ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಜೂನ್ 11 ರಂದು ಹೊರಡಿಸಿರುವ ಪತ್ರಿಕಾ ಪ್ರಕಟನೆ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 204 ಹೊಸ ಕರೋನಾ ಪ್ರಕರಣ ದಾಖಲಾಗಿದೆ. ಇಂದು 114 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ರಾಜ್ಯದಲ್ಲಿ ಇದುವರೆಗೂ 2,976 ಮಂದಿ ಕರೋನಾದಿಂದ ಚೇತರಿಕೆಗೊಂಡಿದ್ದಾರೆ.
ಕರ್ನಾಟಕದಲ್ಲಿ 3,195 ಸಕ್ರಿಯ ಪ್ರಕರಣಗಳಿದ್ದು 10 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಒಟ್ಟು 72 ಮಂದಿ ಕರೋನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ದೇಶದಲ್ಲಿ 9,985 ಹೊಸ ಪ್ರಕರಣಗಳು ಇಂದು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷದ 87 ಸಾವಿರ ದಾಟಿದೆ. ದೇಶದಲ್ಲಿ ಇದುವರೆಗೂ 1 ಲಕ್ಷದ 41 ಸಾವಿರ ಮಂದಿ ರೋಗದಿಂದ ಚೇತರಿಸಿಕೊಂಡಿದ್ದಾರೆ. ಕರೋನಾದಿಂದಾಗಿ ದೇಶದಲ್ಲಿ 274 ಮಂದಿ ಇಂದು ಅಸುನೀಗಿದ್ದು ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 8,102 ತಲುಪಿದೆ.