ಪುಟ್ಟ ಜಿಲ್ಲೆ ಕೊಡಗು ಪ್ರವಾಸೋದ್ಯಮದಿಂದಲೇ ಇಂದು ಹೆಸರುವಾಸಿ ಅಗಿದೆ. ಸಿಲಿಕಾನ್ ಸಿಟಿಗೆ ಹತ್ತಿರದ ಗಿರಿ ಧಾಮವೂ ಅಗಿರುವುದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಬೆಂಗಳೂರಿನಿಂದಲೇ ಅಧಿಕವಾಗಿದೆ. ಪ್ರವಾಸೋದ್ಯಮದಿಂದಲೇ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಅದರೆ ಲಾಕ್ ಡೌನ್ ಘೋಷಣೆಯಾಗುತಿದ್ದಂತೆಯೇ ಮೊದಲ ಹೊಡೆತ ಬಿದ್ದಿದ್ದೇ ಆತಿಥ್ಯ ಉದ್ಯಮಕ್ಕೆ. ತಿಂಗಳು ವಾರ ಮೊದಲೇ ಬುಕ್ ಆಗಿದ್ದ ಹೋಟೆಲ್ , ಲಾಡ್ಜ್ , ಹೋಂ ಸ್ಟೇ ಕೊಠಡಿಗಳನ್ನು ರದ್ದು ಮಾಡಲಾಯಿತು.
ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಕಿಕ್ಕಿರಿದಿರುತ್ತಿದ್ದ ಪ್ರವಾಸಿಗರು, ರೂಮ್ ಗಾಗಿ ದುಂಬಾಲು ಬೀಳುತ್ತಿದ್ದ ಪ್ರವಾಸಿಗರು, ಕೊಡಗಿನ ನಗರಗಳ ಕಿರಿದಾದ ರಸ್ತೆಗಳಲ್ಲಿ ಟ್ರಾಫಿಕ್ ಜಾಂ…ಎಲ್ಲೆಲ್ಲೂ ಜನವೋ ಜನ.. ಜನರ ಊಟ, ತಿಂಡಿ ಬೇಡಿಕೆ ಪೂರೈಸಲು ರೆಸ್ಟೋರೆಂಟ್ ಸಿಬ್ಬಂದಿಗಳ ಹರಸಾಹಸಪಡಬೇಕಾಗಿತ್ತು. ಹೋಂ ಸ್ಟೇ ಕೊಠಡಿಗಳ ಬಾಡಿಗೆ ದುಪ್ಪಟ್ಟಾದದ್ದೂ ಇದೆ. ಏಕೆಂದರೆ ಜೂನ್ ತಿಂಗಳಿನಿಂದ ಎಡೆಬಿಡದೆ ಸುರಿಯುವ ಮಳೆ ಎರಡು -ಮೂರು ತಿಂಗಳು ಸುರಿಯುತ್ತದೆ. ಅದರೆ ಪ್ರತೀ ವರ್ಷ ಕಂಡುಬರುತ್ತಿದ್ದ ಈ ಚಿತ್ರಣ ಇದೀಗ ಕೊಡಗಿನಲ್ಲಿ ಮರೆಯಾಗಿದೆ. ಪ್ರವಾಸಿಗರಿಗೆ ಊಟ, ತಿಂಡಿ ನೀಡುತ್ತಿದ್ದ ಸಿಬ್ಬಂದಿಗಳ ಕೈಗಳೇ ತಮಗೆ ಊಟ ನೀಡಿ ಎಂದು ಬೇಡುತ್ತಿವೆ.
