ಮಧ್ಯಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆ, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಕಾಂಗ್ರೆಸ್ ಮುಖಂಡರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇತರ 22 ನಾಯಕರು ಬಿಜೆಪಿ ಸೇರಿದ್ದರಿಂದ ಈಗ ಉಪಚುನಾವಣೆ ಎದುರಾಗಿದೆ. ಬಿಜೆಪಿ ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಸಿಂಧಿಯಾ ಕೂಡಾ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ದಬ್ರಾ ಎಂಬಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿ ಬಿಜೆಪಿಗೆ ಮುಜುಗರ ತಂದಿಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಮತಯಂತ್ರದಲ್ಲಿರುವ ಕೈ ಚಿಹ್ನೆಗೆ ನಿಮ್ಮ ಮತವನ್ನು ಒತ್ತಿ. ನವೆಂಬರ್ 3ರಂದು ಕಾಂಗ್ರೆಸ್‌ಗೆ ನಿಮ್ಮ ಮತ ನೀಡಿ,” ಎಂದು ಬಹಿರಂಗ ಸಭೆಯಲ್ಲಿ ಹೇಳಿರುವ ವೀಡಿಯೋ ತುಣುಕು ಈಗ ವೈರಲ್ ಆಗುತ್ತಿದೆ. ಅವರ ಜೊತೆ ವೇದಿಕೆಯಲ್ಲಿ ಇದ್ದವರು ಒಂದು ಕ್ಷಣಕ್ಕೆ ದಿಗ್ಮೂಢರಾಗಿ ಸಿಂಧಿಯಾ ಅವರನ್ನು ನೋಡಿದ್ದಾರೆ. ತಕ್ಷಣವೇ ತಮ್ಮ ತಪ್ಪನ್ನು ತಿದ್ದುಕೊಳ್ಳಲು ಪ್ರಯತ್ನಿಸಿದ ಸಿಂಧಿಯಾ ಅವರು, ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದಾರೆ.
जलेबी बहुत अच्छे से मीठी हो गयी भई मज़ा आ गया गजब कॉमेडी थी।#imratidevi #JyotiradityaScindia pic.twitter.com/dPjnxt9F7Q
— Ravindra Bhargava (@RavindraBharg18) November 1, 2020
ಇದರಿಂದಾಗಿ ಮುಜುಗರಕ್ಕೆ ಒಳಗಾದ ಅಭ್ಯರ್ಥಿ ಇಮಾರ್ತಿ ದೇವಿ ಅವರು ತಮ್ಮ ಪಕ್ಕದಲ್ಲಿ ನಿಂತವರನ್ನು ನೋಡಿ ನಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಈ ವೀಡಿಯೋವನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆ. ವೀಡಿಯೋವನ್ನು ತನ್ನ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್, “ಸಿಂಧಿಯಾ ಅವರೇ, ನವೆಂಬರ್ 3ರಂದು ಮಧ್ಯಪ್ರದೇಶದ ಜನತೆ ʼಕೈʼ ಗುರುತಿಗೆ ಮತ ಹಾಕಲಿದ್ದಾರೆ. ನೀವು ನಿಶ್ಚಿಂತೆಯಿಂದಿರಿ,” ಎಂದು ಹೇಳಿದೆ.
सिंधिया जी,
मध्यप्रदेश की जनता विश्वास दिलाती है कि तीन तारीख़ को हाथ के पंजे वाला बटन ही दबेगा। pic.twitter.com/dGJWGxdXad— MP Congress (@INCMP) October 31, 2020