ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟೆಂಬರ್ 9ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 3146 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ 1,612 ಹೊಸ ಪ್ರಕರಣಗಳು ಕಂಡು ಬಂದಿವೆ.
ರಾಜ್ಯದಲ್ಲಿ ಒಟ್ಟು ಕರೋನಾ ಪೀಡಿತರ ಸಂಖ್ಯೆ 8,12,784 ತಲುಪಿದ್ದು, ಇವರಲ್ಲಿ 7,33,558 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯವಾಗಿರುವ 68,161 ಪ್ರಕರಣಗಳಲ್ಲಿ, 939 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಇದುವರೆಗೂ 11,046 ಮಂದಿ ಅಸುನೀಗಿದ್ದಾರೆ.