ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ವಾರದಲ್ಲಿ , ಮಾಸ್ಕ್ ಧರಿಸದಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದ ಸುಮಾರು 11,624 ಜನರಿಗೆ ದಂಡ ವಿಧಿಸಿದೆ. ಸುಮಾರು 5.2 ಲಕ್ಷ ರೂ. ದಂಡ ಸಂಗ್ರಹಿಸಿದೆ.
ಪ್ರತಿದಿನ, ಪ್ರೊಟೊಕಾಲ್ ಉಲ್ಲಂಘಿಸಿದ ಸುಮಾರು 1600 ರಿಂದ 2000 ಜನರಿಗೆ ದಂಡ ವಿಧಿಸಲಾಗುತ್ತಿದೆ, ವಾರಾಂತ್ಯದಲ್ಲಿ ಈ ಸಂಖ್ಯೆಗಳು ಹೆಚ್ಚಾಗುತ್ತಿವೆ. ದಕ್ಷಿಣ, ಪಶ್ಚಿಮ ಮತ್ತು ಪೂರ್ವ ವಲಯಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಭಾನುವಾರ, ಮಾಸ್ಕ್ ಧರಿಸದ ಕಾರಣಕ್ಕಾಗಿ ದಕ್ಷಿಣ ವಲಯದಲ್ಲಿ 537 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, 121 ಜನರನ್ನು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದ ಕಾರಣಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಪಶ್ಚಿಮ ವಲಯದಲ್ಲಿ, ಮಾಸ್ಕ್ ಧರಿಸದ ಕಾರಣ 456 ಮತ್ತು ಸಾಮಾಜಿಕ ಅಂತರವನ್ನು ಉಲ್ಲಂಘಿಸಿದ್ದಕ್ಕಾಗಿ 29 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೂರ್ವ ವಲಯದಲ್ಲಿ, ಮಾಸ್ಕ್ ಸರಿಯಾಗಿ ಧರಿಸದಿರುವುದಕ್ಕೆ 424, ಮತ್ತು ಸಾಮಾಜಿಕ ಅಂತರವನ್ನು ಗಮನಿಸದಿದ್ದಕ್ಕಾಗಿ 48 ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಎಂಪಿ ತಿಳಿಸಿದ್ದಾರೆ.

ದಂಡ ವಿಧಿಸುವ ವಿಧಾನಕ್ಕಿಂತ ಹೆಚ್ಚಾಗಿ, ಸಾಂಕ್ರಾಮಿಕ ರೋಗದ ಪ್ರೋಟೋಕಾಲ್ಗಳನ್ನು ಅನುಸರಿಸಲು ನಾವು ಧಾರ್ಮಿಕ ಮುಖಂಡರು ಮತ್ತು ಸಂಸ್ಥೆಯ ಮುಖ್ಯಸ್ಥರ ಮೂಲಕ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.
ದಂಡವನ್ನು ಇತ್ತೀಚೆಗೆ 250 ರೂ.ಗೆ ಇಳಿಸಲಾಗಿದ್ದರೂ, ದಂಡವನ್ನು ಕಟ್ಟಲು ಇನ್ನೂ ವಿರೋಧ ವ್ಯಕ್ತವಾಗುವುದರಿಂದ ಮಾರ್ಷಲ್‌ಗಳಿಗೆ ದಂಡ ವಿಧಿಸುವುದು ಸವಾಲಾಗುತ್ತಿದೆ. “ಪ್ರೊಟೋಕಾಲ್ ಉಲ್ಲಂಘಿಸುವವರು ವಿರೋಧವನ್ನು ತೋರಿಸಿದಾಗಲೆಲ್ಲಾ ಮಾರ್ಷಲ್‌ಗಳು ಪೊಲೀಸರ ಮೊರೆ ಹೋಗಬೇಕಾಗುತ್ತದೆ ಎಂದು ರಂದೀಪ್ ತಿಳಿಸಿದ್ದಾರೆ.

ಪ್ರತಿ ಮಾರ್ಷಲ್ ಗಳು ಮಾಸ್ಕ್ ಧರಿಸದಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದ 20 ಪ್ರಕರಣಗಳನ್ನು ದಾಖಲಿಸುತ್ತವೆ. 198 ವಾರ್ಡ್‌ಗಳಿಗೆ ಸುಮಾರು 200 ಮಾರ್ಷಲ್‌ಗಳಿವೆ. ವಿವಿಧ ತಂಡಗಳಲ್ಲಿ ಡ್ರೈವ್‌ಗಳಿಗೆ ಹೋಗುವ ಪ್ರತಿ ತಂಡಕ್ಕೆ ಮೂರು ಮಾರ್ಷಲ್‌ಗಳ ಗಸ್ತು ತಂಡಗಳಿವೆ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹೇಳಿದ್ದಾರೆ.
ಅದರ ಜೊತೆಗೆ, ಪೊಲೀಸರು ಕೂಡಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾಸ್ಕ್ ಧರಿಸದಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದ ವಿಧಿಸುತ್ತಿದ್ದಾರೆ.












