ಕಳೆದ ಕೆಲವು ದಿನಗಳ ಹಿಂದಷ್ಟೇ ಬಹುದೊಡ್ಡದಾಗಿ ಸುದ್ದಿ ಮಾಡಿದ್ದ Mitron app ಗೆ ಇದೀಗ ಗೂಗಲ್ ʼಪ್ಲೇ ಸ್ಟೋರ್ʼ ಕೂಡಾ ಮುಕ್ತಿ ನೀಡಿದೆ. ಸುಮಾರು 50 ಲಕ್ಷಕ್ಕೂ ಮಿಕ್ಕ ಭಾರತೀಯ ಯುವಜನತೆಯಿಂದ ಡೌನ್ಲೋಡ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ Mitron app ಮೂಲತಃ ಪಾಕಿಸ್ತಾನದ TicTic App ನ Source Code ಹಣ ಕೊಟ್ಟು ಖರೀದಿಸಿ, ಅದನ್ನ ಮರು ಹೆಸರಿಸಿ Mitron app ಮಾಡಲಾಗಿತ್ತು ಅನ್ನೋದು ಗೊತ್ತಾಗಿತ್ತು. ಅದಾಗಲೇ ಚೀನಾದ TikTok App ಗೆ ದೇಸಿ ಉತ್ತರ ಎನಿಸಿಕೊಂಡಿದ್ದ Mitron app ಭಾರತದಲ್ಲಿ ಸಂಚಲನ ಮೂಡಿಸಿತ್ತು. ಆದರೆ Mitron app ನಲ್ಲಿ ಇರುವ ಒಂದಿಷ್ಟು ಭದ್ರತಾ ಲೋಪಗಳು ಕೂಡಾ ಬಳಕೆದಾರರ ಮಾಹಿತಿ ಸೋರಿಕೆ ಕಾರಣವಾಗುತ್ತದೆ ಎನ್ನುವ ಆತಂಕವನ್ನೂ ಭಾರತೀಯ ಐಟಿ ಪರಿಣಿತರು ತಿಳಿಸಿದ್ದರು. ಇದೀಗ ಗೂಗಲ್ ʼಪ್ಲೇ ಸ್ಟೋರ್ʼ ತನ್ನ ಬತ್ತಳಿಕೆಯಲ್ಲಿದ್ದ Mitron app ನ್ನು ನಿಯಮ ಉಲ್ಲಂಘನೆ ಆಧಾರದ ಮೇಲೆ ತೆಗೆದು ಹಾಕಿದೆ.

‘ಪ್ಲೇ ಸ್ಟೋರ್ʼ ಈ ರೀತಿ Mitron app ತೆಗೆದು ಹಾಕಲು ನೀಡಿರುವ ಕಾರಣವೂ ಅದೇ ಆಗಿದೆ. ಮೂಲ App ನಿಂದ ಯಾವುದೇ ಬದಲಾವಣೆ ನಡೆಸದೇ ಅಥವಾ ಯಾವುದೇ ಹೆಚ್ಚುವರಿ ದತ್ತಾಂಶಗಳನ್ನ ಸೇರಿಸದೇ ನಿಯಮ ಉಲ್ಲಂಘಿಸಿದೆ ಅನ್ನೋದಾಗಿ ʼಪ್ಲೇ ಸ್ಟೋರ್ʼ ಮಾಹಿತಿ ನೀಡಿದೆ. “ಯಾವುದೇ App ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಇನ್ನೊಂದು App ನ ಅನುಭವ ನೀಡುವಂತಿಲ್ಲ. ಬದಲಿಗೆ ಅದಕ್ಕಿಂತ ವಿಭಿನ್ನ ಹಾಗೂ ಅದ್ವಿತೀಯ ಸೇವೆಯನ್ನ ನೀಡಬೇಕು” ಎಂದಿದೆ. ಅಲ್ಲದೇ ಮೂಲ ಕಾರ್ಯ ಚಟುವಟಿಕೆ ಹಾಗೂ ಬಳಕೆದಾರರ ಅನುಭವವನ್ನು ಗೌರವಿಸಬೇಕು ಎಂದು ತಿಳಿಸಿದೆ.
