ಕಲಬುರಗಿಯಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರೋನಾದಿಂದಾಗಿ ಮೃತಪಟ್ಟಿದ್ದು, ಮೃತರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಕರ್ನಾಟಕದಲ್ಲಿ ಒಟ್ಟು ಅಸುನೀಗಿದವರ ಸಂಖ್ಯೆ 32 ಕ್ಕೇರಿದೆ.
ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಮೇ 12 ರ ಸಂಜೆ 5 ರ ವೇಳೆಗೆ 925 ಇದ್ದ ಕರೋನಾ ಸೋಂಕಿತರ ಸಂಖ್ಯೆ 951 ಕ್ಕೇರಿದೆ.
ಬೀದರ್‌ನಲ್ಲಿ 11 ಪ್ರಕರಣಗಳು ಕಂಡು ಬಂದಿದ್ದು ಹಾಸನದಲ್ಲಿ 4, ದಾವಣಗೆರೆ, ವಿಜಯಪುರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ತಲಾ ಒಂದೊಂದು ಪ್ರಕರಣಗಳಂತೆ ದಕ್ಷಿಣ ಕನ್ನಡ, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಪತ್ತೆಯಾಗಿದೆ.






