• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಚಿರತೆಗಳಿಗೆ ಚಿತೆಯಾಗುತ್ತಿದೆ ಶಿವಮೊಗ್ಗ-ಸಾಗರ ರೈಲು ಮಾರ್ಗ

by
February 8, 2020
in ಕರ್ನಾಟಕ
0
ಚಿರತೆಗಳಿಗೆ ಚಿತೆಯಾಗುತ್ತಿದೆ ಶಿವಮೊಗ್ಗ-ಸಾಗರ ರೈಲು ಮಾರ್ಗ
Share on WhatsAppShare on FacebookShare on Telegram

ಶಿವಮೊಗ್ಗದಲ್ಲಿ ಎರಡು ತಿಂಗಳ ಅವಧಿಯಲ್ಲಿ ಎರಡು ಚಿರತೆಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದು ಅಘಾತಕಾರಿಯಾಗಿದೆ. ತರಾತುರಿಯಲ್ಲಿ ಚಿರತೆಗಳ ಶವಪರೀಕ್ಷೆ ನಡೆಸಿ ಸುಟ್ಟು ಹಾಕಿರುವ ಅರಣ್ಯ ಇಲಾಖೆಯ ನಡೆ ಆತಂಕ ಮೂಡಿಸಿದೆ. ಮಲೆನಾಡು ಹುಲಿಗಳಿಗಿಂತ ಚಿರತೆಗಳಿಗೆ ಪ್ರಸಿದ್ಧವಾದ ಪ್ರದೇಶ, ಹಳೆ ತಲೆಮಾರಿನ ಕಥೆಗಳನ್ನ ಕೇಳುತ್ತಾ ಹೋದರೆ ಚಿರತೆಗಳ ಬಗ್ಗೆ ಒಂದಾದರೂ ಕಥೆ ಇರುತ್ತದೆ. ಮೇಯಲು ಹೋದ ದನ ಕರುಗಳ ಮೇಲೆ ಬಿದ್ದಿರುವ ಉಗುರುಗಳ ಗುರುತನ್ನೂ ಕೂಡ ಜನರು ನೆನಪು ಮಾಡಿಕೊಳ್ಳುತ್ತಾರೆ. ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ನಾಶ ಚಿರತೆಗಳ ಸಂತತಿಯನ್ನ ಕ್ರಮೇಣ ಕಡಿಮೆ ಮಾಡಿತ್ತು, ಇದರ ಜೊತೆ ಬೇಟೆ, ಹೊಲಗದ್ದೆಗಳ ಉರುಳಿಗೆ ಬಿದ್ದು ಸಾವಿಗೀಡಾಗುತ್ತಿದ್ದ ಚಿರತೆಗಳು ರಕ್ಷಿತಾರಣ್ಯ ಪ್ರದೇಶದಲ್ಲಿ ಮಾತ್ರ ವಾಸವಿದ್ದವು, ಆದರೆ ಈಗ ಇಂತಹ ಪ್ರದೇಶಗಳಿಗೂ ಉಳಿಗಾಲವಿಲ್ಲ.

