• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ವಿರುದ್ಧ ಸೆಣಸಾಡುವ ನರ್ಸ್ ಗಳಿಗೆ ಇದೆಂತಹಾ ಆತಿಥ್ಯ!?

by
June 2, 2020
in ದೇಶ
0
ಕರೋನಾ ವಿರುದ್ಧ ಸೆಣಸಾಡುವ ನರ್ಸ್ ಗಳಿಗೆ ಇದೆಂತಹಾ ಆತಿಥ್ಯ!?
Share on WhatsAppShare on FacebookShare on Telegram

ಕರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರಿಗೆ ಬೆನ್ನೆಲುಬಾಗಿ ನಿಂತವರು ನರ್ಸ್‌ಗಳು. ಕೇವಲ ಕೋವಿಡ್-19‌ ಮಾತ್ರವಲ್ಲದೇ ಎಂತಹ ಸಾಂಕ್ರಾಮಿಕ ರೋಗಗಳೇ ಬರಲಿ ತಮ್ಮ ಜೀವ ಪಣಕ್ಕಿಟ್ಟು ವೈದ್ಯರ ಜೊತೆ ನಿಸ್ವಾರ್ಥ ಸೇವೆಗೆ ಮುಂದಾಗುವವರು ದಾದಿಯರು. 2018 ರ ನಿಫಾ ವೈರಸ್‌ ಸಮಯದಲ್ಲೂ ಕೇರಳದ ದಾದಿಯರು ತೋರಿದ ಕರ್ತವ್ಯ ನಿಷ್ಠೆಯಿಂದಲೇ ಅತಿ ಶೀಘ್ರವಾಗಿ ಕೇರಳ ‘Nipha’ ಅನ್ನೋ ಮಹಾಮಾರಿ ವೈರಸ್‌ ರೋಗದಿಂದ ಹೊರಬಂದಿತ್ತು. ಆದರೆ ದುರಾದೃಷ್ಟವಶಾತ್‌ ಲಿನಿ ಅನ್ನೋ ನರ್ಸ್‌ ಒಬ್ಬರು ಸೇವೆ ಸಲ್ಲಿಸುತ್ತಲೇ, ‘Nipha’ ವೈರಸ್‌ಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದರು. ಆದರೂ ಇಂದಿಗೂ ದೇಶಾದ್ಯಂತ ಲಕ್ಷಾಂತರ ನರ್ಸ್‌ಗಳು ಕರೋನಾ ಅವಧಿಯಲ್ಲೂ ಸರಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆ ಇಡದೆಯೂ ಹಗಲು ರಾತ್ರಿ ದುಡಿಯುತ್ತಿದ್ದಾರೆ. ದಿನವೊಂದಕ್ಕೆ 12 ಗಂಟೆಗೂ ಅಧಿಕ ಸಮಯ ದುಡಿಯುವ ನರ್ಸ್‌ಗಳಿಗೆ ಖಾಸಗಿ ಆಸ್ಪತ್ರೆಗಳು ಅಥವಾ ಸರಕಾರ ಕೊಡುವ ವೇತನವಾದರೂ ಎಷ್ಟು? ಅತ್ಯಲ್ಪ.. ಇದು ಎಲ್ಲರಿಗೂ ಗೊತ್ತಿರುವ ವಿಚಾರ.

ADVERTISEMENT

ಇತ್ತೀಚೆಗೆ ಬೆಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್‌-19 ಆತಂಕ ಹಾಗೂ ಲಾಕ್‌ಡೌನ್‌ ಮಧ್ಯೆಯೂ ಕೆಲಸ ನಿರ್ವಹಿಸಿದ್ದ ನರ್ಸ್‌ಗಳ ವೇತನಕ್ಕೂ ಕತ್ತರಿ ಹಾಕಿತ್ತು. ದೇಶದ ಹಲವು ಆಸ್ಪತ್ರೆಗಳಲ್ಲೂ ಅದರಲ್ಲೂ ಕೋವಿಡ್-19‌ ಆಸ್ಪತ್ರೆಗಳ ನರ್ಸ್‌ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ʼದಿ ಕ್ವಿಂಟ್‌ʼ ಈ ಕುರಿತ ವರದಿಯನ್ನ ಪ್ರಕಟಿಸಿದ್ದು ದೇಶದಲ್ಲಿರುವ ನರ್ಸ್‌ಗಳ ಸ್ಥಿತಿಗತಿಯನ್ನ ಮುಂದಿಟ್ಟಿವೆ. ಅಲ್ಲದೇ ಇದು ಸಮಾಜದಲ್ಲಿ ಆರೋಗ್ಯ ಸಿಬ್ಬಂದಿಗಳ ನಡುವಿನ ಅಂತರ ಹಾಗೂ ಅಸಮಾನತೆಯನ್ನ ಪ್ರದರ್ಶಿಸಿದೆ.

