಾವಹಾರಿಕವಾಗಿ ಲಾಭದಾಯಕವಾದ ಗಿಡಗಳನ್ನು ನೆಡಲು ಹೊರಟಿದೆಯೇ ಹೊರತು ಪರಿಸರಕ್ಕೆ ಅನುಕೂಲವಾಗುವಂತಹ ಯಾವುದೇ ಕ್ರಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ತೇಗದ ಸಸಿಯನ್ನು ನೆಟ್ಟರೆ ಇದರ ಬೇರು ಸಾಕಷ್ಟು ಸ್ಥಳವನ್ನು ಆವರಿಸಿಕೊಳ್ಳುತ್ತದೆ. ಈ ಸಸಿ ದೊಡ್ಡದಾಗಿ ಬೆಳೆದ ನಂತರ ಅದರ ಸುತ್ತಮುತ್ತ ಯಾವುದೇ ಗಿಡ ಬೆಳೆಯಲು ಅವಕಾಶವೇ ಇರುವುದಿಲ್ಲ. ಇದರ ಪರಿಣಾಮ ಹಸಿರು ಸಸ್ಯಗಳನ್ನೇ ನೆಚ್ಚಿಕೊಂಡಿರುವ ಅನೇಕ ಪ್ರಾಣಿಪಕ್ಷಿಗಳು ಕಾಡನ್ನೇ ತೊರೆಯುವಂತಹ ಪರಿಸ್ಥಿತಿ ಎದುರಾಗುತ್ತದೆ. ಇದರ ಜತೆಗೆ ಅರಣ್ಯದ ಜೀವವೈವಿಧ್ಯತೆಗೆ ಭಾರೀ ಹಾನಿ ಉಂಟಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ಅರಣ್ಯ ಪ್ರದೇಶದಲ್ಲಿ ಯಾದವ್ ಅವರ ಕುಟುಂಬ 200 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಜೀವನ ಸಾಗಿಸುತ್ತಿದೆ. ಅರಣ್ಯದಲ್ಲಿ ಬೆಳೆಯುವ ಬಿದಿರಿನಂತಹ ಉತ್ಪನ್ನಗಳನ್ನೇ ಮನೆ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳುತ್ತಿದೆ ಈ ಸಮುದಾಯ. ಆದರೆ, ತೇಗದ ಮರಗಳನ್ನು ಕಡಿದು ವಾಣಿಜ್ಯಿಕವಾಗಿ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಕೇವಲ ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ ಎನ್ನುತ್ತಾರೆ ಯಾದವ್.

ಇನ್ನು ಸರ್ಕಾರ ಜಾರಿಗೆ ತಂದಿರುವ ಕೃತಕ ಅರಣ್ಯ ಬೆಳೆಸುವುದು ಅಥವಾ ಸಸಿಗಳನ್ನು ನೆಡುವ ಯೋಜನೆಯ ಯಾವುದೇ ವೈಜ್ಞಾನಿಕ ಅಂಶಗಳನ್ನು ಪಾಲಿಸಿಯೇ ಇಲ್ಲ. ಸಸಿಗಳನ್ನು ನೆಡುವುದಷ್ಟೇ ಈ ಕಾರ್ಯಕ್ರಮ ಎಂದು ಭಾವಿಸಿದಂತಿದೆ. ಏಕೆಂದರೆ, ಸರ್ಕಾರ ಆಯ್ಕೆ ಮಾಡಿಕೊಂಡಿರುವ ಸಸಿಗಳು ಹೇಗೆ ಜೀವವೈವಿಧ್ಯತೆಗೆ ಪೂರಕವಾಗಿವೆ ಎಂಬುದರ ಆಲೋಚನೆಯನ್ನೇ ಸರ್ಕಾರ ಮಾಡಿದಂತಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಹುಲುಸಾಗಿ ಬೆಳೆದರೆ ಸಾಕು ಎಂಬಂತಿರುವ ಸಸಿಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದೆ.