ಸಾವಿರಾರು ಜನರಿಗೆ ಉದ್ಯೋಗ, ಆಶ್ರಯ ನೀಡಿದ್ದ ಕೊಡಗಿನ ಹೊಟೇಲ್ ಉದ್ಯಮ ಅಕ್ಷರಶ ತತ್ತರಿಸಿದೆ. ಮುಂದೇನು ಎಂಬ ಚಿಂತೆಯಲ್ಲಿ ಹೊಟೇಲ್ ಉದ್ಯಮಿಗಳಿದ್ದಾರೆ. ಪ್ರಕೖತ್ತಿ ವಿಕೋಪದಿಂದ ಎರಡು ವಷ9ಗಳ ಕಾಲ ಸತತವಾಗಿ ತತ್ತರಿಸಿದ್ದ ಉದ್ಯಮಿಗಳು ಲಾಕ್ ಡೌನ್ ಹೊಡೆತದಿಂದಾಗಿ ಸಂಪೂಣ9ವಾಗಿ ನಷ್ಟಕ್ಕೊಳಗಾಗಿದ್ದಾರೆ. ಮೇ 4 ರ ನಂತರವಾದರೂ ಉದ್ಯಮ ಪ್ರಾರಂಭಿಸಬಹುದು ಎಂದು ಲೆಕ್ಕಹಾಕುತ್ತಿದ್ದ ಹೊಟೇಲ್ ಉದ್ಯಮಿಗಳು ಇದೀಗ ಮೇ 17 ರವರೆಗೆ ಲಾಕ್ ಡೌನ್ ಮಾಡಬೇಕಾದ ಅನಿವಾಯ9ತೆಯಲ್ಲಿ ಆರ್ಥಿಕವಾಗಿ ಮೇಲೇಳಲೇ ಆಗದ ಸ್ಥಿತಿಯತ್ತ ಸಾಗುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಕೆಲವು ಪ್ರತಿಷ್ಟಿತ ಹೊಟೇಲ್ ಗಳ ಮಾಲೀಕರು ನಾವಿನ್ನು ವಹಿವಾಟು ನಡೆಸುವುದಿಲ್ಲ ಎಂದು ವಹಿವಾಟಿಗೇ ಶಾಶ್ವತವಾಗಿ ಬಾಗಿಲೆಳೆದಿದ್ದಾರೆ. ಹೊಟೇಲ್ ಉದ್ಯಮಕ್ಕಾಗಿ ಮಾಡಿರುವ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಮನೆಯೊಳಗೆ ಹಲವಾರು ಉದ್ಯಮಿಗಳನ್ನು ಕಾಡುತ್ತಿದೆ. ಜಿಲ್ಲೆಯಾದ್ಯಂತ ಹೊಟೇಲ್, ರೆಸ್ಟೋರೆಂಟ್, ರೆಸಾಟ್9ಗಳು ಏನಿಲ್ಲವೆಂದರೂ 280 ಇರಬಹುದು.. ಅಂದಾಜು 30 ಸಾವಿರ ಸಿಬ್ಬಂದಿಗಳನ್ನು ಹೊಟೇಲ್ ಉದ್ಯಮ ಸಲಹುತ್ತಿದೆ. ಪರೋಕ್ಷವಾಗಿ ಈ ಸಿಬ್ಬಂದಿಗಳ ಕುಟುಂಬ ವರ್ಗ ಸೇರಿದಂತೆ 1.25 ಲಕ್ಷ ಜನ ಹೊಟೇಲ್ ಉದ್ಯಮವನ್ನೇ ಜೀವನಕ್ಕಾಗಿ ಅವಲಂಬಿಸಿದ್ದಾರೆ.
ಪ್ರವಾಸಿ ತಾಣವಾದ ಕೊಡಗು ಜಿಲ್ಲೆಯಲ್ಲಿ ಪ್ರತಿ ನಿತ್ಯ ಹೊಟೇಲ್ ಉದ್ಯಮ ಕನಿಷ್ಟ 2.50 ರಿಂದ 3 ಕೋಟಿ ರೂಪಾಯಿಗಳಷ್ಟು . ವಹಿವಾಟು ನಡೆಸುತ್ತಿತ್ತು. ಇದೀಗ ಹೊಟೇಲ್ ಉದ್ಯಮ ಮುಚ್ಚಿ 50 ದಿನಗಳೇ ಆಗುತ್ತಿದ್ದು ಕನಿಷ್ಟ 150 ಕೋಟಿ ರು. ಕೊಡಗು ಜಿಲ್ಲೆಯೊಂದರಲ್ಲಿಯೇ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಹೊಟೇಲ್ ಉದ್ಯಮದೊಂದಿಗೆ ಬಾಡಿಗೆ ಆಟೋ, ಕಾರ್, ವ್ಯಾನ್, ಬಸ್, ಏಜನ್ಸಿ, ಬೀಡಾ, ಸಿಗರೇಟ್ ಮಾರಾಟಗಾರರೂ ಸೇರಿದಂತೆ ಹಲವು ಇತರ ಉದ್ಯಮಗಳೂ ಅವಲಂಭಿತವಾಗಿದೆ. ಇವರೆಲ್ಲರೂ ಇದೀಗ ಆತಂಕಕ್ಕೀಡಾಗಿದ್ದಾರೆ.