ಕೆಲವು ಕೋವಿಡ್-19‌ ಆಸ್ಪತ್ರೆಗಳಲ್ಲಿ ವೈದ್ಯರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ, ಅದೇ 12 ಗಂಟೆಗಳ ಕಾಲ ದುಡಿಯುವ ನರ್ಸ್‌ಗಳಿಗೆ ಅಂತಹ ಯಾವುದೇ ಸೌಲಭ್ಯಗಳಿಲ್ಲ. ಇನ್ನು ಸಂಪೂರ್ಣ ಮೈ ಮುಚ್ಚುವ ಉಡುಪು ಧರಿಸಿ ಕೆಲಸ ಮಾಡುವ ನರ್ಸ್‌ಗಳಿಗೆ ಎಸಿ (ಹವಾ ನಿಯಂತ್ರಣ) ಅಗತ್ಯವಿದ್ದರೂ, ಅದನ್ನೂ ಒದಗಿಸಲಾಗಿಲ್ಲ.

ಇನ್ನು ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಅದರ ವಿರುದ್ಧ ಹೋರಾಡಲು ನರ್ಸ್‌ಗಳ ಸೇವೆ ಅವಿಭಾಜ್ಯ ಅಂಗವೆಂದೇ ಭಾವಿಸಲಾಗಿದೆ. ಸಮಯ ಮಿತಿಯಿಲ್ಲದೇ ಹಾಗೂ ಕಡಿಮೆ ವೇತನ ಪಡೆದೂ ದುಡಿಯಬಲ್ಲರು. ಆದರೆ ಇಂತಹ ನರ್ಸ್‌ಗಳಿಗೆ ಕಡ್ಡಾಯವಾಗಿ ಕೋವಿಡ್-19‌ ಪರೀಕ್ಷೆ ಹಾಗೂ ಹೋಂ ಕ್ವಾರೆಂಟೈನ್‌ ಮಾಡಿಸಬೇಕು ಅನ್ನೋ ಮಾರ್ಗಸೂಚಿಯಿದ್ದರೂ ದೇಶದ ಹಲವು ನಗರಗಳಲ್ಲಿ ಇರುವ ಆಸ್ಪತ್ರೆಗಳು ಅದನ್ನ ನಿರ್ಲಕ್ಷಿಸಿವೆ ಅನ್ನೋದಾಗಿ ʼದಿ ಕ್ವಿಂಟ್‌ʼ ವರದಿ ಮಾಡಿದೆ.

ಮೇ 15 ರಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿ ಪ್ರಕಾರ ಕೋವಿಡ್-19‌ ವಿರುದ್ಧ ಸೆಣಸಾಡುವ ನರ್ಸ್‌ಗಳನ್ನೂ ಪರೀಕ್ಷೆಗೆ ಒಳಪಡಿಸಬೇಕು. ಮಾತ್ರವಲ್ಲದೇ 14 ದಿನಗಳ ಕೆಲಸದ ನಂತರ ಅವರನ್ನ ಕ್ವಾರೆಂಟೈನ್ ಗೆ ಒಳಪಡಿಸಬೇಕು. ಅಲ್ಲದೇ ಆ ನಂತರದ ನೂತನ ಮಾರ್ಗಸೂಚಿಯಲ್ಲೂ ಅತೀ ಹೆಚ್ಚಿನ ಅಪಾಯವಿರುವ ಕೋವಿಡ್-19‌ ಆಸ್ಪತ್ರೆ ನರ್ಸ್‌ಗಳ ವಿವರವನ್ನ ನಿಯೋಜಿತ ನೋಡಲ್‌ ಅಧಿಕಾರಿಗೆ ವರದಿ ಮಾಡಬೇಕು. ಆ ನಂತರ ನೋಡಲ್‌ ಅಧಿಕಾರಿಗಳು ಅಂತಹ ನರ್ಸ್‌ಗಳಿಗೆ ಪರೀಕ್ಷೆ ಅಗತ್ಯವಿದೆಯೇ. ಇಲ್ಲವೇ? ಎಂದು ನಿರ್ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ತಿಳಿಸಬೇಕು. ಆದರೆ ಈ ಮಾರ್ಗಸೂಚಿಯಲ್ಲೂ ಒಂದಿಷ್ಟು ಗೊಂದಲವನ್ನೂ ಉಂಟು ಮಾಡಿತು. ಕಾರಣ, ಎಷ್ಟೋ ನರ್ಸ್‌ಗಳನ್ನ ಯಾವುದೇ ಪೂರ್ವಭಾವಿ ಸೂಚನೆ ನೀಡದೆ ಯಾವುದಾದರೂ ಹೊಟೇಲ್‌ಗಳಿಗೆ ಬಲವಂತವಾಗಿ ಶಿಫ್ಟ್‌ ಮಾಡಿ ಕ್ವಾರೆಂಟೈನ್‌ಗೆ ಒಳಪಡಿಸಲು ಒತ್ತಾಯಿಸಲಾದ ಸುದ್ದಿಗಳೂ ವರದಿಯಾದವು.