ADVERTISEMENT

ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ರೈಲು ಮಾರ್ಗ ಚಿರತೆಗಳಿಗೆ ಚಿತೆಯಾಗಿ ಪರಿಣಮಿಸಿದೆ, ಎರಡೇ ತಿಂಗಳ ಅವಧಿಯಲ್ಲಿ ಎರಡು ಚಿರತೆಗಳು ರೈಲುಗಳಿಗೆ ಮೃತಪಟ್ಟಿವೆ. ಬುಧವಾರ ಮುಂಜಾನೆ ಶಿವಮೊಗ್ಗ ತಾಲೂಕಿನ ಕೊನಗನಹಳ್ಳಿಯಲ್ಲಿ ರೈಲ್ವೇ ಟ್ರ್ಯಾಕ್‌ ಸಮೀಪ ದೈತ್ಯಾಕಾರದ ಚಿರತೆ ನೆಲಕ್ಕೆ ಒರಗಿತ್ತು, ಯಾರೇ ಅದನ್ನ ನೋಡಿದರೂ ಭಯಮೂಡಿಸುವಂತಹ ಕಾಯ ಆ ಚಿರತೆಯದ್ದಾಗಿತ್ತು, ಮೃತ ಚಿರತೆಯನ್ನ ಒಂದು ದಿನದ ನಂತರ ಅಲ್ಲಿನ ಜನರು ಗುರುತಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಶಂಕರ ಅರಣ್ಯ ವಿಭಾಗದ ವಲಯ ಅಧಿಕಾರಿ ಜಯೇಶ್‌ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ, ಅಲ್ಲೇ ಶವ ಪರೀಕ್ಷೆಯನ್ನೂ ನಡೆಸಿ ಪ್ರಾಥಮಿಕ ವರದಿಗಳ ಪ್ರಕಾರ ರೈಲು ಅಪಘಾತದಲ್ಲಿ ಚಿರತೆ ಮೃತಪಟ್ಟಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಚಿರತೆ ಸಾವು ಅರಣ್ಯ ಇಲಾಖೆಗೆ ಬಹಳ ಮುಖ್ಯವಾಗಲಿಲ್ಲ, ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಯಾರಿಗೂ ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಅನಿಸಲಿಲ್ಲ, ಪತ್ರಿಕೆಗಳಲ್ಲಿ ಶ್ರದ್ಧಾಂಜಲಿಯ ತರಹದೊಂದು ಚಿಕ್ಕ ವರದಿಯೊಂದಿಗೆ ಸಮಾಪ್ತಿಯಾಯ್ತು.

ಒಂದು ತಿಂಗಳ ಹಿಂದೆ ಇದೇ ರೈಲು ಮಾರ್ಗದಲ್ಲಿ ರಿಪ್ಪನ್‌ಪೇಟೆ ಸಮೀಪ ಸೂಡೂರು ಗ್ರಾಮದ ಬಳಿಯಿಂದ ಚಿರತೆ ಕಾಲು ಉಗುರುಗಳನ್ನ ಕತ್ತರಿಸಿಕೊಂಡು ಬಿದ್ದಿತ್ತು, ಶೆಟ್ಟಿಹಳ್ಳಿ ಅಭಯಾರಣ್ಯದ ಸಮೀಪವೂ ಇರುವ ಕಾರಣ ಯಾರೋ ಬೇಟೆಗಾರರು ಹೊಡೆದುರುಳಿಸಿ ಕಾಲು ಉಗುರುಗಳನ್ನ ಕಿತ್ತಿರಬಹುದೆಂಬ ಅನುಮಾನ ಮೂಡಿತು ಆದು ಬಲಗೊಳ್ಳುವ ಮೊದಲೇ ಆ ಭಾಗದ ಅರಣ್ಯ ಅಧಿಕಾರಿಗಳು ಅದರ ಶವ ಪರೀಕ್ಷೆ ಮಾಡಿ ರೈಲು ಬಡಿದು ಮೃತಪಟ್ಟಿದೆ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು ಆಗಲೂ ಕೂಡ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹೋಗಲೇ ಇಲ್ಲ, ಇದುವರೆಗೆ ಆ ಚಿರತೆ ಸಾವಿಗೊಂದು ವರದಿಯನ್ನೂ ನೀಡಿಲ್ಲ. ಒಂದು ವೇಳೆ ರೈಲು ಅಪಘಾತಕ್ಕೇ ಪ್ರಾಣಿಗಳು ಮೃತಪಡುತ್ತಿವೆ ಎಂದಾದರೆ ಆ ಬಗ್ಗೆ ರೈಲ್ವೇ ಇಲಾಖೆಗೊಂದು ಮನವಿಯನ್ನ ನೀಡಿ ರೈಲಿನ ವೇಗದ ಮಿತಿಯನ್ನ ಅಭಯಾರಣ್ಯ ವ್ಯಾಪ್ತಿ ( ಹತ್ತು ಕಿಲೋಮೀಟರ್‌ ವರೆಗೆ ಸೇರುವ ಪ್ರದೇಶ) ಯಲ್ಲಿ ಕಡಿಮೆ ಮಾಡಿಸಬಹುದು.

