• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕರೋನಾ ಪ್ಲಾಸ್ಮಾ ಪರೀಕ್ಷೆ ಶುರು! ಏನಿದು ಟೆಸ್ಟ್?

by
April 26, 2020
in ದೇಶ
0
ಕರೋನಾ ಪ್ಲಾಸ್ಮಾ ಪರೀಕ್ಷೆ ಶುರು! ಏನಿದು ಟೆಸ್ಟ್?
Share on WhatsAppShare on FacebookShare on Telegram

ಕರೋನಾ ಕಂಟಕದಿಂದ ಪಾರಾಗಲು ಇಡೀ ವಿಶ್ವವೇ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಅದರಲ್ಲಿ ಭಾರತ ಕೂಡ ಒಂದು. ವಿಶ್ವಾದ್ಯಂತ ಈಗಾಗಲೇ ಕರೋನಾ ವೈರಸ್ ದಾಳಿಗೆ 2 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿತರ ಸಂಖ್ಯೆ 30 ಲಕ್ಷ ಗಡಿಯಲ್ಲಿ ನಿಂತಿದೆ. ವಿಶ್ವದ ‘ದೊಡ್ಡಣ್ಣ’ನೆಂದು ಬೀಗುತ್ತಿದ್ದ ಅಮೆರಿಕದಲ್ಲಿ ಸಾವಿನ ಸಂಖ್ಯೆಯೇ 50 ಸಾವಿರ ಗಡಿ ದಾಟಿ ಆಗಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 25 ಸಾವಿರ ಆಸುಪಾಸಿನಲ್ಲಿದೆ. ಕರೋನಾ ಸೋಂಕು ತೊಲಗಿಸಲು ಇಲ್ಲಿವರೆಗೂ ಯಾವುದೇ ನಿರ್ದಿಷ್ಟ ಚಿಕಿತ್ಸೆ ಕಾಣದ ವೈದ್ಯರು ಇದೀಗ ಪ್ಲಾಸ್ಮಾ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ADVERTISEMENT

ಕರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರದಿಂದ ಅನುಮತಿ ನಿನ್ನೆ ಸಿಕ್ಕಿದ್ದು, ಇಂದು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಯುತ್ತಿದೆ. ಶುಕ್ರವಾರ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಜೊತೆಗಿನ ಸಭೆ ಬಳಿಕ ಪ್ಲಾಸ್ಮಾ ಪರೀಕ್ಷೆ ಬಗ್ಗೆ ವೈದ್ಯಕೀಯ ಶಿಕ್ಷಣ ಡಾ.ಸುಧಾಕರ್ ಮಾಹಿತಿ ನೀಡಿದ್ದರು. ಏನಿದು ಕರೋನಾ ಪ್ಲಾಸ್ಮಾ ಥೆರಪಿ? ಕರೋನಾ ಸೋಂಕಿನಿಂದ ತೀವ್ರವಾಗಿ ಸಂಕಷ್ಟಕ್ಕೆ ಗುರಿಯಾದವರಿಗೆ ನೀಡುವ ಚಿಕಿತ್ಸೆ ವಿಧಾನ. ಈಗಾಗಲೇ ಕರೋನಾ ಸೋಂಕು ಕಾಣಿಸಿಕೊಂಡು ಚೇತರಿಕೆ ಆದವರ ರಕ್ತದಿಂದ ಪ್ಲಾಸ್ಮಾ ತೆಗೆದುಕೊಂಡು ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರೋ ರೋಗಿಯ ರಕ್ತಕ್ಕೆ ಸೇರಿಸಬೇಕು. ಪ್ಲಾಸ್ಮಾದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ, ಕರೋನಾ ಸೋಂಕಿತ ವ್ಯಕ್ತಿ 4 ರಿಂದ 7 ದಿನದ ಒಳಗೆ ಚೇತರಿಸಿಕೊಳ್ಳುತ್ತಾರೆ. ಒಮ್ಮೆ ಕರೋನಾ ವೈರಸ್ ವಿರುದ್ಧ ರೋಗಿಯ ದೇಹ ಹೋರಾಡಲು ಶುರು ಮಾಡಿದರೆ, ಶೀಘ್ರದಲ್ಲೇ ಹೊರ ರೋಗ ನಿರೋಧಕ ಶಕ್ತಿ ದೇಹದಲ್ಲೇ ಉತ್ಪತಿಯಾಗುತ್ತದೆ. ಹೀಗಾಗಿ ಪ್ಲಾಸ್ಮಾ ಥೆರೆಪಿ ಕರೋನಾ ಸೋಂಕಿಗೆ ರಾಮಬಾಣ ಎನ್ನಲಾಗುತ್ತಿದೆ.ಎಲ್ಲೆಲ್ಲಿ? ಯಾವಾಗ? ಈ ಚಿಕಿತ್ಸೆ ಮಾಡಲಾಗಿದೆ..?