“ನಾನು ಕೆಲಸ ನಿರ್ವಹಿಸುತ್ತಿರುವ ಆಸ್ಪತ್ರೆಯಲ್ಲಿ ವಸತಿ ವ್ಯವಸ್ಥೆಯನ್ನ ಸ್ಥಗಿತಗೊಳಿಸಲಾಗಿದೆ. ಅಲ್ಲದೇ 14 ದಿನಗಳ ಕ್ವಾರೆಂಟೈನ್‌ ಅವಧಿಯನ್ನ 10 ದಿನಗಳಿಗೆ ಇಳಿಸಲಾಗಿದೆ. ಆದರೆ ಈ ಹತ್ತು ದಿನಗಳಲ್ಲಿ ಅದ್ಹೇಗೆ ರೋಗ ಪತ್ತೆ ಹಚ್ಚುವಿಕೆ ಸಾಧ್ಯವಾದೀತು? ಪ್ರತಿದಿನ 6-7 ರೋಗಿಗಳಲ್ಲಿ ಕೋವಿಡ್-19‌ ದೃಢಪಡುತ್ತಿದೆ. ಆದರೆ ಅದೆಷ್ಟೋ ಮಂದಿಯಲ್ಲಿ ಕೋವಿಡ್-19‌ ಆರಂಭಿಕ ಹಂತದ ಲಕ್ಷಣಗಳು ಇಲ್ಲದೇ ಹೋದರೂ, ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್‌ ವರದಿ ಬಂದಿರೋದು ಇದೆ. ಪಾಸಿಟಿವ್‌ ಬಂದ ಬಳಿಕವೇ ಲಕ್ಷಣಗಳು ಕಾಣಿಸಿಕೊಂಡಿದ್ದೂ ಇದೆ” ಎಂದು ದೆಹಲಿಯ ಕರೋನಾ ಆಸ್ಪತ್ರೆಯೊಂದರ ನರ್ಸಿಂಗ್‌ ಸಿಬ್ಬಂದಿಯೊಬ್ಬರು ತಮ್ಮ ವ್ಯಥೆಯನ್ನ ʼದಿ ಕ್ವಿಂಟ್‌ʼ ನ FIT ನ ಮುಂದಿಟ್ಟಿದ್ದಾರೆ. ‌

ಇದಕ್ಕಿಂತಲೂ ಗಂಭೀರ ಸಮಸ್ಯೆಯೊಂದನ್ನ ಕರೋನಾ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಎದುರಿಸುತ್ತಿದ್ದಾರೆ. ಮೊದಲೇ ಬಹುತೇಕ ಅವಿವಾಹಿತ ಹೆಣ್ಣು ಮಕ್ಕಳೇ ಇರುವ ನರ್ಸಿಂಗ್‌ ವಿಭಾಗಕ್ಕೆ ಕೆಲ ಆಸ್ಪತ್ರೆಗಳಲ್ಲಿ ಹಾಸ್ಟೆಲ್‌ ವ್ಯವಸ್ಥೆಯನ್ನೂ ನೀಡಿಲ್ಲ. ಆದ್ದರಿಂದ ಅನಿವಾರ್ಯವಾಗಿ ನಗರದೊಳಗಿರುವ ರೂಂ ಗಳನ್ನ ಗೊತ್ತು ಮಾಡಬೇಕು. ಆದರೆ ಹೀಗೆ ರೂಂ ಗೊತ್ತು ಮಾಡೋ ಹುಡುಗಿಯರಿಗೆ ನರ್ಸ್‌ ಎಂದು ಗುರುತಿಸಿಕೊಳ್ಳುತ್ತಲೇ ಅವರಿಗೆ ರೂಂ ನಲ್ಲಿ ತಂಗಲು ಅವಕಾಶ ನಿರಾಕರಿಸಲಾಗುತ್ತದೆ. ಕಾರಣ, ಮತ್ತದೇ ಕೋವಿಡ್-19‌ ಆತಂಕ. ಹೀಗಾದರೆ ಆ ನರ್ಸ್‌ ಗಳು ಹೋಗೋದಾದರೂ ಎಲ್ಲಿಗೆ ಅಂತಾ ದೆಹಲಿಯ ಸರಕಾರಿ ಆಸ್ಪತ್ರೆಯ ಹಿರಿಯ ನರ್ಸ್‌ವೊಬ್ಬರು ಪ್ರಶ್ನಿಸುತ್ತಾರೆ. ಮಾತ್ರವಲ್ಲದೇ ರೂಂ ಇಲ್ಲದೇ ಚಡಪಡಿಸುವ ಕಿರಿಯ ನರ್ಸ್‌ ಗಳಿಗೆ ತನ್ನದೇ ರೂಂ ನಲ್ಲಿರುವ ಹೆಚ್ಚುವರಿ ಕೊಠಡಿಯನ್ನು ಕಿರಿಯ ಸಹೋದ್ಯೋಗಿಗಳಿಗೆ ಬಿಟ್ಟು ಕೊಟ್ಟಿದ್ದಾರೆ. ಹೀಗೆ ಮಾತು ಮುಂದುವರೆಸುವ ಆ ಹಿರಿಯ ನರ್ಸ್‌ ಇನ್ನೊಂದು ಆತಂಕಕಾರಿ ವಿಚಾರವನ್ನೂ ಮುಂದಿಡುತ್ತಾರೆ. ಅದೇನೆಂದರೆ, ದೆಹಲಿ ಕಟ್ಟಡವೊಂದರ ಮಾಲಿಕ ಆ ಕಟ್ಟಡದ ರೂಂ ನಲ್ಲಿ ತಂಗಿದ್ದ ನರ್ಸ್‌ವೊಬ್ಬಳನ್ನು ಮಧ್ಯರಾತ್ರಿಯೇ ಆಕೆಯ ಕೋವಿಡ್-19‌ ವರದಿ ತರುವಂತೆ ಒತ್ತಾಯಿಸಿ ಹೊರ ನಡೆಯುವಂತೆ ಮಾಡಿದ್ದರು. ಅಲ್ಲದೇ ರೂಂ ಗೆ ವಾಪಾಸ್‌ ಬರಬೇಕಿದ್ದರೆ, ಕೋವಿಡ್-19‌ ನೆಗೆಟಿವ್‌ ವರದಿಯ ಪ್ರತಿಯನ್ನ ತರುವಂತೆ ಸೂಚಿಸಿದ್ದರು. ದಿಕ್ಕೇ ತೋಚದಾದ ಆ ನರ್ಸ್‌ ಹಿರಿಯ ನರ್ಸ್‌ ರೂಂ ಗೆ ಅನಿವಾರ್ಯವಾಗಿ ಶಿಫ್ಟ್‌ ಆಗಬೇಕಾಯಿತು.