ಪರಿಸ್ಥಿತಿ ಹೇಗಾಗಿದೆ ಎಂದರೆ, ಬಹುತೇಕ ಹೊಟೇಲ್ ಸಿಬ್ಬಂದಿಗಳು ಕೊಡಗಿನಿಂದ ತಮ್ಮೂರಿಗೆ ತೆರಳಿಬಿಟ್ಟಿದ್ದಾರೆ. ಅನೇಕ ಸಿಬ್ಬಂದಿಗಳು ಹೋಟೇಲ್ ಮಾಲೀಕರ ಬಳಿ ಸಾವಿರಾರು ರುಪಾಯಿ ಸಾಲ ಪಡೆದಿದ್ದಾರೆ. ಈಗ ಸಾಲ ಮರಳಿ ಕೊಡುವುದೂ ಕಷ್ಟಕರ. ಹೀಗಾಗಿ ಮತ್ತೆ ಕೆಲಸಕ್ಕೆ ತೆರಳಿದರೆ ಸಾಲ ಕೊಡಬೇಕಾಗುತ್ತೆ ಎಂಬ ಹಿನ್ನಲೆಯಲ್ಲಿ ಮರಳಿ ಕೊಡಗಿನ ಹೊಟೇಲ್ ಉದ್ಯಮಕ್ಕೆ ಇಂಥ ಕಾಮಿ9ಕರು ಬರುವುದು ಕಷ್ಟ.
ಅನೇಕ ಹೊಟೇಲ್ ಉದ್ಯಮಿಗಳು ತಮಗೆ ಕನಿಷ್ಟ ಸಂಖ್ಯೆಯಲ್ಲಿ ಸಿಬ್ಬಂದಿಗಳು ಸಾಕು ಎಂಬ ನಿಧಾ9ರಕ್ಕೆ ಬಂದು ಬಿಟ್ಟಿದ್ದಾರೆ. ಹೀಗಾಗಿ ಲಾಕ್ ಡೌನ್ ಮುಗಿದ ಬಳಿಕ ಕೊಡಗಿನ ಹೋಟೇಲ್ ಉದ್ಯಮವು ಕೆಲವೇ ಕೆಲವು ಸೀಮಿತ ಸಂಖ್ಯೆಯ ಸಿಬ್ಬಂದಿಗಳಿಂದ ಕೆಲವಾರು ತಿಂಗಳು ನಿವ9ಹಿಸಲ್ಪಡಲಿದೆ.
ಮದ್ಯ ಮಾರಾಟಕ್ಕೆ ಮೇ 4 ರಿಂದ ಅವಕಾಶ ಕಲ್ಪಿಸಿದ್ದರೂ ಸರ್ಕಾರಕ್ಕೆ ಪ್ರತೀ ವರ್ಷ ಸಲ್ಲಿಸಬೇಕಾದ ಪರವಾನಗಿ ಶುಲ್ಕದ ಗೊಂದಲ ಇದೆ. ಏಕೆಂದರೆ ಸತತ 43 ದಿನಗಳ ಬಂದ್ ಮಾಡಿದ ಬಾಬ್ತು ಸರ್ಕಾರ ಇನ್ನೂ ಶುಲ್ಕ ರಿಯಾಯ್ತಿ ಅದೇಶ ಹೊರಡಿಸಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ನಷ್ಟದ ಬಹಳ ದೊಡ್ಡ ಕಿಕ್ ಹಲವಾರು ತಿಂಗಳ ಕಾಲ ಆಘಾತಕಾರಿಯಾಗಲಿದೆ. ಏಕೆಂದರೆ ಬಾರ್ ಗಳಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟರೂ ಅಲ್ಲಿಯೇ ಕುಳಿತು ಕುಡಿಯಲು ಅನುಮತಿ ನೀಡಿಲ್ಲ.
ಕೊಡಗು ಜಿಲ್ಲಾ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಈಗಾಗಲೇ ರಾಜ್ಯ ಹೋಟೆಲ್ ಮಾಲೀಕರ ಸಂಘದ ಜತೆ ಸಂಪರ್ಕದಲ್ಲಿದ್ದು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ವಿದ್ಯುತ್ ಕನಿಷ್ಟ ಶುಲ್ಕದ ಮೊತ್ತವನ್ನು ಕಡಮೆಮಾಡಬೇಕು., ಬಹುತೇಕ ಹೋಟೇಲ್ ಗಳು ಬಾಡಿಗೆ ಕಟ್ಟಡದಲ್ಲಿವೆ. ಲಾಕ್ ಡೌನ್ ಸಂದರ್ಭದ ಬಾಡಿಗೆ ಮೊತ್ತವನ್ನು ಕಟ್ಟಡ ಮಾಲೀಕರು ಮನ್ನಾ ಮಾಡಬೇಕು.
ಹೋಟೆಲ್ ಕಟ್ಟಡ ಬಾಡಿಗೆದಾರರು ಪಾವತಿ ಮಾಡುತ್ತಿರುವ ವಿವಿಧ ರೀತಿಯ ಜಿ.ಎಸ್.ಟಿ.ಗಳಿಗೆ ವಿನಾಯಿತಿ ಅನ್ವಯವಾಗಿ ಅವೆಲ್ಲಾ ಮನ್ನಾವಾಗಬೇಕು..ಲಾಕ್ ಡೌನ್ ಸಂದಭ9 ಹೊಟೇಲ್ ಉದ್ಯಮದಲ್ಲಿನ ಸಿಬ್ಬಂದಿಗಳಿಗೆ ವೇತನ ನೀಡುವುದು ಖಂಡಿತಾ ಕಷ್ಟಕರವಾಗಿದೆ. ಈಗಾಗಲೇ ಸಕಾ9ರದ ಬಳಿ 84,000 ಕೋಟಿ ಪ್ರಾವಿಡೆಂಟ್ ಫಂಡ್ ಹಣವಿದೆ. ಇದನ್ನು ಬಳಕೆ ಮಾಡಿಕೊಂಡು ಲಾಕ್ ಡೌನ್ ದಿನಗಳಲ್ಲಿ ಹೊಟೇಲ್ ಸಿಬ್ಬಂದಿಗಳಿಗೆ ಸರಕಾರವೇ ಪಾವತಿಸುವಂತಾಗಬೇಕು..ಕೊಡಗು ಜಿಲ್ಲೆ ಕೋರೋನಾ ಮುಕ್ತ ಜಿಲ್ಲೆಯಾಗಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಕೇಂದ್ರ, ರಾಜ್ಯ ಸರಕಾರ ಈ ಜಿಲ್ಲೆಗಾಗಿಯೇ ವಿಶೇಷ ಪ್ರವಾಸೋದ್ಯಮ ನೀತಿ ಜಾರಿಗೊಳಿಸಿ ಮೂರು ವರುಷಗಳಿಂದ ತಳಕಚ್ಚಿರುವ ಜಿಲ್ಲೆಯ ಪ್ರವಾಸೋದ್ಯಮವನ್ನುಮತ್ತೆ ಮೇಲೆತ್ತಬೇಕು. .ಅಂತರರಾಜ್ಯದ ವಾಹನಗಳಿಗೆ ಈಗಿರುವ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಕೊಡಗಿಗೆ ಅಥವಾ ಕರ್ನಾಟಕಕ್ಕೆ ಹೊರರಾಜ್ಯಗಳಿಂದ ತೆರಿಗೆ ರಹಿತವಾಗಿ ವಾಹನಗಳು ಬರುವಂತೆ ಮಾಡಬೇಕು. ಹೊಟೇಲ್ ಉದ್ಯಮ ಕಾರ್ಯನಿರ್ವಹಿಸುತ್ತಿರುವ ಕಟ್ಟಡದ ಮೇಲಿನ ಕಂದಾಯ ಶುಲ್ಕವನ್ನು ಕೆಲವು ವರ್ಷಗಳ ಮಟ್ಟಿಗೆ ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಕೊಡಗು ಗ್ರೀನ್ ಝೋನ್ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಎಲ್ಲ ರಿಯಾಯ್ತಿಗಳನ್ನೂ ಜಿಲ್ಲಾಡಳಿತ ನೀಡಿದೆ. ಈಗ ವಾರದಲ್ಲಿ ನಾಲ್ಕು ದಿನ ಮದ್ಯದಂಗಡಿಗಳೂ ಸೇರಿ ಎಲ್ಲ ಅಂಗಡಿಗಳನ್ನೂ ತೆರೆಯಲು ಜಿಲ್ಲಾಡಲಿತ ಅನುವು ಮಾಡಿಕೊಟ್ಟಿದೆ. ಅಲ್ಲದೆ ಹೇರ್ ಕಟಿಂಗ್ ಸಲೂನ್ , ಆಟೋ ರಿಕ್ಷಾ , ಟ್ಯಾಕ್ಸಿಗಳ ಓಡಾಟಕ್ಕೂ ಮೇ 4 ರಿಂದ ಅನುವು ಮಾಡಿಕೊಟ್ಟಿದೆ. ಆದರೆ ಚಿನ್ನಾಭರಣ ಅಂಗಡಿಗಳಿಗೆ ತೆರೆಯಲು ಅನುಮತಿ ನೀಡಿಲ್ಲ. ಒಟ್ಟಿನಲ್ಲಿ ಜಿಲ್ಲೆಯ ವಾಣಿಜ್ಯ ವಹಿವಾಟು ಹಿಂದಿನ ಸ್ಥಿತಿಗೆ ಮರಳಲು ಅಕ್ಟೋಬರ್ ನಂತರ ಮಾತ್ರ ಸಾಧ್ಯ.