ಅದ್ಯಾವಾಗ ಭಾರತದಲ್ಲಿ 50 ಲಕ್ಷಕ್ಕೂ ಮಿಕ್ಕ ಜನರು TikTok ಗುಡ್ ಬೈ ಹೇಳಿ Mitron app ಅಪ್ಪಿಕೊಂಡರೋ, ಅದಾಗಲೇ ನೆರೆಯ ಪಾಕಿಸ್ತಾನದ Qboxus ಸೈಬರ್ ತಂತ್ರಜ್ಞಾನ ಸಂಸ್ಥೆ ಸಿಇಓ ಇರ್ಫಾನ್ ಶೇಖ್, ಅದು ಪಾಕಿಸ್ತಾನ ಮೂಲದ App ಮರು ಬ್ರ್ಯಾಂಡ್ ಎಂದು ಭಾರತದ ರಾಷ್ಟ್ರೀಯ ಮಾಧ್ಯಮಗಳಿಗೆ ಫೋನಾಯಿಸಿ ತಿಳಿಸಿದ್ದರು. ಆನಂತರದಲ್ಲಿ ಇದು ಸಾಕಷ್ಟು ಜನರಿಂದ Unistall ಮಾಡಲು ಪ್ರೇರೇಪಣೆ ನೀಡಿತ್ತು. ಅಲ್ಲದೇ ಪಾಕಿಸ್ತಾನದ Qboxus ಸಂಸ್ಥೆ ಅಭಿವೃದ್ಧಿಪಡಿಸಿದ್ದ Tik tok ಮಾದರಿಯ ಆಪ್ Tictic App ನ Source Code ಪಡೆದು ಅಭಿವೃದ್ಧಿಪಡಿಸಿದ್ದ App ಎಂದು ಗೊತ್ತಾಗಿತ್ತು. ಅದಾಗುತ್ತಲೇ ಗೂಗಲ್ ʼಪ್ಲೇ ಸ್ಟೋರ್ʼ ತನಿಖೆ ಆರಂಭಿಸಿದ್ದು, Mitron app ನ್ನು ಗೂಗಲ್ ಪಾಲಿಸಿ ಪಾಲಿಸದೇ ಇದ್ದುದ್ದಕ್ಕಾಗಿ ತೆಗೆದು ಹಾಕಲು ನಿರ್ಧರಿಸಿತು. ಈ ಮೂಲಕ ಚೀನಾದ ಟಿಕ್‌ಟಾಕ್ App ಗೆ ದೇಸಿ ಉತ್ತರವೆನಿಸಿಕೊಂಡಿದ್ದ Mitron app ಕೊನೆಕ್ಷಣದಲ್ಲಿ ಸದ್ದು ಮಾಡಿ ಇದೀಗ ʼಇನ್ನಿಲ್ಲʼದ ಸುದ್ದಿ ನೀಡಿದೆ.
Also Read: TikTok App ಗೆ ದೇಸೀಯ ಉತ್ತರವಾಗಿದ್ದ Mitron App ಮೂಲ ಪಾಕಿಸ್ತಾನ!?
Also Read: ನೀವು ಬಳಸುವ Arogya Sethu App ಎಷ್ಟು ಸುರಕ್ಷಿತ.?
ಇದರಿಂದಾಗಿ ಭಾರತದ ಐಐಟಿ ಇಂಜಿನಿಯರಿಂಗ್ ಶಿವಾಂಕ್ ಅಗರ್ ವಾಲ್ ಅಭಿವೃದ್ಧಿಪಡಿಸಿದ್ದ App ಎಂದೇ ಕರೆಸಿಕೊಂಡಿದ್ದ Mitron app ಇನ್ಮುಂದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸದು. ಶಿವಾಂಕ್ ಅಗರ್ ವಾಲ್ ಅವರನ್ನ ಸ್ವತಃ ಐಟಿ ಸಚಿವ ರವಿಶಂಕರ್ ಪ್ರಸಾದ್ ಕೂಡಾ ಅಭಿನಂದಿಸಿದ್ದರು. ಇತ್ತೀಚೆಗೆ ಚೀನಾ ಗಡಿ ಕ್ಯಾತೆ ತೆಗೆಯುತ್ತಿದ್ದಂತೆ #BanTiktokInINDIA ಅನ್ನೋ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ಟರ್ ನಲ್ಲೂ ಟಾಪ್ ಟ್ರೆಂಡಿಂಗ್ ಕ್ರಿಯೇಟ್ ಮಾಡಿತ್ತು. ಇದರ ಬೆನ್ನಿಗೆ ಮುನ್ನೆಲೆಗೆ ಬಂದಿದ್ದೇ Mitron app. ಮೊದಲೇ ದೇಸಿ ಕಲ್ಪನೆ ಹಾಗೂ ಚೀನಾ ವಿರೋಧಿ ಭಾವನೆ ಭಾರತೀಯರನ್ನ Mitron app ನತ್ತ ಆಕರ್ಷಿಸಿತ್ತು.
ಇನ್ನು ಇದೇ ರೀತಿ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡಿದ್ದ “Remove China Apps” ಕೂಡಾ ʼಪ್ಲೇ ಸ್ಟೋರ್ʼ ನಿಬಂಧನೆಗಳನ್ನ ಉಲ್ಲಂಘಿಸಿದೆ ಅಂತಾ ತೆಗೆದು ಹಾಕಲಾಗಿದೆ. ಈ App ಮೂಲಕ ಚೀನಾ ವಿರೋಧಿ ಭಾವನೆಯನ್ನ ಈ ಹರಡಲಾಗುತ್ತಿದೆ ಅಂತಾ ಗೂಗಲ್ ಪ್ಲೇ ತಿಳಿಸಿದೆ. ಈ App ಕೂಡಾ ಅಷ್ಟೇ, Mitron ಬಳಿಕ ಅತೀ ವೇಗವಾಗಿ ಭಾರತದಲ್ಲಿ ಸಂಚಲನ ಮೂಡಿಸಿತ್ತು. ಬಿಡುಗಡೆಗೊಂಡ ಎರಡೇ ವಾರದಲ್ಲಿ ಈ App 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಆಗಿದ್ದವು. ಜೈಪುರ ಮೂಲದ ಐಟಿ ತಂತ್ರಜ್ಞರು ಅಭಿವೃದ್ಧಿಪಡಿಸಿದ್ದ ಈ App ಪ್ರಮುಖವಾಗಿ ಚೀನಾ ಮೂಲದ App ಗಳು ಯಾವುದೆಲ್ಲ ಎಂದು ಮಾಹಿತಿ ನೀಡುವ ಮೂಲಕ ನಿಷ್ಕ್ರಿಯಗೊಳಿಸಲು ಸಹಾಯ ಮಾಡುತ್ತಿತ್ತು. ಮಾತ್ರವಲ್ಲದೇ Mitron ನಂತರ ಅತೀ ವೇಗವಾಗಿ 50 ಲಕ್ಷ ಬಳಕೆದಾರರಿಂದ ಡೌನ್‌ಲೋಡ್ ಮಾಡಿಕೊಂಡ app ಅನ್ನೋ ಹೆಸರಿಗೂ ಪಾತ್ರವಾಗಿತ್ತು. ಅದರೆ ಇದೀಗ ಈ app ನ್ನು ಕೂಡಾ ಗೂಗಲ್ ಪ್ಲೇ ತೆಗೆದು ಹಾಕಿದೆ.