ಕಾಲ್ನಡಿಗೆಯಲ್ಲಿ ಊರಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ, ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ, ರೈತರ ಬ್ಯಾಂಕ್ ಅಕೌಂಟ್ ಗಳಿಗೆ ನೇರವಾಗಿ ಸರ್ಕಾರ ಹಣ ಜಮಾವಣೆ ಮಾಡಬೇಕು. ನಮ್ಮ ಜನರ ಅಕೌಂಟ್ ಗಳಿಗೆ ಹಣ ಹಾಕದಿದ್ದರೆ ನಮ್ಮ ಆರ್ಥಿಕತೆ ಮೇಲೇಳುವುದಿಲ್ಲ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪರಿಚಯಿಸಿದ ʼನ್ಯಾಯ್ʼ ಯೋಜನೆಯನ್ನು ಸರ್ಕಾರ ಶಾಶ್ವತವಲ್ಲದಿದ್ದರೂ, ತಾತ್ಕಾಲಿಕವಾದರೂ ಕಾರ್ಯರೂಪಕ್ಕೆ ತರಬೇಕೆಂದು ರಾಹುಲ್ ಗಾಂಧಿ ಸರ್ಕಾರಕ್ಕೆ ಕೋರಿದರು.
ಲಾಕ್ಡೌನ್ ತೆಗೆದು ಹಾಕಿದರೂ ಬುದ್ದಿವಂತಿಕೆಯಿಂದ ತೆಗೆದುಹಾಕಬೇಕು. ನಮ್ಮ ಹಿರಿಯರನ್ನು, ಅಧಿಕ ರಕ್ತದೊತ್ತಡವಿರುವ, ಕಿಡ್ನಿ ಸಮಸ್ಯೆವಿರುವ ರೋಗಿಗಳ ಜೀವವನ್ನು ತ್ಯಾಗ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ವೀಡಿಯೋ ಕಾನ್ಫರೆನ್ಸ್ನಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಗುಜರಾತಿನ ವೈಫಲ್ಯಗಳ ಕುರಿತು ರಾಹುಲ್ ಗಾಂಧಿ ಬಳಿ ಕೇಳಿದಾಗ, ಇದು ವೈಫಲ್ಯಗಳನ್ನು ಎತ್ತಿ ತೋರಿಸುವ ಸಮಯವಲ್ಲ, ಭಾರತ ಬಹಳ ದೊಡ್ಡ ಸವಾಲನ್ನು ಎದುರಿಸುತ್ತಿದೆ. ವಿರೋಧ ಪಕ್ಷವಾಗಿ ನಮಗೂ ಜವಾಬ್ದಾರಿಗಳಿವೆ. ನಮ್ಮ ಸಂಘಟನೆ ನಮ್ಮದೇ ರೀತಿಯ ಕೆಲಸ ಮಾಡುತ್ತಿದೆ. ಕೇರಳದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಸಾಧನೆ ಮಾಡುತ್ತಾ ಬಂದಿದೆ. ಎಲ್ಲಾ ಕೇರಳಿಯರಿಗೂ ಅದರ ಶ್ರೇಯಸ್ಸು ಸಲ್ಲಬೇಕು.
ʼಆರ್ಥಿಕ ತೂಫಾನ್ʼ ಬರುತ್ತಿದೆ ಇದು ಸರ್ಕಾರದೆಡೆಗೆ ಬೆರಳು ತೂರಿಸುವ ಸಮಯವಲ್ಲ. ಆದರೂ ಸರ್ಕಾರದ ಗಮನ ಸೆಳೆಯಬೇಕು , ಆರ್ಥಿಕ ತೂಫಾನ್ ಬರುತ್ತಿದೆ, ಅದನ್ನು ಸಮರ್ಥವಾಗಿ ಎದುರಿಸಿ ಎಂದು ಸಲಹೆ ನೀಡುವುದು ವಿರೋಧ ಪಕ್ಷದ ಕೆಲಸ. ಅದಕ್ಕಾಗಿ ಈ ವೀಡಿಯೋ ಕಾನ್ಫರೆನ್ಸ್ ಎಂದು ರಾಹುಲ್ ತಿಳಿಸಿದ್ದಾರೆ.











