ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಡಿ.ಕೆ ಶಿವಕುಮಾರ್ ಪ್ರತ್ಯಂಗಿರಾ ಹೋಮ ಹಾಗೂ ಶತ್ರು ಸಂಹಾರ ಪೂಜೆ ನಡೆಸಿದ್ರು. ಈ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಎಲ್ಲರನ್ನೂ ದೇವರೇ ಕಾಪಾಡಬೇಕು ಎಂದಿದ್ದಾರೆ. ಅಧಿಕಾರ ಬೇಕು ಅಂತ ಎಲ್ಲೋ ಶತ್ರು ನಾಶಕ್ಕೆ ಹೋಗೋದು. ಅಲ್ಲೂ ಕೂಡಾ ಅಧಿಕಾರ ಕೊಡಪ್ಪಾ ಅಂತಾ ದೇವರನ್ನು ಕೇಳೋದು.. ಇದೆಲ್ಲಾ ಏನು ಅಂತಾ ಡಿ.ಕೆ ಶಿವಕುಮಾರ್ ಶತ್ರು ನಾಶ ಪೂಜೆ ಬಗ್ಗೆ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‌ನ ದಲಿತ ಶಾಸಕರ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ವ್ಯಂಗ್ಯವಾಡಿರುವ ಕುಮಾರಸ್ವಾಮಿ, SC-ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ ಅದಕ್ಕೆ ಸಭೆ ಮಾಡ್ತೀನಿ ಅಂತಾರೆ.. ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡೋದಾದ್ರೆ ಕ್ಯಾಬಿನೆಟ್ ಇರೋದು ಯಾಕೆ..? ಅಂತಾ ಪ್ರಶ್ನಿಸಿದ್ದಾರೆ. ಇನ್ನು SC-ST ಇರಲಿ ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ಚರ್ಚೆ ಮಾಡಬೇಕು ಅಲ್ಲವೇ..? ಸಪರೇಟ್ ಊಟಕ್ಕೆ ಸೇರಿ ಡಿನ್ನರ್‌ನಲ್ಲಿ ಚರ್ಚೆ ಮಾಡ್ತೀರಾ..? ಎಂದು ಕುಹಕವಾಡಿದ್ದಾರೆ.
ಇನ್ನು ರಾಜ್ಯ ಸರ್ಕಾರದ ವಿರುದ್ಧವೂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ. ಕಮಿಷನ್ ಆರೋಪಕ್ಕೆ ಹಂಗಾಮಿ ಅಧ್ಯಕ್ಷರು ಕೊಟ್ಟಿರೋ ಹೇಳಿಕೆಗಿಂತಾ ಹೆಚ್ಚಿನ ಸಾಕ್ಷ್ಯ ಬೇಕಾ..? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮಹಾನ್ ನಾಯಕರು, ಈ ಹಿಂದೆ ಪೇ ಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ರು. ಬಿಜೆಪಿ ಸರ್ಕಾರದ ವಿರುದ್ಧದ ಆರೋಪದ ಬಗ್ಗೆ ಇಲ್ಲಿಯವರೆಗೆ ಸಿದ್ದರಾಮಯ್ಯ ಯಾವ ದಾಖಲೆ ಇಟ್ಟಿದ್ದಾರೆ..? ಅಂತ ಪ್ರಶ್ನೆ ಮಾಡಿದ್ದಾರೆ
ಮಗ ಸೋತಿರೋದಕ್ಕೆ ಹತಾಶರಾಗಿ ಕುಮಾರಸ್ವಾಮಿ 60 ಪರ್ಸೆಂಟ್ ಆರೋಪ ಮಾಡ್ತಿದ್ದಾರೆ ಅಂತ ಕೃಷ್ಣಭೈರೇಗೌಡ ಹೇಳಿದ್ದಾರೆ..ನಾನು ಮಗ ಸೋತಿರೋದಕ್ಕೆ ಹತಾಶೆಯಾಗಿದ್ದೇನೋ..? ಇಲ್ಲವೋ..? ಅದನ್ನ ಬಿಟ್ಟು ಬಿಡಿ.. ಮೊದಲು 60 ಪರ್ಸೆಂಟ್ ಕಮೀಷನ್‌ಗೆ ಉತ್ತರ ಹೇಳಪ್ಪ ಎಂದಿರುವ ಕುಮಾರಸ್ವಾಮಿ, ಕಂದಾಯ ಇಲಾಖೆ ಏನು ಸತ್ಯವಾಗಿ ನಡೀತಿದ್ಯಾ..? ಬೆಂಗಳೂರು AC ಪೋಸ್ಟ್ಗೆ ಎಷ್ಟು ದುಡ್ಡು ತಗೋತಿರಾ..? ಆ ಹಣ ಯಾಱರಿಗೆ ಹೋಗುತ್ತದೆ. ಏನೇನು ಮಾಡ್ತೀರಾ ನಮಗೆ ಗೊತ್ತಿಲ್ವಾ..? ಕಂದಾಯ ಇಲಾಖೆಯಲ್ಲಿ ಅಕ್ರಮ ನಡೀತಿದೆ ಅಂತ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.