ಇನ್ನು ನಗರದಲ್ಲಿ ಮನೆಗಳನ್ನು ಹೊಂದಿರುವವರಿಗೂ ಇನ್ನಿತರ ನರ್ಸ್‌ಗಳಿಗೆ ವಾಸ್ತವ್ಯದ ಅವಕಾಶ ನೀಡುವುದು ಕೂಡಾ ಕ್ಷಿಷ್ಟಕರ. ಕಾರಣ, ಅವರ ಮನೆಯಲ್ಲಿ ವಯಸ್ಸಾದ ಪೋಷಕರು, ಮಕ್ಕಳು ಇದ್ದು ಹೆಚ್ಚುವರಿ ಕೊಠಟಿಗಳ ಸಂಖ್ಯೆಯೂ ಕಡಿಮೆಯದ್ದಾಗಿರುತ್ತದೆ. ಅಲ್ಲದೇ ಪ್ರತ್ಯೇಕ ವಾಸ ಅನ್ನೋದು ಹೆಚ್ಚು ಅಗತ್ಯವಿರುವದರಿಂದ ಸುಲಭವಾಗಿ ಮನೆಗೆ ಆಹ್ವಾನಿಸುವಂತಿಲ್ಲ.

ಇನ್ನು ಆಸ್ಪತ್ರೆ ಆಡಳಿತ ಮಂಡಳಿಗೆ ಈ ಸುದ್ದಿ ಮುಟ್ಟಿದ್ದರೂ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅದನ್ನೆಲ್ಲ ಎದುರಿಸುತ್ತಲೇ ಕೆಲಸ ನಿರ್ವಹಿಸಬೇಕು ಅನ್ನೋದಾಗಿ ಅವರೆಲ್ಲ ನಂಬಿದಂತಿದೆ ಎಂದು ಆ ಹಿರಿಯ ನರ್ಸ್‌ ತಿಳಿಸುತ್ತಾರೆ. “ನಾವು ಈಗಾಗಲೆ ಸೋಂಕಿನ ವಿಚಾರವಾಗಿಯೇ ಸಾಕಷ್ಟು ಒತ್ತಡಕ್ಕೊಳಗಾಗಿದ್ದೇವೆ. ಆದರೂ ರಿಸ್ಕ್‌ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಹೊರಗಿನ ಕೆಲವು ಸಮಸ್ಯೆಗಳು ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಆರಾಮದಾಯಕ ವಾತಾವರಣದಲ್ಲಿ ಸುಲಭವಾಗಿ ಕೆಲಸ ನಿರ್ವಹಿಸಬಹುದು, ಆದರೆ ಈಗ ಹಾಗಿಲ್ಲ ಪ್ರತಿದಿನವೂ ನಾವು ಕೊನೆಯಿಲ್ಲದಂತೆ ಹೋರಾಡುತ್ತಿದ್ದೇವೆ” ಎನ್ನುತ್ತಾರೆ.