ಉದಾಹರಣೆಗೆ ನೀಲಗಿರಿ ಸಸಿಗಳನ್ನು ಎಲ್ಲೆಡೆ ನೆಡಲಾಗುತ್ತಿದೆ. ಇವು ಕಾರ್ಬನ್ ಪ್ರಮಾಣವನ್ನು ಹೀರಿಕೊಳ್ಳಲು ಸಹಕಾರಿಯಾಗುತ್ತವೆ ಎಂಬ ವಾದವನ್ನು ಮಂಡಿಸಿದರೂ ಸಹ, ಅಂತರ್ಜಲ ಮಟ್ಟವನ್ನು ಕಸಿದುಕೊಳ್ಳುತ್ತವೆ ಎಂಬುದೂ ಅಷ್ಟೇ ನಿರ್ವಿವಾದವಾಗಿದೆ. ಇದರಿಂದ ಬೇಸಿಗೆ ಸಮಯದಲ್ಲಿ ನೀರಿಗಾಗಿ ಹಾಹಾಕಾರವಾಗಲು ಈ ನೀಲಗಿರಿಯೂ ಕಾರಣವಾಗಬಲ್ಲದು ಎನ್ನುತ್ತಾರೆ ವರ್ಜೀನಿಯಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಸ್ಟೆಫೈನ್ ರಾಯ್.

ಚತ್ತೀಸ್ ಘಡದ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಮಂಡಳಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ವಿ.ಶ್ರೀನಿವಾಸರಾವ್ ಅವರು, ನಮ್ಮ ಉದ್ದೇಶ ಅರಣ್ಯವನ್ನು ನಿರ್ವಹಣೆ ಮಾಡಿ ಅದನ್ನು ಸಂರಕ್ಷಿಸುವುದಾಗಿದೆ ಮತ್ತು ಭವಿಷ್ಯದ ಪರಿಸರವನ್ನು ಉತ್ತಮಗೊಳಿಸುವುದಾಗಿದೆ. ಆದರೆ, ಕೇಂದ್ರ ಸರ್ಕಾರ ಇಂತಹ ಅರಣ್ಯ ಪ್ರದೇಶಗಳಿಂದ ಲಾಭವನ್ನು ಅಥವಾ ಆದಾಯವನ್ನು ನಿರೀಕ್ಷಿಸಬಾರದು ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆದಿವಾಸಿಗಳು ಹೇಳುವಂತೆ ಅರಣ್ಯದ ಜೀವವೈವಿಧ್ಯತೆಗೆ ಮಾರಕವಾಗಿರುವ ಮತ್ತು ಲಾಭದ ದೃಷ್ಟಿಯಿಂದ ನೋಡುವ ಇಂತಹ ಯೋಜನೆಗಳನ್ನು ಜಾರಿಗೆ ತರುವ ಬದಲು ಸರ್ಕಾರ ಅರಣ್ಯವನ್ನು ಬೆಳೆಸಿ, ಸಂರಕ್ಷಿಸಿ ಪರಿಸರಕ್ಕೆ ನೆರವಾಗುವಂತಹ ಕಾರ್ಯಕ್ರಮವನ್ನು ರೂಪಿಸಬೇಕಿದೆ.

Tags: Capital of IndiaDelhiForest DepartmentNew PlantationTribesWild Lifeಅರಣ್ಯ ಇಲಾಖೆಆದಿವಾಸಿಗಳುಕೃತಕ ಕಾಡುತೇಗದ ಸಸಿಗಳುದೆಹಲಿದೇಶದ ರಾಜಧಾನಿವನ್ಯಜೀವಿಗಳುಹೊಸ ಸಸಿಗಳು
Previous Post

ನೀರಿಗಾಗಿ ಬರುವ ಒಂಟೆಗಳ ಹತ್ಯೆಗೆ ಆದೇಶ!

Next Post

ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Related Posts

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
0

ನವದೆಹಲಿ: ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ...

Read moreDetails
400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

February 1, 2026
Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

February 1, 2026
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

February 1, 2026
Next Post
ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ

ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Please login to join discussion

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
Top Story

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

by ಪ್ರತಿಧ್ವನಿ
February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
Top Story

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

February 1, 2026
ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada