ಇಕ್ವೆಡಾರ್ ಪ್ರಾಂತ್ಯದಲ್ಲಿ ಎಬೋಲಾ ವೈರಸ್ ಮತ್ತೆ ಕಾಣಿಸಿಕೊಂಡಿದೆಯೆಂದು ಕಾಂಗೋ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದೆ. ಕಾಂಗೋ ದಡಾರ ಹಾಗೂ ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಹೊತ್ತಲ್ಲೇ ಎಬೋಲ ಮತ್ತೆ ಕಾಣಿಸಿಕೊಂಡಿದೆ.
ಕಾಂಗೋದಲ್ಲಿ 6 ಎಬೋಲ ಪ್ರಕರಣಗಳು ಕಂಡುಬಂದಿದ್ದು ಅದರಲ್ಲಿ 15 ವರ್ಷದ ಬಾಲಕಿ ಸೇರಿದಂತೆ ಕನಿಷ್ಟ ಐವರು ಸಾವನ್ನಪ್ಪಿದ್ದಾರೆಂದು ಸಿಎನ್ಎನ್ ಹೆಲ್ತ್ ವರದಿ ಮಾಡಿದೆ.
Also Read: ಮನುಕುಲಕ್ಕೆ ಮಾರಕವಾಗಿರುವ ವೈರಸ್ಗಳು ಯಾವುವು ಗೊತ್ತೇ?
ಕಾಂಗೋದಲ್ಲಿ 1976 ರಲ್ಲಿ ಕಾಣಿಸಿಕೊಂಡಂದರಿಂದ ಇದು 11 ನೇ ಬಾರಿಗೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಇದೇ ಪ್ರಾಂತ್ಯದಲ್ಲಿ 2018ರ ಮೇ- ಜಲೈ ನಡುವೆ 9 ನೇ ಬಾರಿ ಎಬೋಲಾ ಕಾಣಿಸಿಕೊಂಡಿತ್ತು.
ಎಬೋಲಾ ಸೋಂಕಿಗೆ ವಿಶ್ವದಾದ್ಯಂತ ಸುಮಾರು 28 ಸಾವಿರ ಮಂದಿ ತುತ್ತಾಗಿದ್ದರು. ಅದರಲ್ಲಿ 11 ಸಾವಿರಕ್ಕೂ ಅಧಿಕ ಮಂದಿ ಎಬೋಲಾದಿಂದಾಗಿ ಸಾವನ್ನಪ್ಪಿದ್ದಾರೆ.
ಕಾಂಗೋ ದೇಶ ಈಗಾಗಲೇ ದಡಾರದಿಂದಾಗಿ ಅಪಾರ ನಷ್ಟವನ್ನು ಅನುಭವಿಸಿದೆ, ದೇಶದಲ್ಲಿ ಸುಮಾರು 3 ಲಕ್ಷದ 70 ಸಾವಿರಕ್ಕೂ ಅಧಿಕ ಮಂದಿ ದಡಾರ ಸೋಂಕಿಗೆ ತುತ್ತಾಗಿದ್ದರು. 2019ರಿಂದ 6779 ಮಂದಿಯನ್ನು ದಡಾರ ರೋಗ ಬಲಿ ಪಡೆದುಕೊಂಡಿದೆ. ದಡಾರ, ಕರೋನಾ ಮತ್ತೀಗ ಎಬೋಲಾದ ವಿರುದ್ಧ ಆಫ್ರಿಕಾದ ಬಡ ದೇಶ ಹೋರಾಡಬೇಕಾಗಿದೆ