ಈ ಕುರಿತು ಪರಿಸರ ಹೋರಾಟಗಾರ ಅಜಯ್‌ಶರ್ಮಾ ಬೇಸರ ವ್ಯಕ್ತಪಡಿಸುತ್ತಾರೆ, ೨೦೧೯ರಲ್ಲಿ ೭೩ ಚಿರತೆಗಳು ರಸ್ತೆ ಅಪಘಾತದಲ್ಲಿ, ಇಪ್ಪತ್ತಕ್ಕೂ ಅಧಿಕ ಚಿರತೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ, ಸಾಮಾನ್ಯವಾಗಿ ಮಲೆನಾಡಿನಲ್ಲಿ ಮುಂಜಾನೆ ಮಂಜು ಕವಿದಿರುತ್ತೆ, ಆಹಾರವಿಲ್ಲದೇ ನಿತ್ರಾಣಗೊಂಡಿರುವ ಚಿರತೆಗಳು ಮಬ್ಬು ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಎರಗುವ ರೈಲಿನ ಶಬ್ಧಕ್ಕೆ ವಿಚಲಿತಗೊಂಡು ಆಚೀಚೆ ಹರಿದಾಡಿ ಪ್ರಾಣ ಬಿಟ್ಟಿರುವ ಸಾಧ್ಯತೆಗಳಿವೆ. ಈ ಕುರಿತು ಸಮಗ್ರವಾಗಿ ಅರಣ್ಯ ಇಲಾಖೆ ವರದಿ ನೀಡಬೇಕು, ಚಿರತೆಗಳು ಈ ಭಾಗದಲ್ಲಿ ಸಂಚರಿಸುವುದು ಜನರಿಗೂ ಆತಂಕ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

Tags: indian leopardleopardShivamoggaShivamogga Sagar trainಚಿತೆಚಿರತೆರೈಲು ಮಾರ್ಗಶಿವಮೊಗ್ಗ-ಸಾಗರಶಿವಮೊಗ್ಗ-ಸಾಗರ ರೈಲು ಮಾರ್ಗ
Previous Post

ಮಾಹಿತಿ ಮಾಲಿನ್ಯ: ಸಾಮಾಜಿಕ ಜಾಲತಾಣದಿಂದ ಸಂಸತ್ತಿನವರೆಗೆ

Next Post

ಸರ್ಕಾರದಲ್ಲಿ ಶ್ರೀರಾಮುಲುಗೆ ಅನ್ಯಾಯ: ಬಿಜೆಪಿಯಿಂದ ದೂರವಾಗಲಿದೆ ವಾಲ್ಮೀಕಿ ಸಮುದಾಯ!

Related Posts

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!
ಕರ್ನಾಟಕ

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

by ಪ್ರತಿಧ್ವನಿ
May 25, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದ ವೇಳೆ, ಅವರ ಸಂಚಾರ ಮಾರ್ಗದ ಸಮೀಪ ಸ್ಫೋಟಕ ಪತ್ತೆಯಾಗಿದ್ದ...

Read moreDetails
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
Next Post
ಸರ್ಕಾರದಲ್ಲಿ ಶ್ರೀರಾಮುಲುಗೆ ಅನ್ಯಾಯ: ಬಿಜೆಪಿಯಿಂದ ದೂರವಾಗಲಿದೆ ವಾಲ್ಮೀಕಿ ಸಮುದಾಯ!

ಸರ್ಕಾರದಲ್ಲಿ ಶ್ರೀರಾಮುಲುಗೆ ಅನ್ಯಾಯ: ಬಿಜೆಪಿಯಿಂದ ದೂರವಾಗಲಿದೆ ವಾಲ್ಮೀಕಿ ಸಮುದಾಯ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada