• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೋಟಿ ಬೆಲೆಬಾಳುವ ಜಮೀನಿನಲ್ಲಿ ಕಾಡು ಬೆಳೆಸಿದ ಪರಿಸರ ಪ್ರೇಮಿ

by
December 29, 2019
in ಕರ್ನಾಟಕ
0
ಕೋಟಿ ಬೆಲೆಬಾಳುವ ಜಮೀನಿನಲ್ಲಿ ಕಾಡು ಬೆಳೆಸಿದ ಪರಿಸರ ಪ್ರೇಮಿ
Share on WhatsAppShare on FacebookShare on Telegram

ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುತ್ತದೆ ಆದರೆ ಬಾಗಿಲ ಬುಡದಲ್ಲಿ ಮಲೆನಾಡಿನ ಕುರುಹುಗಳೇ ಕಾಣುವುದಿಲ್ಲ, ಒಂದು ದಶಕದಲ್ಲಿ ಶಿವಮೊಗ್ಗ ಬದಲಾಗಿದ್ದು ನೋಡಿದರೆ ಯಾರಾದರೂ ಸರಿ ದಿಗ್ಭ್ರಾಂತರಾಗಿ ಬಿಡುತ್ತಾರೆ. ನಗರದ ಬೆಳವಣಿಗೆಯೂ ಅಷ್ಟೇ ಉಬ್ಬು ತಗ್ಗುಗಳನ್ನ ಮಟ್ಟಸಗೊಳಿಸಿ, ಕೆರೆ ಕಟ್ಟೆಗಳನ್ನ ಮುಚ್ಚಿ ವೇಗವಾಗಿ ಹಿರಿದಾಗುತ್ತಿದೆ, ಇಂದಿನ ಯುವಕರಿಗೆ ಶಿವಮೊಗ್ಗದ ಬೆಳವಣಿಗೆ ವ್ಹಾವ್‌ ಎನಿಸಬಹುದು, ಆದರೆ ಐದಾರು ದಶಕಗಳನ್ನ ಕಳೆದ ಹಿರಿಯರಿಗೆ ಈ ಬೆಳವಣಿಗೆ ಆತಂಕ ಸೃಷ್ಟಿಸಿದೆ, ಅದರಲ್ಲೂ ಪ್ರಕೃತಿ ಪ್ರಿಯರಾದರಂತೂ ಮುಗಿದೇ ಹೋಯ್ತು..! ಶಿವಮೊಗ್ಗ ನಗರದ ಹೊರವಲಯಕ್ಕೆ ಬಹಳ ಬೇಡಿಕೆ, ಸೈಟ್‌ಗಳ ಬೆಲೆಯಂತೂ ದುಬಾರಿಯಾಗಿದೆ, ಆಯಕಟ್ಟು ಪ್ರದೇಶ, ಚಾನೆಲ್‌ ನೀರಿನ ನಿನಾದ, ಹೆದ್ದಾರಿಗೆ ಹೊಂದಿಕೊಂಡ ಜಾಗವಾದರೇ ನಾವೇನು ಮಾಡಬಹುದು, ಅದನ್ನ ನಾಗೇಶ್‌ರವರು ಹುಸಿಗೊಳಿಸಿದ್ದಾರೆ, ಒಂದು ಎಕರೆ ಜಾಗವನ್ನ ಕೊಂಡು ಪಕ್ಷಿಗಳಿಗೆ ಯೋಗ್ಯವಾದ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ನೆಟ್ಟು ಕಿರು ಕಾಡನ್ನ ನಿರ್ಮಾಣ ಮಾಡಿದ್ದಾರೆ.

ADVERTISEMENT

ಶಿವಮೊಗ್ಗದಲ್ಲಿ ನವ್ಯಶ್ರೀ ನಾಗೇಶ್‌ ಹೆಸರು ಸಾಕಷ್ಟು ಪರಿಚಿತ, ಕೇಟರಿಂಗ್‌ ವೃತ್ತಿಯಲ್ಲಿವರು ಒಳಿತು ಕಂಡವರು. ಮೊದಲಿಂದಲೂ ಪ್ರಾಣಿ ಪಕ್ಷಿಗಳು ಹಾಗೂ ಮಲೆನಾಡಿನ ಸ್ವಾಭಾವಿಕ ಸಸ್ಯವರ್ಗ ಎಂದರೆ ಸಾಕಷ್ಟು ಪ್ರೀತಿ. ಅರವತ್ತರ ಆಸುಪಾಸಿನ ನಾಗೇಶ್‌ ಮಿತಭಾಷಿ, ಆದರೆ ಸಾಕಷ್ಟು ಜ್ಞಾನ ಹೊಂದಿದ್ದಾರೆ, ಪ್ರಾಣಿ ಪಕ್ಷಿ, ಮರ-ಗಿಡದ ಬಗ್ಗೆಯೇ ಮಾತು ಜಾಸ್ತಿ, ನಾಗೇಶ್‌ಗೆ ಶಿವಮೊಗ್ಗದ ಅಡ್ಡದಿಡ್ಡಿ ಬೆಳವಣಿಗೆ ಬಗ್ಗೆ ಆತಂಕವಿದೆ, ಮಲೆನಾಡಿನ ಹೆಸರು ಹೊತ್ತುಕೊಂಡಿರುವ ಜಿಲ್ಲಾ ಕೇಂದ್ರದಲ್ಲಿ ಗಿಡಮರಗಳ ಸುಳಿವೇ ಇಲ್ಲವಲ್ಲ ಎಂಬ ಬೇಸರ. ಮರ ಬೆಳೆಸಿ, ಕಾಡು ಉಳಿಸಿ, ರಸ್ತೆಯಂಚಿನಲ್ಲಿ ಸಾಲು ಮರಗಳಿರಲಿ ಎಂದು ಎಷ್ಟು ಹೇಳಲು ಸಾಧ್ಯ..? ನಗರದೊಳಗೆ ಶುದ್ಧ ಗಾಳಿಯೂ ಕಲುಷಿತವಾಗುವ ದಿನಗಳಲ್ಲಿ ನಾಗೇಶ್‌ ಈಶ್ವರ ವನ ಎಂಬ ಕಿರುಕಾಡನ್ನ ಬೆಳೆಸಿದ್ದಾರೆ.

ಶಿವಮೊಗ್ಗ ನಗರದ ಶಿಕಾರಿಪುರ ರಸ್ತೆ ( ರಾ.ಹೆ ೫೭) ಪಕ್ಕದಲ್ಲಿ ಒಂದು ಎಕರೆ ಜಮೀನು ಖರೀದಿಸಿಟ್ಟುಕೊಂಡಿದ್ದರು, ಅದನ್ನ ಏನು ಮಾಡಬೇಕು ಎಂಬ ಯೋಚನೆ ಬಂದಾಗ, ಆ ಜಾಗದಲ್ಲಿ ಲೇ ಔಟ್‌ ಮಾಡಬಹುದು, ಬಂಗಲೆ ಕಟ್ಟಬಹುದು, ಸೈಟ್‌ ಮಾಡಿ ಮಾರಬಹುದು, ಅಥವಾ ಹಾಗೇ ಇಟ್ಟುಕೊಂಡರೆ ದಿನೇ ದಿನೇ ಮೌಲ್ಯವರ್ಧನೆಯಾಗುತ್ತಲೇ ಇರುತ್ತಿತ್ತು, ಆದರೆ ಪೃಕೃತಿ ಪ್ರೇಮಿಯಾದ ನಾಗೇಶ್‌ ರೂಢಿಸಿಕೊಂಡ ಜೀವನ ಶೈಲಿಯಾಗಿರಲಿಲ್ಲ. ಕೇಟರಿಂಗ್‌ ನಿಂದ ಉತ್ತಮ ಜೀವನ ರೂಪಿಸಿಕೊಂಡಿದ್ದ ನಾಗೇಶ್‌ಗೆ ದೇವರ ಹೆಸರಲ್ಲೊಂದು ಕಿರು ಕಾಡನ್ನ ನಿರ್ಮಿಸಿ ಅಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ಬೆಳೆಸಬೇಕು ಎಂಬ ಬಯಕೆ ಇತ್ತು, ಐದಾರು ವರ್ಷಗಳ ಹಿಂದೆ ಮೊಳಕೆಯೊಡೆದ ಯೋಚನೆ ಈಶ್ವರವನ ಹೆಸರಿನಲ್ಲಿ ಕಿರುತೋಟವಾಯ್ತು ಈಗ ಕಿರು ಅರಣ್ಯವಾಗಿ ಕಂಗೊಳಿಸುತ್ತಿದೆ, ವಿವಿಧ ಪ್ರಬೇಧದ ಗಿಡಗಳು ಹಕ್ಕಿಗಳಿಗೆ ಆಶ್ರಯ ಒದಗಿಸುತ್ತಿವೆ, ಕೆಲವೇ ವರ್ಷಗಳಲ್ಲಿ ಈಶ್ವರವನ ನಗರವಾಸಿಗಳನ್ನೂ ಆಕರ್ಷಿಸಲಿದೆ.

