ಬೆಂಗಳೂರು : ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬುವುದು ಎಲ್ಲರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಸ್ಪರ್ಧಿಗಳ ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ, ಅನ್ನದಾನಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ಕಂಟೆಸ್ಟೆಂಟ್ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಂಡ್ಯದಲ್ಲಿ ಗಿಲ್ಲಿನಟನ ಅಭಿಮಾನಿಗಳು ಅನ್ನದಾಸೋಹ ಮಾಡಿ ದೇವರಲ್ಲಿ ಗಿಲ್ಲಿ ಗೆಲ್ಲಬೇಕೆಂದು ಹರಕೆ ಹೊತ್ತಿದ್ದಾರೆ. ಅಲ್ಲದೆ ಅಶ್ವಿನಿ ಗೌಡ ಅಭಿಮಾನಿಗಳು ಕೂಡ ಬೆಂಗಳೂರಿನಲ್ಲಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಅರ್ಚನೆ ಮಾಡಿಸಿದ್ದಾರೆ.
ಇದನ್ನೂ ಓದಿ : ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK
ಇನ್ನೂ ಈ ಬಾರಿಯ ಬಿಗ್ ಬಾಸ್ ಸೀಸನ್ ಆರಂಭದಿಂದಲೂ ವಿವಿಧ ಕಾರಣಗಳಿಗೆ ವೈಶಿಷ್ಟ್ಯ ಪಡೆದಿತ್ತು. ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲುವುದಕ್ಕಾಗಿಯೇ ಅಭಿಮಾನಿಗಳು ಕೂಡ ಅಷ್ಟೇ ಉತ್ಸಾಹದಿಂದ ವೋಟಿಂಗ್ ಮಾಡಿದ್ದಾರೆ. ಗಿಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಅಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ವೋಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಒಂದು ಮಾಹಿತಿಯ ಪ್ರಕಾರ ಗಿಲ್ಲಿಗೆ ಗಿಲ್ಲಿಗೆ 47,9845213 ವೋಟ್‌ಗಳು ಬಂದಿವೆ ಎನ್ನಲಾಗಿದೆ. ರಕ್ಷಿತಾ ಶೆಟ್ಟಿಗೆ 27,3465902 ಮತಗಳು ಬಂದಿದ್ದು, ಶನಿವಾರ ರಾತ್ರಿಯವರೆಗಿನ ವರದಿಯ ಪ್ರಕಾರ ಇಬ್ಬರು ಸ್ಪರ್ಧಿಗಳಿಗೆ ಈ ಮತಗಳು ಬಂದಿವೆ ಎಂಬ ಮಾಹಿತಿ ದೊರೆತಿದೆ.

ಬಿಗ್ ಬಾಸ್ ಮನೆಯ ಒಡೆಯ ಯಾರಾಗಲಿದ್ದಾರೆ ಎಂಬ ಕುತೂಹಲ ಕ್ಷಣ ಕ್ಷಣಕ್ಕೂ ಜಾಸ್ತಿಯಾಗುತ್ತಿದೆ. ಇಂದು ರಾತ್ರಿಯಷ್ಟರಲ್ಲಿ ಅಧಿಕೃತವಾಗಿ ನಟ ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ. ರಾಜ್ಯವಲ್ಲದೆ ಹೊರ ರಾಜ್ಯಗಳಲ್ಲೂ ಕನ್ನಡದ ಬಿಗ್ ಬಾಸ್ ಪ್ರಭಾವ ಬೀರಿದ್ದು, 6 ರಾಜ್ಯಗಳಿಂದ ಸ್ಪರ್ಧಿಗಳಿಗೆ ವೋಟ್‌ಗಳು ಬಂದಿರುವುದು ಈ ಬಾರಿಯ ಬಿಗ್ ಬಾಸ್ ಸೀಸನ್‌ನ ಖ್ಯಾತಿ ಇನ್ನಷ್ಟು ಹೆಚ್ಚುವಂತೆ ಮಾಡಿದೆ.











