ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 54 ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದಿವೆ. ಮತ್ತು ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ಈಗ ರಾಜ್ಯದಲ್ಲಿ 394 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ 54 ಪ್ರಕರಣಗಳು ಸೇರಿ ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 848ಕ್ಕೆ ತಲುಪಿದೆ. ಇದುವರೆಗೂ 422 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಸಾವಿನ ಪ್ರಮಾಣ 31 ತಲುಪಿದೆ. 6 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 07 ಸಂಜೆ 05 ರಿಂದ ಮೇ 08 ರ ಸಂಜೆ 05 ರವರೆಗೆ ಪತ್ತೆಯಾದ ಪ್ರಕರಣದಲ್ಲಿ ಬೆಳಗಾವಿಯಲ್ಲಿ 29 ಪ್ರಕರಣಗಳು ದಾಖಲಾಗಿದ್ದು, ಶಿವಮೊಗ್ಗದಲ್ಲಿ 8, ಕಲಬುರಗಿ 4, ಬೆಂಗಳೂರು ನಗರದಲ್ಲಿ 03, ಭಟ್ಕಳದಲ್ಲಿ 7 ಹಾಗೂ ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆಯಲ್ಲಿ ತಲಾ 01 ಪ್ರಕರಣಗಳು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
![](https://pratidhvani.in/wp-content/uploads/2021/02/pratidhvani_2020_04_e241e77c_4e48_4c8a_8518_5c7e48e673cc_Stay_Home_2-88.jpg)