ಖ್ಯಾತ ಹಿನ್ನಲೆ ಗಾಯಕ, ನಟ ಎಸ್ ಪಿ ಬಾಲಸುಬ್ರಮಣಿಯಮ್ ಅವರಿಗೆ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಾಲಸುಬ್ರಮಣಿಯಮ್ ಅವರಿಗೆ ವಿಪರೀತ ರೋಗ ಲಕ್ಷಣಗಳು ಏನೂ ಇಲ್ಲ, ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಕಳೆದ ಎರಡು, ಮೂರು ದಿನಗಳಿಂದ ನನಗೆ ಶೀತ ಮತ್ತು ಜ್ವರದಂತಹ ಅಲ್ಪ ಅಸ್ವಸ್ಥತೆ ಕಾಣಿಸಿದ್ದು, ನಾನು ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿದೆ. ವೈದ್ಯರು ನನಗೆ ಸೌಮ್ಯವಾದ ಕರೊನಾ ವೈರಸ್ ಇದೆ ಎಂದು ಹೇಳಿದರು. ವೈದ್ಯರು ಮನೆಯಲ್ಲಿ ಕ್ವಾರಂಟೈನ್ ನಲ್ಲಿರಲು ಸೂಚಿಸಿದ್ದಾರೆ. ಆದರೆ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಯಾರೂ ನನ್ನ ಬಗ್ಗೆ ಆತಂಕಪಡಬೇಕಾಗಿಲ್ಲ ಮತ್ತು ನಾನು ಹೇಗಿದ್ದೇನೆಂದು ವಿಚಾರಿಸಲು ದಯವಿಟ್ಟು ನನಗೆ ಕರೆ ಮಾಡಬೇಡಿ. ಜ್ವರ ಮತ್ತು ಶೀತವನ್ನು ಹೊರತುಪಡಿಸಿ, ನಾನು ಸಂಪೂರ್ಣವಾಗಿ ಸರಿಯಾಗಿದ್ದೇನೆ. ಜ್ವರ ಕೂಡ ಕಡಿಮೆಯಾಗಿದೆ. ಎರಡು ದಿನಗಳಲ್ಲಿ ನಾನು ಡಿಸ್ಚಾರ್ಜ್ ಆಗುತ್ತೇನೆ ”ಎಂದು ಎಸ್‌ಪಿಬಿ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಸ್‌ಪಿಬಿ ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಮತ್ತು ಇತರ ಭಾಷೆಗಳಲ್ಲಿ ಸುಮಾರು 40,000 ಚಲನಚಿತ್ರ ಗೀತೆಗಳನ್ನು ಹಾಡಿದ ದಾಖಲೆಯನ್ನು ಹೊಂದಿದ್ದಾರೆ. ಭಾರತೀಯ ಚಲನಚಿತ್ರ ಸಂಗೀತದ ಸಾರ್ವಕಾಲಿಕ ದಂತಕಥೆಗಳೆಂದು ಪರಿಗಣಿಸಲ್ಪಟ್ಟ ಬಾಲಸುಬ್ರಮಣ್ಯಂ ತಮ್ಮ ಕುಟುಂಬದೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ.
Playback veteran #SPBalasubramaniam has tested #COVID19 positive. The singer issued a video from the hospital on Wednesday to confirm the news.#Balasubramaniam #COVIDー19 pic.twitter.com/Q7bRb6bcKv
— IANS Tweets (@ians_india) August 5, 2020