ಈಶ್ವರ ಪ್ರಕೃತಿ ರಕ್ಷಕ, ಆತನ ಹೆಸರಲ್ಲೇ ಈ ಕಾಡು ಬೆಳೆದರೆ ಜನರಿಗೂ ಭಕ್ತಿ ಮೂಡುತ್ತೆ, ಹಾಳು ಗೆಡುವುದಿಲ್ಲ, ಇದು ಒಂದು ಕೋಟಿಗೂ ಅಧಿಕ ಹಣದ ,ಮೌಲ್ಯವಿರಬಹುದು, ಆದರೆ ನಾನಿಲ್ಲಿ ಮೂವತ್ತಕ್ಕೂ ಅಧಿಕ ತಳಿಯ ಮುನ್ನೂರು ಗಿಡಗಳನ್ನ ಬೆಳೆಸಿದ್ದೇನೆ, ಇದಕ್ಕೆ ಬೆಲೆ ಕಟ್ಟಲಾಗದು, ಗಂಟೆ ನಾದಗಳಿಲ್ಲದ, ಪೂಜೆ-ಪುನಸ್ಕಾರವಿರದ ಈಶ್ವರನ ದೇವಾಲಯವಿದೆ, ಇದರ ತಾತ್ಪರ್ಯವೂ ಕೂಡ ಸ್ವಾಭಾವಿಕ ಸಸ್ಯವರ್ಗದಂತೆ ಇರಲಿ ಎಂಬುದು ನನ್ನ ಆಶಯವಾಗಿದೆ, ವಿವಿಧೆಡೆ ಭಿನ್ನಗೊಂಡ ಶಿವಲಿಂಗಗಳನ್ನ, ವಿಗ್ರಹಗಳನ್ನ ತಂದಿರಿಸಲೂ ಇಲ್ಲಿ ವ್ಯವಸ್ಥೆ ಮಾಡಿದ್ದೇನೆ ಎನ್ನುತ್ತಾರೆ ನಾಗೇಶ್‌. ಇವರ ಕಾಯಕ ಒಂದು ಎಕರೆ ಕಾಡಿಗೆ ಸೀಮಿತವಾಗಿರದೇ, ಎರಡು ಕಿಲೋಮೀಟರ್‌ ಅಂತರದಲ್ಲಿ ಇನ್ನೊಂದು ಜಮೀನಿನಲ್ಲೂ ಹೀಗೆ ಸಾಗಿದೆ. ದೇವರು ಆಶೀರ್ವದಿಸಿದರೆ ಇನ್ನಷ್ಟು ಜಮೀನಿನಲ್ಲಿ ಕಾಡು ಬೆಳೆಸುವ ಉತ್ಸಾಹದಲ್ಲಿದ್ದಾರೆ.

Tags: Eishwara vanaEnvironmentforestMiniForestSave EnvironmentShivamoggaWesternGhatsಈಶ್ವರ ವನಕಾಡುಕಿರುಕಾಡುಪರಿಸರಪರಿಸರ ಉಳಿಸಿಪಶ್ಚಿಮ ಘಟ್ಟಶಿವಮೊಗ್ಗ
Previous Post

ದೇಶದ ಆರ್ಥಿಕ ಸ್ಥಿತಿ ಬದಲಿಸಿದ ವರ್ಷದ ಹನ್ನೆರಡು ವಿದ್ಯಮಾನಗಳೇನು ಗೊತ್ತಾ?

Next Post

ಆದಿತ್ಯನಾಥ್ ಗೆ ರಾಜನೀತಿಯ ಪಾಠ ಹೇಳುವವರು ಬಿಜೆಪಿಯಲ್ಲಿ ಇದ್ದಾರೆಯೇ?     

Related Posts

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!
ಕರ್ನಾಟಕ

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

by ಪ್ರತಿಧ್ವನಿ
May 25, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದ ವೇಳೆ, ಅವರ ಸಂಚಾರ ಮಾರ್ಗದ ಸಮೀಪ ಸ್ಫೋಟಕ ಪತ್ತೆಯಾಗಿದ್ದ...

Read moreDetails
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
Next Post
ಆದಿತ್ಯನಾಥ್ ಗೆ ರಾಜನೀತಿಯ ಪಾಠ ಹೇಳುವವರು ಬಿಜೆಪಿಯಲ್ಲಿ ಇದ್ದಾರೆಯೇ?      

ಆದಿತ್ಯನಾಥ್ ಗೆ ರಾಜನೀತಿಯ ಪಾಠ ಹೇಳುವವರು ಬಿಜೆಪಿಯಲ್ಲಿ ಇದ್ದಾರೆಯೇ?     

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada