ಕರೋನಾ ಸೋಂಕು ದೇಶದಲ್ಲಿ ಯಾವ ರೀತಿ ಹಬ್ಬುತ್ತಿದೆಯೆಂದರೆ, ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಸತತವಾಗಿ ಏಳು ಸಾವಿರಕ್ಕಿಂತಲೂ ಅಧಿಕ ಕರೋನಾ ಸೋಖಿತರ ಪತ್ತೆಯಾಗುತ್ತಿರುವ ಈ ಸಂದರ್ಭದಲ್ಲಿ ಲಾಕ್‌ಡೌನ್ ಅನ್ನು ಸಡಿಲಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.
ಭಾರತದಲ್ಲಿ ಸದ್ಯಕ್ಕೆ 93,721 ಸಕ್ರಿಯ ಪ್ರಕರಣಗಳಿದ್ದು, ಐದನೇ ಸ್ಥಾನದಲ್ಲಿದ್ದ ಸ್ಪೇಯ್ನ್ (62,424) ನ್ನು ಹಿಂದಿಕ್ಕಿದೆ. ಇನ್ನು ಅಮೇರಿಕಾದಲ್ಲಿ (11,31,505) ಅತೀ ಹೆಚ್ಚು ಕರೋನಾ ಸಕ್ರಿಯ ಪ್ರಕರಣಗಳಿದ್ದು, ಇದರ ನಂತರ ಬ್ರೆಜಿಲ್ (2,06,555) ಮತ್ತು ರಷ್ಯಾ (1,75,877) ರಾಷ್ಟ್ರಳಿವೆ. ಒಟ್ಟಾರೆಯಾಗಿ ಅತೀ ಹೆಚ್ಚು ಸೋಂಕು ಪತ್ತೆಯಾಗಿರುವ ರಾಷ್ಟ್ರಗಳ ಪೈಕಿ ಭಾರತವು ಏಳನೇ ಸ್ಥಾನದಲ್ಲಿದೆ.

ಇನ್ನು ಭಾರತದಲ್ಲಿ ಕರೋನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 91,818ಕ್ಕೇರಿದ್ದು ನಿಜಕ್ಕೂ ಸಮಾಧಾನಕರ ಸಂಗತಿ. ಭಾರತದ ಚೇತರಿಕೆಯ ಮಟ್ಟ 49.18%ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಇಂದು ತಿಳಿಸಿದೆ.
So far, a total of 91,818 patients have been cured of #COVID19. Recovery rate improves to 49.18%.https://t.co/7i6R2pMqO4#SwasthaBharat #CoronaOutbreak @PMOIndia @drharshvardhan @AshwiniKChoubey @PIB_India @CovidIndiaSeva @COVIDNewsByMIB @MIB_India
— Ministry of Health #StayHome #StaySafe (@MoHFW_INDIA) June 1, 2020
ಇನ್ನು, ಜೂನ್ ಒಂದರಿಂದ ಭಾರತದಲ್ಲಿ ಅನ್‌ಲಾಕ್ 1 ಪ್ರಾರಂಭ ಆಗಿದ್ದು, ಇತ್ತೀಚಿನ ಅಂಕಿ ಅಂಶಗಳು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವಂತಿವೆ.








