ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 204 ಹೊಸ ಪ್ರಕರಣ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು ಪತ್ತೆಯಾಗಿರುವ ಕರೋನಾ ಸೋಂಕಿತರ ಸಂಖ್ಯೆ 7734 ತಲುಪಿದೆ. ಇಂದು 348 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4804 ತಲುಪಿದೆ
ರಾಜ್ಯದಲ್ಲಿ 2824 ಕರೋನಾ ಪ್ರಕರಣಗಳು ಸಕ್ರಿಯವಾಗಿದೆ. ಇಂದು 08 ಮಂದಿ ಕರೋನಾ ಸೋಂಕಿತರು ಮೃತಪಟ್ಟಿದ್ದು ಕರೋನಾ ಸೋಂಕಿನಿಂದಾಗಿ ಅಸುನೀಗಿದವರ ಸಂಖ್ಯೆ 102 ದಾಟಿದೆ. ಕರೋನಾ ಸೋಂಕಿತರಲ್ಲಿ 72 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.
ದೇಶದಾದ್ಯಂತ 10667 ಹೊಸ ಕರೋನಾ ಪ್ರಕರಣ ದಾಖಲಾಗಿದೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 3 ಲಕ್ಷದ 54 ಸಾವಿರ ದಾಟಿದೆ. ದೇಶದಲ್ಲಿ 1 ಲಕ್ಷದ 87 ಸಾವಿರ ಮಂದಿ ಕರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 380 ಮಂದಿ ಮೃತ ಪಟ್ಟಿದ್ದು ಒಟ್ಟು 11903 ಮಂದಿ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕರೋನಾ ಸೋಂಕು ಜಗತ್ತಿನಾದ್ಯಂತ ಹರಡಿದೆ. ಇದುವರೆಗೂ 79 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಪ್ರಪಂಚದಾದ್ಯಂತ ಸುಮಾರು 4 ಲಕ್ಷದ 35 ಸಾವಿರದಷ್ಟು ಮಂದಿ ಕರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಜೂನ್ 08 ರ ಹೊತ್ತಿಗೆ 2 ಲಕ್ಷದ 57 ಸಾವಿರ ಮಂದಿಗೆ ಕರೋನಾ ಸೋಂಕು ಹರಡಿತ್ತು, ಕೇವಲ 9 ದಿನಗಳಲ್ಲಿ 1 ಲಕ್ಷದಷ್ಟು ಪ್ರಕರಣಗಳು ಹೆಚ್ಚಾಗಿವೆ. ಜಗತ್ತಿನಾದ್ಯಂತ ಕಳೆದ ಹತ್ತು ದಿನಗಳಲ್ಲಿ ಸುಮಾರು 10 ಲಕ್ಷ ಪ್ರಕರಣಗಳು ಹೆಚ್ಚಿದ್ದು, ಅದರಲ್ಲಿ ಸುಮಾರು 1 ಲಕ್ಷದಷ್ಟು ಪ್ರಕರಣಗಳು ಭಾರತವೊಂದರಲ್ಲೇ ಹೆಚ್ಚಾಗಿದೆ.