ಭಾರತ 1890ರಲ್ಲಿ ಮೊದಲ ಬಾರಿ ಪ್ರಯೋಗ ಪ್ಲಾಸ್ಮಾ ಥೆರಪಿ ಆರಂಭ ಮಾಡಲಾಗಿತ್ತು. ಆ ಬಳಿಕ 2014ರಲ್ಲಿ ಎಬೊಲಾ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಬಳಕೆ ಮಾಡಲಾಯ್ತು. ನಂತರ 2009ರಲ್ಲಿ ಹೆಚ್1ಎನ್1 ಚಿಕಿತ್ಸೆಗೂ ಪ್ಲಾಸ್ಮಾ ಥೆರಪಿ ಬಳಕೆ ಮಾಡಲಾಯ್ತು. ಇದೀಗ ಕರೋನಾ ವಿರುದ್ಧ ಚೀನಾ ಪ್ಲಾಸ್ಮಾ ಥೆರಪಿ ಬಳಸಿತ್ತು. ನಂತರ ಚೀನಾ, ಇಂಗ್ಲೆಂಡ್, ಅಮೆರಿಕದಲ್ಲೂ ಪ್ಲಾಸ್ಮಾ ಥೆರಪಿ ಆರಂಭ ಮಾಡಲಾಯ್ತು. ಭಾರತದಲ್ಲಿ ಈಗಾಗಲೇ ದೆಹಲಿ, ಕೇರಳ, ಗುಜರಾತ್, ಪಂಜಾಬ್, ರಾಜಸ್ಥಾನದಲ್ಲಿ ಪ್ಲಾಸ್ಮಾ ಥೆರಪಿ ಶುರು ಮಾಡಲಾಗಿದೆ. ದೆಹಲಿಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ದೆಹಲಿ ಆರೋಗ್ಯ ಸಚಿವರು ತಿಳಿಸಿದ್ದಾರೆ. ಸದ್ಯ ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಕೋವಿಡ್-19 ಮೇಲೆ ಬಳಕೆ ಮಾಡುತ್ತಿದ್ದು, ಎಲ್ಲಾ ಕಡೆಯಲ್ಲೂ ಉತ್ತಮ ಫಲಿತಾಂಶ ಬಂದರೆ ಲಸಿಕೆ ಪತ್ತೆಗೂ ಮುನ್ನವೇ ಕರೋನಾ ಎಂಬ ಮಹಾಮಾರಿಗೆ ಸಂಜೀವಿನಿ ಸಿಕ್ಕಂತಾಗುತ್ತದೆ.ಪ್ಲಾಸ್ಮಾ ದಾನ ಯಾರು ಮಾಡಬಹುದು..?

ರಕ್ತದಾನ ಮಾಡುವಂತೆ ಪ್ಲಾಸ್ಮಾ ಕೂಡ ದಾನ ಮಾಡಬಹುದು. ಆದರೆ, ರಕ್ತವನ್ನು ಎಲ್ಲರೂ ದಾನ ಮಾಡಬಹುದು. ಪ್ಲಾಸ್ಮಾವನ್ನು ಎಲ್ಲರೂ ದಾನ ಮಾಡಬಹುದಾದರೂ ಕೋವಿಡ್-19 ಕಾಯಿಲೆ ಗುಣವಾಗಬೇಕಾದರೆ, ಈಗಾಗಲೇ ಕೋವಿಡ್-19 ಕಾಯಿಲೆ ಬಂದು ಗುಣಮುಖ ಆದವರು ಮಾತ್ರ ಪ್ಲಾಸ್ಮಾ ಡೊನೆಟ್ ಮಾಡಬಹುದು. ಒಮ್ಮೆ ನಮ್ಮ ದೇಹ ಕೋವಿಡ್-19 ವಿರುದ್ಧ ಹೋರಾಟ ಮಾಡುವುದನ್ನು ಗೊತ್ತು ಮಾಡಿಕೊಂಡರೆ, ಯಶಸ್ಸು ಶತಸಿದ್ಧ. ಆದರೆ ಕೆಲವರಲ್ಲಿ ರೋಗನಿರೋಧಕ ಶಕ್ತಿ ದಾಳಿ ಮಾಡುವ ಮುನ್ನವೇ ಕರೋನಾ ವೈರಸ್ ದಾಳಿ ಮಾಡಿ ಅಟ್ಟಹಾಸ ಮೆರೆದುಬಿಡುತ್ತೆ.

ಒಮ್ಮೆ ಕರೋನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಸೋಲುವ ಲಕ್ಷಣ ಕಾಣಿಸಿದರೆ ಕರೋನಾಗೆ ಗೆಲುವು ಸಿಕ್ಕಂತೆಯೇ ಸರಿ. ಇದೇ ಕಾರಣಕ್ಕಾಗಿ ದೆಹಲಿ ಕರೋನಾದಿಂದ ಗುಣಮುಖರಾದವರು ತಾವಾಗಿಯೇ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.ಹೇಗೆ ನಡೆಯುತ್ತೆ ಪ್ಲಾಸ್ಮಾ ದಾನ..?

