ತಮಿಳುನಾಡು ರಾಜಕೀಯದಲ್ಲಿ ಜಯಲಲಿತಾ ಮತ್ತು ಕರುಣಾನಿಧಿಯವರ ನಿಧನ ನಂತರ ಉಂಟಾಗಿರುವ ಶೂನ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಮೂಲಕ ತುಂಬಲಿದ್ದಾರೆ. ಈಗಾಗಲೇ ತಮಿಳುನಾಡು ಬಿಜೆಪಿ ಬೆಳೆಯುತ್ತಿದೆ. ಉತ್ತಮ ನಾಯಕತ್ವ ಬಯಸುವವರು ಮೋದಿಯನ್ನು ಬೆಂಬಲಿಸಲಿದ್ದಾರೆ, ಯಾಕೆಂದರೆ ಮೋದಿ ಸರ್ಕಾರ ಸುಮಾರು ಯೋಜನೆಗಳನ್ನು ತಮಿಳುನಾಡಿಗೆ ತಲುಪಿದೆ ಎಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಪೊಲೀಸ್ ಅಧಿಕಾರಿ ಕೆ ಅಣ್ಣಾಮಲೈ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, 53 ವರ್ಷದ ದ್ರಾವಿಡಿಯನ್ ರಾಜಕೀಯದಿಂದ ತಮಿಳು ನಾಡಿನ ಜನತೆ ಬೇಸತ್ತು ಹೋಗಿದ್ದಾರೆ. ತಮಿಳರು ಈಗ ರಾಷ್ಟ್ರೀಯತೆ ಬಯಸಿದ್ದಾರೆ. ಬದಲಾವಣೆ ಬಯಸಿ ರಾಷ್ಟ್ರೀಯ ಪಕ್ಷದತ್ತ ಒಲವು ತೋರಿಸಲು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ನಾವು ಭಾವಿಸಿದ್ದೇವೆ. ಜನರ ಆಶೋತ್ತರಗಳು, ಆಕಾಂಕ್ಷೆಗಳು, ಈಡೇರದೆ ಇರುವ ಭರವಸೆಗಳನ್ನು ಬಿಜೆಪಿ ಸಾಕಾರಗೊಳಿಸಲಿದೆ ಎಂದು ಹೇಳಿದರು.