ಜಾಗತಿಕ ಸ್ಮಾರ್ಟ್‌ಸಿಟಿಗಳ ಪಟ್ಟಿಯಲ್ಲಿ ಭಾರತದ ನಾಲ್ಕು ನಗರಗಳು ಗಣನೀಯ ಕುಸಿತ ಕಂಡಿವೆ. ನವದೆಹಲಿ, ಮುಂಬಯಿ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ರ‍್ಯಾಂಕಿಂಗ್ ಕುಸಿತ ಕಂಡಿದೆ. ಈ ಪಟ್ಟಿಯಲ್ಲಿ ಸಿಂಗಾಪುರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
2019ರ ಸ್ಮಾರ್ಟ್‌ಸಿಟಿ ರ್ಯಾಂಕಿಂಗ್ ಪ್ರಕಾರ ಹೈದರಾಬಾದ್ 67ನೇ ಸ್ಥಾನದಲ್ಲಿತ್ತು. ನವದೆಹಲಿ 68 ಮತ್ತು ಮುಂಬಯಿ 78ನೇ ಸ್ಥಾನದಲ್ಲಿತ್ತು. ಬೆಂಗಳೂರು ನಗರವು 79ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಆದರೆ, ಪಟ್ಟಿಯಲ್ಲಿ ಕುಸಿತ ಕಂಡ ನಂತರ ಹೈದರಾಬಾದ್ 85, ನವದೆಹಲಿ 86, ಮುಂಬಯಿ 93 ಮತ್ತು ಬೆಂಗಳೂರು 95ನೇ ಪಟ್ಟಿಯಲ್ಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The Institute of Management Developent (IMD) ಮತ್ತು ಸಿಂಗಾಪುರ್ ಟೆಕ್ನಾಜಿ ಮತ್ತು ಡಿಸೈನ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯ ಪ್ರಕಾರ 2020ರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಸಂಕಷ್ಟದಲ್ಲಿ ತಂತ್ರಜ್ಞಾನದ ಬಳಕೆಯನ್ನು ಯಾವ ರೀತಿ ಮಾಡಲಾಗಿದೆ ಎಂಬ ವಿಚಾರವನ್ನು ಪ್ರಮುಖವಾಗಿ ವಿಶ್ಲೇಷಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಸಮೀಕ್ಷೆ ನಡೆಸಿದ ತಂಡ ಹೇಳಿದೆ.
“ನವದೆಹಲಿ, ಮುಂಬಯಿ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಕೋವಿಡ್ ಸಾಂಕ್ರಾಮಿಕ ಹೆಚ್ಚುತ್ತಿರುವಾಗ ತಂತ್ರಜ್ಞಾನವು ಅಭಿವೃದ್ದಿ ಹೊಂದದೇ ಇರುವ ಕಾರಣಕ್ಕಾಗಿ, ಸ್ಮಾರ್ಟ್‌ಸಿಟಿಗಳ ಪಟ್ಟಿಯಲ್ಲಿ ಗಣನೀಯ ಕುಸಿತ ಕಂಡಿದೆ. ಭಾರತದ ಸ್ಮಾರ್ಟ್‌ಸಿಟಿಗಳು ಕರೋನಾ ಸೋಂಕನ್ನು ಎದುರಿಸಲು ಸಿದ್ದರಿರಲಿಲ್ಲ,” ಎಂದು ಹೇಳಿದ್ದಾರೆ.
ಸ್ಮಾರ್ಟ್‌ಸಿಟಿಗಳ ಪಟ್ಟಿಯಲ್ಲಿ ಸಿಂಗಾಪುರ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಒಂಬತ್ತು ಸ್ಥಾನಗಳನ್ನು ಕ್ರಮವಾಗಿ ಹೆಲ್‌ಸ್ನಿಕಿ, ಝೂರಿಚ್, ಆಕ್ಲಂಡ್, ಓಸ್ಲೊ, ಕೋಪೆನ್‌ಹೆಗನ್, ಜಿನೀವಾ, ತೈಪೇ ಸಿಟಿ, ಆಮ್ಸ್ಟರ್‌ಡಾಮ್ ಮತ್ತು ನ್ಯೂಯಾರ್ಕ್ ಪಡೆದುಕೊಂಡಿವೆ.