ದೆಹಲಿ ಆಸ್ಪತ್ರೆಗಳ ಕಥೆ ಹೀಗಾದರೆ, ಇನ್ನು ಭಾರತದಲ್ಲಿಯೇ ಅತೀ ಹೆಚ್ಚು ಸೋಂಕಿಗೆ ತುತ್ತಾಗಿರುವ ಮಹಾರಾಷ್ಟ್ರದಲ್ಲಿ ಇನ್ನೊಂದು ರೀತಿಯ ಪರಿಸ್ಥಿತಿ ಇದೆ. ಮುಂಬೈನ ESIC ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನರ್ಸ್‌ವೊಬ್ಬರು FIT ಜೊತೆ ಮಾಹಿತಿ ಹಂಚಿಕೊಂಡಿದ್ದು, 14 ದಿನಗಳ ಸೇವೆ ಸಲ್ಲಿಸಿದ ನರ್ಸ್‌ಗೆ ಯಾವುದೇ ರೋಗ ಲಕ್ಷಣ ಕಂಡುಬಾರದಿದ್ದರೆ, ಅಂತಹವರಿಗೆ ಎರಡು ದಿನಗಳ ಕಾಲ ರಜೆ ನೀಡಿ ನಂತರ ಮತ್ತೆ ಕರ್ತವ್ಯಕ್ಕೆ ವಾಪಾಸ್‌ ಕರೆಸಿಕೊಳ್ಳಲಾಗುತ್ತದೆ.

“ಇದು ಕೇವಲ ಒಬ್ಬರಿಗಲ್ಲ, ಬದಲಾಗಿ ಇಡೀ ಆಸ್ಪತ್ರೆಯಲ್ಲಿರುವ ಎಲ್ಲಾ ಸಿಬ್ಬಂದಿಗಳಿಗೂ ಅಪಾಯ ತಂದೊಡ್ಡುವ ಆತಂಕ ಎದುರು ನೋಡುವಂತೆ ಮಾಡುತ್ತದೆ. ಮಾತ್ರವಲ್ಲದೇ ಜನರೊಂದಿಗೆ ಬೆರೆಯುವಾಗ ಅವರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾದರೆ ನಾವು ಒಬ್ಬರೊಗೊಬ್ಬರು ಸಹಾಯ ಮಾಡುವುದಾದರೂ ಹೇಗೆ?” ಎಂದು ಮಹಾರಾಷ್ಟ್ರದ ESIC ಆಸ್ಪತ್ರೆ ಸಿಬ್ಬಂದಿ ಪ್ರಶ್ನಿಸುತ್ತಾರೆ.

ಇನ್ನು ವಸತಿ ವಿಚಾರದಲ್ಲಂತೂ ನರ್ಸ್‌ ಗಳಿಗೆ ಮಹಾರಾಷ್ಟ್ರದಲ್ಲಿ ಭಾರಿ ಅನ್ಯಾಯವಾದಂತೆ ಗೋಚರಿಸುತ್ತದೆ. ಕಾರಣ, ಅಲ್ಲಿ ವೈದ್ಯರಿಗೆ ಮಾತ್ರ ವಸತಿ ಕಲ್ಪಿಸಲಾಗಿದ್ದು, ನರ್ಸ್‌ಗಳಿಗೆ ನೀಡಲಾಗಿಲ್ಲ. ಇನ್ನು ರೋಗ ಲಕ್ಷಣ ಕಂಡು ಬಂದರೆ ಅವರನ್ನ ಆಸ್ಪತ್ರೆಗೆ ದಾಖಲಾಗಲು ಇಲ್ಲವೇ ಹೋಂ ಕ್ವಾರೆಂಟೈನ್‌ ಒಳಗಾಗಲು ಸೂಚಿಸಲಾಗುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಯಾವೊಬ್ಬ ನರ್ಸ್‌ ಕೂಡಾ ಹೋಂ ಕ್ವಾರೆಂಟೈನ್‌ ಆಯ್ಕೆ ಮಾಡಲಾರಳು. ಕಾರಣ, ಮುಂಬೈಯಂತಹ ನಗರದಲ್ಲಿ ಮನೆ ಇದ್ದರಂತೂ ತುಂಬಾ ಕಷ್ಟ. ಇನ್ನು ಹೋಂ ಕ್ವಾರೆಂಟೈನ್‌ ಗೆ ಒಳಗಾಗಿ ಮನೆ ಮಂದಿಗೆ ಸೋಂಕು ಹಬ್ಬಿಸಲು ಯಾರೂ ಇಚ್ಛೆ ಪಡಲಾರರು ಎಂದು ಮುಂಬೈಯ ನರ್ಸ್‌ ಅಭಿಪ್ರಾಯಡುತ್ತಾರೆ.

