ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ದಾಖಲೆಗಲು ನೀಡುವಂತೆ, ಲೆಕ್ಕ ನೀಡುವಂತೆ ವಿಪಕ್ಷ ನಾಯಕರು ಹಾಗೂ ಮಾಜಿ ಮುಖ್ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸರ್ಕಾರವನ್ನು ಕೇಳುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಆರ್. ಅಶೋಕ್, ದಾಖಲೆಗಳನ್ನು ಆರ್‌ಟಿಐ ಮುಖಾಂತರ ರಾಜ್ಯದ ಜನತೆ ಯಾರು ಕೂಡ ಪಡೆಯಬಹುದು, ಅವರೂ ಪಡೆಯಬಹುದು. ಇದು ಅವರಿಗೂ ಗೊತ್ತು ಎಂದು ಆರ್ ಅಶೋಕ್ ಹೇಳಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಪಕ್ಷ ಬರೆದ ಪತ್ರಕ್ಕೆ ಉತ್ತರ ಕೊಟ್ಟಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರು ಅಧಿಕಾರದಲ್ಲಿದ್ದಾಗ ನಾವು ಪತ್ರ ಬರೆದಿದ್ದೀವಿ. ಆವಾಗ ಅವರು ಎಷ್ಟು ಉತ್ತರ ನೀಡಿದ್ದಾರೆಂದು ಗೊತ್ತು. ಈಗ ನಾವು ಉತ್ತರ ಕೊಟ್ಟಿದ್ದೀವಿ, ಅವರು ಇಂದು ಕೊಡಿ, ನಾಳೆ ಕೊಡಿ ಎಂದು ಆದೇಶ ನೀಡೋಕೆ ಅವರು ಕೋರ್ಟ್ ಅಲ್ಲ, ಸಮಯ ಬಂದಾಗ ಉತ್ತರ ಕೊಡ್ತೀವಿ ಎಂದು ಹೇಳಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯ ಲೋಕಾಯುಕ್ತ ರದ್ದುಪಡಿಸಿ ಪರಿಚಯಿಸಿದ ಎಸಿಬಿಗೆ ದೂರು ಕೊಡಲಿ. ಅದರ ಮೇಲೆ ಸಿದ್ದರಾಮಯ್ಯರಿಗೆ ಬಹಳ ನಂಬಿಕೆ ಇದೆ. ಎಸಿಬಿಗೆ ನೀಡಿ ತನಿಖೆ ನಡೆಸಲಿ ಎಂದು ಅಶೋಕ್ ಸವಾಲು ಹಾಕಿದ್ದಾರೆ
ಇನ್ನು ತನಿಖೆ ಮಾಡುವ ವಿಚಾರದಲ್ಲಿ ಮಾತನಾಡಿರುವ ಅಶೋಕ್, ಕಾಂಗ್ರೆಸ್ ಮಾಡಿ ಎಂದು ಹೇಳಿದ ತಕ್ಷಣಕ್ಕೆ ತನಿಖೆ ನಡೆಸಲು ನಾವು ಅವರ ಗುಲಾಮರಲ್ಲ ಎಂದಿದ್ದಾರೆ.