ಪ್ಲಾಸ್ಮಾ ದಾನ ಪ್ರಕ್ರಿಯೆ ಅಂದಾಜು 1 ಗಂಟೆ ಕಾಲ ನಡೆಯಲಿದ್ದು, ದಾನ ಮಾಡಲು ಬರುವ ವ್ಯಕ್ತಿಯಿಂದ ಸಂಪೂರ್ಣವಾಗಿ ರಕ್ತವನ್ನು ತೆಗಯದೆ ಕೇವಲ ಪ್ಲಾಸ್ಮಾವನ್ನು ಮಾತ್ರ ಬೇರ್ಪಡಿಸಿ ತೆಗೆದುಕೊಳ್ಳಲಾಗುತ್ತದೆ. ಓರ್ವ ವ್ಯಕ್ತಿ 28 ದಿನಕ್ಕೊಮ್ಮೆ ಪ್ಲಾಸ್ಮಾ ದಾನ ಮಾಡಬಹುದು. AB ಬ್ಲಡ್ ಗ್ರೂಪ್‌ನ ವ್ಯಕ್ತಿಯಿಂದ ತೆಗೆದುಕೊಳ್ಳುವ ಪ್ಲಾಸ್ಮಾ ಯಾವುದೇ ರಕ್ತ ಗ್ರೂಪ್‌ ನ ವ್ಯಕ್ತಿಗೂ ಹೊಂದಾಣಿಕೆ ಆಗಲಿದ್ದು, ಯೂನಿವರ್ಸೆಲ್ ಪ್ಲಾಸ್ಮಾ ಗ್ರೂಪ್ ಆಗಿದೆ. ಓರ್ವ ವ್ಯಕ್ತಿ ವಾರ್ಷಿಕ 13 ಬಾರಿ ಪ್ಲಾಸ್ಮಾ ದಾನ ಮಾಡಬಹುದು. ಕೋವಿಡ್-19 ವಿರುದ್ಧ ಪ್ಲಾಸ್ಮಾ ಥೆರಪಿ ಪ್ರಯೋಗ ಹಂತದಲ್ಲಿದ್ದು ಯಶಸ್ಸು ಸಿಗುತ್ತಾ? ಇಲ್ವಾ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು.

ಸಾಮಾನ್ಯವಾಗಿ ವೆಂಟಿಲೇಟರ್‌ ನಲ್ಲಿರುವ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮಾಡಲಾಗುತ್ತದೆ. ಸದ್ಯಕ್ಕೆ ಪ್ಲಾಸ್ಮಾ ಥೆರಪಿಯನ್ನು ಕೇವಲ ಕ್ಲಿನಿಕಲ್ ಟ್ರಯಲ್ ಗೆ ಮಾತ್ರ ಐಸಿಎಂಆರ್ ಒಪ್ಪಿಗೆ ಕೊಟ್ಟಿದೆ. ಪ್ರಯೋಗದಲ್ಲಿ ಯಶಸ್ವಿ ಸಿಕ್ಕರೆ ಚಿಕಿತ್ಸೆಗೆ ಮತ್ತೊಮ್ಮೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಒಪ್ಪಿಗೆ ಪಡೆಯುವುದು ಅನಿವಾರ್ಯ ಆಗಲಿದೆ.

Tags: blood donationcorona awarnessCovid 19plasma therapyಕರೋನಾ ಜಾಗೃತಿಕೋವಿಡ್-19ಪ್ಲಾಸ್ಮಾ ಥೆರಪಿರಕ್ತದಾನ
Previous Post

ಕರೋನಾ ಸ್ಥಿತಿಗತಿ: ವೈಜ್ಞಾನಿಕ ಅಧ್ಯಯನ ನೀಡುವ ಮೇ 3ರ ಬಳಿಕದ ಚಿತ್ರಣವೇನು?

Next Post

ಬಡಿವಾರದ ಭಾಷಣಗಳಾಚೆ ಬಸವಣ್ಣ ನಮ್ಮೊಳಗೆ ಉಳಿದಿದ್ದಾನೆಯೇ?

Related Posts

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್
Top Story

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಕೇಂದ್ರದ ಬಿಜೆಪಿ ಸರ್ಕಾರವು ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ದಕ್ಷಿಣ ಭಾರತದ ರಾಜಕೀಯ ಅಸ್ಮಿತೆಯನ್ನು ಅಳಿಸಲು ‘ಭೀಕರ ಸಂಚು’ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ...

Read moreDetails
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
Next Post
ಬಡಿವಾರದ ಭಾಷಣಗಳಾಚೆ ಬಸವಣ್ಣ ನಮ್ಮೊಳಗೆ ಉಳಿದಿದ್ದಾನೆಯೇ?

ಬಡಿವಾರದ ಭಾಷಣಗಳಾಚೆ ಬಸವಣ್ಣ ನಮ್ಮೊಳಗೆ ಉಳಿದಿದ್ದಾನೆಯೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada