ಕರ್ನಾಟಕ ಲೋಕ ಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ದಿ:15-03-2024ರಂದು ಪದವಿ ಹಾಗೂ ಪದವಿಮಟ್ಟಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ವಿವಿದ ಗ್ರೂಪ್ ಸಿ-373+113 (ಹೈ.ಕ.) ಹುದ್ದೆಗಳನ್ನು ಭರ್ತಿ ಮಾಡಲು ಪ್ರತ್ಯೇಕವಾಗಿ ಅಧಿಸೂಚನೆ ಜಾರಿ ಮಾಡಲಾಗಿತ್ತು. ಸದರಿ ಅಧಿಸೂಚನೆಗಳಲ್ಲಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಾಯಕ ಗ್ರಂಥಪಾಲಕ 13+08 (ಹೈಕ) ಹುದ್ದೆಗಳಿಗೆ ಮತ್ತು ಗ್ರಂಥಪಾಲಕ 10+03(ಹೈಕ) ಹುದ್ದೆಗಳಿಗೆ ಅಥವಾ ಅಥವಾ ವಿದ್ಯಾರ್ಹತೆಯನ್ನು ಇಲಾಖೆಯ ಸ್ಪಷ್ಟೀಕರಣದನ್ವಯ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡುವ ದೃಷ್ಟಿಯಿಂದ ದಿ: 15-03-2024ರಂದು ಅಧಿಸೂಚಿಸಿದ ಎಲ್ಲಾ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು 10-06-2024 ರವರೆಗೆ ವಿಸ್ತರಿಸಲಾಗಿದೆ.

