ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ನಾಲ್ಕು ವಾರದಿಂದ ದೆಹಲಿ ಹೊರ ವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮಳೆ, ಬಿಸಿಲು, ಚಳಿ, ಗಾಳಿಯೆನ್ನದೇ ಕೇಂದ್ರದ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಇರುವರೆಗೂ ಇಪತ್ತೈದಕ್ಕೂ ಹೆಚ್ಚು ರೈತರು ಅಸುನೀಗಿದ್ದಾರೆ. ಕೇಂದ್ರ ಸರ್ಕಾರ ನಿರ್ಲಕ್ಷ್ಯದ ನಡುವೆಯೂ ರೈತರ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಹೋರಾಟಗಾರರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಚಳಿ ಗಾಳಿಗೆ ಅಕ್ಷರಶಃ ಕಂಗಾಲಾಗಿದ್ದಾರೆ. ಇದರ ಪರಿಣಾಮ ಇಪತ್ತೈದಕ್ಕೂ ಹೆಚ್ಚು ಮೃತಪಟ್ಟ ವರದಿಯಾಗಿದೆ. ಇವರ ಹೋರಾಟ ಮುಂದುವರಿದಿದ್ದು, ದೇಶ ಮಾತ್ರವಲ್ಲದೇ ವಿದೇಶದಿಂದಲೂ ವ್ಯಾಪಕ ಬೆಂಬಲ ಸಿಗುತ್ತಿದೆ. “ನಾವು ವಿಪರೀತ ಚಳಿ ನಡುವೆಯೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಯುತ್ತದೆ. ಮಳೆ ಚಳಿ ಬಿಸಿಲು ಯಾವುದಕ್ಕೂ ನಾವು ಬಗ್ಗುವುದಿಲ್ಲ” ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಂತಹ ಸಂದರ್ಭದಲ್ಲಿ ರೈತರಿಗೆ ನೈತಿಕ ಬೆಂಬಲ ತುಂಬಲು ಪಂಜಾಬ್ ರೈತ ಹೋರಾಟಗಾರರೊಬ್ಬರು ಎರಡು ದಿನಗಳ ಕಾಲ ಬರೋಬ್ಬರಿ 370 ಕಿ.ಮೀ ದೂರ ಸೈಕಲ್ ತುಳಿದು ಪ್ರತಿಭಟನಾ ಸ್ಥಳ ಸೇರಿದ್ದಾರೆ. ಸೈಕಲ್ ತುಳಿದು ಕೇಂದ್ರ ಸರ್ಕಾರ ವಿರುದ್ಧ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತಾಡಿದ ಸೈಕಲ್ ತುಳಿದ ಪಂಜಾಬ್‌ನ ಕೃಷಿಕ ಸುಖ್ಪಾಲ್ ಬಜ್ವಾ ಎಂಬುವರು, “ನಾನು ಪ್ರತಿಭಟನಾ ಸ್ಥಳ ಸಿಂಗುವನ್ನು ತಲುಪಬೇಕಾಗಿತ್ತು. ಹೀಗಾಗಿ ರೈತರ ಆಂದೋಲನ ಬೆಂಬಲಿಸಲು 370 ಕಿ.ಮೀ. ದೂರ ಸೈಕಲ್‌ನಲ್ಲೇ ಬಂದಿದ್ದೇನೆ. ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳ್ಳದಿದ್ದರೆ, ನಾನು ನನ್ನ ಜೀವನೋಪಾಯವನ್ನೇ ಕಳೆದುಕೊಳ್ಳುಬೇಕಾಗುತ್ತದೆ ಎಂದರು.
ನನ್ನ ಬಳಿ ಯಾವುದೇ ವಾಹನವಿಲ್ಲ. ಹೇಗಾದರೂ ಸರಿ ರೈತರ ಹೋರಾಟದಲ್ಲಿ ಭಾಗಿಯಾಗಬೇಕಿತ್ತು. ಹೀಗಾಗಿ ನಾನು ನಿತ್ಯ ಓಡಿಸುವ ಸೈಕಲ್‌ನಲ್ಲೇ ಸಿಂಗು ಪ್ರತಿಭಟನಾ ಸ್ಥಳಕ್ಕೆ ತಲುಪಿದೆ ಎಂದರು ಪಂಜಾಬ್ ಮೊಗಾ ಜಿಲ್ಲೆಯ 36 ವರ್ಷದ ಸುಖ್ಪಾಲ್ ಬಜ್ವಾ.
ನನ್ನ ಸೈಕಲ್ ಪ್ರಯಾಣ ತುಂಬಾ ಕಠಿಣವಾಗಿತ್ತು. “ನನ್ನ ಊರು ಬಿಟ್ಟು ಇಷ್ಟು ದೂರ ಬಂದಿರುವುದು ಇದೇ ಮೊದಲು. ಸೈಕಲ್‌ನಲ್ಲಿ ಬಂದಿದ್ದರಿಂದ ಸಿಂಗು ತಲುಪ ಎರಡು ದಿನ ಬೇಕಾಯ್ತು. ಮೋಟಾರು ವಾಹನದಲ್ಲಿ ಬಂದರೆ ಕೇವಲ ಆರು ಗಂಟೆ ಸಾಕು ಎಂದು ಹೇಳಿದರು.