ಇನ್ನು ಮಹಾರಾಷ್ಟ್ರದ ಔರಂಗಾಬಾದ್‌ ನ ಸರಕಾರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ನರ್ಸ್‌ ಇಂದು ಥೋರಟ್‌ ಅಲ್ಲಿನ ಆಸ್ಪತ್ರೆಯ ಸಮಸ್ಯೆಯನ್ನ ಮುಂದಿಡುತ್ತಾರೆ. ಅಲ್ಲಿನ ಆಸ್ಪತ್ರೆಯಲ್ಲಿ ಎಲ್ಲಾ ಕಾರ್ಮಿಕರಿಗೆ ಒಂದು ವಾರ ( ಏಳು ದಿನ) ಕಾಲ ಕ್ವಾರೆಂಟೈನ್‌ಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಅವರಿಗೆ ಕ್ವಾರೆಂಟೈನ್‌ಗೆ ಬೇಕಾದ ವ್ಯವಸ್ಥೆಗಳನ್ನ ಕಲ್ಪಿಸಿಕೊಡಲಾಗುತ್ತಿದೆ. ಆದರೆ ಅದೇ ಆಸ್ಪತ್ರೆ ನರ್ಸ್‌ಗಳಿಗೆ ಕರೋನಾ ಪಾಸಿಟಿವ್‌ ಬಂದರೆ ಅವರನ್ನ ಮನೆಗೆ ತೆರಳುವಂತೆ ಸೂಚಿಸಲಾಗುತ್ತದೆ. ಇದನ್ನ ಪ್ರಶ್ನಿಸುವ ಇಂದು ಥೋರಟ್‌, “ ಕರೋನಾ ಪಾಸಿಟಿವ್‌ ಬಂದ ನರ್ಸ್‌ಗಳನ್ನ ದಾಖಲಿಸಲ್ಲ ಎಂದಾದ ಮೇಲೆ, ಕಾರ್ಮಿಕರನ್ನ ಯಾವ ಕಾರಣಕ್ಕಾಗಿ ದಾಖಲಿಸಲಾಗುತ್ತದೆ? ಕರೋನಾ ಪಾಸಿಟಿವ್‌ ಬಂದಿರೋ ನರ್ಸ್‌ ಗಳನ್ನ ಯಾಕಾಗಿ ಮನೆಗೆ ತೆರಳುವಂತೆ ಸೂಚಿಸಲಾಗುತ್ತದೆ? ಎಂದು ಅವರು ಪ್ರಶ್ನಿಸುತ್ತಾರೆ.

ಅಲ್ಲದೇ ಇಂದು ಥೋರಟ್‌ ಎತ್ತುವ ಇನ್ನೊಂದು ಪ್ರಶ್ನೆ ಹೆಚ್ಚು ಚರ್ಚಾರ್ಹ. “ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೆ, ಸಮಯಕ್ಕೆ ಸರಿಯಾಗಿ ಹೋಗುತ್ತಾರೆ. ಆದರೆ ವಾರ್ಡ್‌ನಲ್ಲಿ ಅತೀ ಹೆಚ್ಚು ಸಮಯ ಇರೋರು ನಾವು.” ಎಂದು ಮಾರ್ಮಿಕವಾಗಿ ಮಾತನಾಡುತ್ತಾರೆ. “ವೈದ್ಯರು ಪ್ರತಿಯೊಬ್ಬ ರೋಗಿಯ ಆರೋಗ್ಯ ಪ್ರಗತಿಯ ಬಗ್ಗೆ ಪರಿಶೀಲಿಸುತ್ತಾರೆ. ಯಾವ ಔಷಧಿ ಪಡೆಯಬೇಕೆಂದು ಸೂಚಿಸುತ್ತಾರೆ ಆ ನಂತರ ತೆರಳುತ್ತಾರೆ. ಆದರೆ ನರ್ಸ್‌ಗಳು ಹಾಗಲ್ಲ ದಿನವಿಡೀ ರೋಗಿಗಳ ಜೊತೆಗಿದ್ದು ಅವರ ಪ್ರತೀ ಚಟುವಟಿಕೆಯಲ್ಲೂ ಜೊತೆಯಾಗಿರುತ್ತಾರೆ. ರೋಗಿಗಳಿಗೆ ಔಷಧಿ ನೀಡುವುದಾಗಲೀ, ಆಹಾರ ನೀಡುವಲ್ಲಾಗಲೀ, ಅವರನ್ನ ಕೂರಿಸುವ ಅಥವಾ ನಡೆದಾಡಲು ಹಾಗೂ ಇನ್ನಿತರ ಎಲ್ಲಾ ಆರೈಕೆ ಸಮಯದಲ್ಲೂ ನರ್ಸ್‌ಗಳೇ ಅವರ ಜೊತೆಗಿರುತ್ತಾರೆ ಹೊರತು ವೈದ್ಯರಲ್ಲ, ಆದ್ದರಿಂದ ನರ್ಸ್‌ಗಳಿಗೆ ಕರೋನಾ ತಗಲುವ ಸಾಧ್ಯತೆ ಅಧಿಕ” ಎಂದು ನರ್ಸ್‌ ಅಭಿಪ್ರಾಯಪಡುತ್ತಾರೆ.

ಇನ್ನೊಂದು ವಿಚಾರವೇನೆಂದರೆ ವೈದ್ಯರು ತಮ್ಮ ಕೋವಿಡ್-19‌ ಪರೀಕ್ಷೆಯನ್ನ ಸುಲಭವಾಗಿ ಮಾಡಿಕೊಳ್ಳುವರು. ಆದರೆ ನರ್ಸ್‌ಗಳಿಗೆ ಆ ಅವಕಾಶಗಳೇ ಇಲ್ಲ. ನರ್ಸ್‌ಗಳು ವೈದ್ಯರ ಅನುಮತಿ ಪಡೆದು ಪರೀಕ್ಷೆ ನಡೆಸಬೇಕಾಗುತ್ತದೆ. ಇದು ಮಾತ್ರವಲ್ಲದೇ ನರ್ಸ್‌ಗಳಿಗೆ ಬೇಕಾದ ಸುರಕ್ಷತಾ ಕವಚಗಳ ಲಭ್ಯತೆಯೂ ಬಹುತೇಕ ಆಸ್ಪತ್ರೆಗಳಲ್ಲಿ ಕಡಿಮೆ ಮಟ್ಟದಲ್ಲಿದೆ.

ಈ ಕುರಿತು FIT ಜೊತೆ ಮಾಹಿತಿ ಹಂಚಿಕೊಂಡಿರುವ ಯೂನೈಟೆಡ್‌ ನರ್ಸಸ್‌ ಅಸೋಸಿಯೇಶನ್‌ ಅಧ್ಯಕ್ಷ ರಿನ್ಸ್‌ ಜೋಸೆಫ್‌, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಿಬ್ಬಂದಿಗಳಲ್ಲಿಯೇ ಹೆಚ್ಚಿನ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ನಮ್ಮನ್ನು ಆತಂಕಕ್ಕೀಡು ಮಾಡುತ್ತಿದೆ. ಅಲ್ಲದೇ ಇದರಿಂದಾಗಿ ಅದೆಷ್ಟೋ ಆಸ್ಪತ್ರೆಗಳೂ ಸೀಲ್‌ಡೌನ್‌ ಆಗಿದ್ದು, ಆರೋಗ್ಯ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೇ ಆಸ್ಪತ್ರೆಗಳು ಕಡಿಮೆ ನರ್ಸ್‌ ಸಿಬ್ಬಂದಿಗಳಿಂದ ಮುನ್ನಡೆಸಬೇಕಾದ ಒತ್ತಡಕ್ಕೂ ಒಳಗಾಗಿದೆ. ಇದು ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಆದ್ದರಿಂದ ನರ್ಸ್‌ ಸಿಬ್ಬಂದಿಗಳ ಸುರಕ್ಷೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಲಿದ್ದು, ಸಿಬ್ಬಂದಿಗಳ ಅಗತ್ಯತೆಯನ್ನ ಮನಗಾಣಬೇಕಿದೆ. ಆದ್ದರಿಂದ ಸರಕಾರಗಳು ನರ್ಸ್‌ ಸಿಬ್ಬಂದಿಗಳ ರಕ್ಷಣೆಗೂ ಆದ್ಯತೆ ನೀಡಬೇಕು” ಎಂದು ರಿನ್ಸ್‌ ಜೋಸೆಫ್‌ ಹೇಳುತ್ತಾರೆ.

ಇನ್ನು ಭಾರತದ ಇನ್ನೊಂದು ಕರೋನಾ ಹಾಟ್‌ಸ್ಪಾಟ್‌ ಗುಜರಾತ್‌ನ ಅಹ್ಮದಾಬಾದ್‌ ನ ಕೋವಿಡ್-19 ಆಸ್ಪತ್ರೆಗಳಲ್ಲೂ ಇಂತಹದ್ದೇ ಪರಿಸ್ಥಿತಿ ಇದೆ. ಈಗಾಗಲೇ ಅಲ್ಲಿನ ಕೋವಿಡ್-19‌ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಅಗತ್ಯ ಸೌಲಭ್ಯಗಳ ಪೂರೈಕೆಗೆ ಸರಕಾರಕ್ಕೆ ಮನವಿ ನೀಡಿದರೂ ಅದು ವ್ಯರ್ಥವಾಗಿದೆ. ಸೋಂಕು ಅತಿಯಾಗುತ್ತಲೇ ಅಹ್ಮದಾಬಾದ್‌ ನ ಬಹುತೇಕ ಆಸ್ಪತ್ರೆಗಳನ್ನ ಕೋವಿಡ್-19‌ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ. ಅಂತೆಯೇ ಮೇ 15 ರಂದು ಅಹ್ಮದಾಬಾದ್‌ ನ ಆಸ್ಪತ್ರೆಯೊಂದನ್ನ ಯಾವುದೆ ಮುನಸೂಚನೆ ನೀಡದೆ ಕೋವಿಡ್-19‌ ಆಸ್ಪತ್ರೆಯಾಗಿ ಪರಿವರ್ತಿಸಲಾಯಿತು. ಆದರೆ ಸೋಂಕಿನ ವಿರುದ್ಧ ಹೋರಾಡಲು ಬೇಕಾದ ಕನಿಷ್ಠ ಸೌಲಭ್ಯಗಳೂ ಅಲ್ಲಿರಲಿಲ್ಲ ಎಂದು ನರ್ಸ್‌ವೊಬ್ಬರು ತಿಳಿಸುತ್ತಾರೆ.

ಇನ್ನು ಇಲ್ಲಿನ ನರ್ಸ್‌ಗಳಿಗೆ ಏಳು ದಿನಗಳ ಕ್ವಾರೆಂಟೈನ್‌ ಗಾಗಿ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆಯಾದರೂ ಆಹಾರ ಪೂರೈಕೆ ಇಲ್ಲ. ಆರೋಗ್ಯ ಸಚಿವರಿಗೆ ಪತ್ರ ಬರೆದರೆ ಎಲ್ಲವೂ ಸರಿಯಾಗುತ್ತದೆ ಅನ್ನೋ ಭರವಸೆ ಮಾತ್ರ ಸಿಕ್ಕಿದೆ. ಬದಲಾಗಿ ಕೋವಿಡ್-19‌ ಆಸ್ಪತ್ರೆಗೆ ಯಾವುದೆ ಹಣ ಬಿಡುಗಡೆಗೊಳಿಸಿಲ್ಲ ಎನ್ನಲಾಗಿದೆ.

ಇದು ದೇಶದಲ್ಲಿ ಪ್ರಮುಖವಾಗಿ ಕರೋನಾ ಸೋಂಕಿಗೆ ತುತ್ತಾಗಿರುವ ಮಹಾನಗರಗಳ ಆಸ್ಪತ್ರೆಗಳಲ್ಲಿರುವ ದುರವಸ್ಥೆ. ಇನ್ನಿತರ ಮಹಾನಗರಗಳಲ್ಲೂ ಕೋವಿಡ್-19‌ ತೀವ್ರವಾಗಿ ಕಾಡಿದರೆ ಮತ್ತು ನರ್ಸ್‌ ಸಿಬ್ಬಂದಿಗಳಿಗೆ ಯಾವುದೇ ಸುರಕ್ಷತೆ ಇಲ್ಲದೇ ಹೋದರೇ ಆಸ್ಪತ್ರೆಯಿಂದಲೇ ರೋಗ ಹರಡುವ ಭೀತಿಯೂ ಇದೆ. ಆದರೆ ಇದೆಲ್ಲದರ ಮಧ್ಯೆಯೂ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳ ಕರೋನೋತ್ತರ ಭವಿಷ್ಯಕ್ಕಾದರೂ ಸರಕಾರ ಸುರಕ್ಷತಾ ಕ್ರಮಗಳನ್ನ ಪಾಲಿಸಲೇಬೇಕಾದ ಅನಿವಾರ್ಯತೆ ಇದೆ.

Tags: ‌ ಐಸಿಎಂಆರ್‌ ನರ್ಸಿಂಗ್‌ ಸೇವೆAhmedabadCovid 19DelhiICMRministry of health departmentmumbainursing serviceಅಹ್ಮದಾಬಾದ್ಕೇಂದ್ರ ಆರೋಗ್ಯ ಸಚಿವಾಲಯಕೋವಿಡ್-19ದೆಹಲಿಮುಂಬೈ
Previous Post

ಕರೋನಾ ಬೆನ್ನಿಗೆ ಮತ್ತೆ ಕಾಣಿಸಿಕೊಂಡ ಎಬೋಲಾ

Next Post

ಅಂಫಾನ್ ಆಯ್ತು, ಈಗ ಅಪ್ಪಳಿಸಲಿದೆ ನಿಸರ್ಗಾ

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಅಂಫಾನ್ ಆಯ್ತು

ಅಂಫಾನ್ ಆಯ್ತು, ಈಗ ಅಪ್ಪಳಿಸಲಿದೆ ನಿಸರ್ಗಾ

Please login to join discussion

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada