• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಎಸಿಬಿ ಮೆಟ್ಟಿಲೇರಿದ ಸಿಎಂ ಪುತ್ರ ವಿಜಯೇಂದ್ರ ಹಗರಣ

by
September 28, 2020
in ಕರ್ನಾಟಕ
0
ಎಸಿಬಿ ಮೆಟ್ಟಿಲೇರಿದ ಸಿಎಂ ಪುತ್ರ ವಿಜಯೇಂದ್ರ ಹಗರಣ
Share on WhatsAppShare on FacebookShare on Telegram

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ವಿರುದ್ಧ ಕೇಳಿ ಬಂದಿರುವ ಲಂಚ ಆರೋಪ ಪುಕರಣ ಭ್ರಷ್ಟಾಚಾರ ನಿಗ್ರಹ ದಳದ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದಾಖಲೆಗಳ ಸಮೇತ ಕರ್ನಾಟಕ ರಾಷ್ಟ್ರ ಸಮಿತಿಯು (ಕೆಆರ್‌ಎಸ್‌) ದೂರು ದಾಖಲಿಸಿದೆ. ಬಿಡಿಎ ಮಾಜಿ ಆಯುಕ್ತ ಡಾ ಜಿ ಸಿ ಪ್ರಕಾಶ್ ಅವರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ರಾಮಲಿಂಗಂ ಕಂಸ್ಟ್ರಕ್ಷನ್ಸ್ ಪ್ರೈವೆಟ್ ಲಿಮಿಟೆಡ್‌ನಿಂದ ಡಾ ಜಿ ಸಿ ಪ್ರಕಾಶ್ ಅವರು ಸುಮಾರು 12 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪವಿದ್ದು, ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಹೇಳಿದೆ.

ದೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ಕರ್ನಾಟಕ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕೂಡಾ ರಾಮಲಿಂಗಂ ಕಂಸ್ಟ್ರಕ್ಷನ್ಸ್ ಪ್ರೈವೆಟ್ ಲಿಮಿಟೆಡ್‌ ನಿಂದ ಪ್ರತ್ಯೇಕವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಲು ಉದ್ದೇಶಿಸಿರುವ ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಕೋನದಾಸಾಪುರ ಗ್ರಾಮದ ಸರ್ವೆ ಸಂಖ್ಯೆ 22 ಮತ್ತು 23 ರಲ್ಲಿ ವಸತಿ ಸಮುಚ್ಛಯದ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಆರ್‌ಎಸ್‌ನ ರಾಜ್ಯ ಪುಧಾನ ಕಾರ್ಯದರ್ಶಿ ಸಿ ಎನ್ ದೀಪಕ್ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಸಿ ಎನ್‌ ದೀಪಕ್‌, ಬಿಬಿಎಂಪಿ ಮಾಜಿ ಕಮಿಷನರ್‌ ಇರುವ ಸಂಧರ್ಭದಲ್ಲಿ ಪ್ರಕರಣ ನಡೆದಿದ್ದು, ಅದರಲ್ಲಿ ವಿಜಯೇಂದ್ರ, ಶಶಿಧರ್‌ ಮರಡಿ, ಜಿ ಸಿ ಪ್ರಕಾಶ್ ಹಾಗೂ ಸಂಜಯ್‌ ಶ್ರೀ ಪ್ರಮುಖ ಪಾತ್ರಧಾರಿಗಳು. ವಾಟ್ಸಪ್‌ ಸಂದೇಶದಲ್ಲಿ ಅದಕ್ಕೆ ಪೂರಕ ಸಾಕ್ಷಿ ಲಭ್ಯವಿದೆ.

ಸರ್ಕಾರ ಅಧಿಕಾರ ದುರುಪಯೋಗಪಡಿಸಿ ವಿರುದ್ಧ ಮಾತನಾಡುವವರ ದನಿಯಡಗಿಸುವುದು ಎಲ್ಲಾ ಸರ್ಕಾರ ಮಾಡಿಕೊಂಡು ಬಂದಿದೆ. ಈ ಪ್ರಕರಣದಲ್ಲಿ ಸರ್ಕಾರ ನಾಚಿಕೆಬಿಟ್ಟು ಇದರ ಕುರಿತಂತೆ ವರದಿ ಪ್ರಕಟಿಸಿದ ಪವರ್‌ ಟಿವಿ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ.

ಈಗಾಗಲೇ ಲಂಚ ಪ್ರಕರಣದ ಕುರಿತಂತೆ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇವೆ. ಲಂಚ ಪಡೆದಿರುವ ಹಣವನ್ನು ಮನಿ ಲಾಂಡ್ರಿಂಗ್ ಮಾಡಿದ್ದಾರೆ. ಇದು ಎಸಿಬಿ ವ್ಯಾಪ್ತಿಗೆ ಬರದೆ ಇರುವ ಕಾರಣದಿಂದ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇವೆ, ಹಾಗೂ ಈ ಪ್ರತಿಗಳನ್ನು ನಿರ್ಮಲಾ ಸೀತರಾಮನ್‌, ಪ್ರಧಾನಿ ಕಛೇರಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೂ ಕಳುಹಿಸಿದ್ದೇವೆ ಎಂದು ದೀಪಕ್‌ ತಿಳಿಸಿದ್ದಾರೆ.

ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇರುವುದರಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಜೆಪಿ ನಡ್ಡಾ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತನ್ನ ಮಗನ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಅವರ ಪಾತ್ರ ಇರದೆ ಇರಲು ಸಾಧ್ಯವಿಲ್ಲ. ಯಡಿಯೂರಪ್ಪ ಇದರ ಹೊಣೆ ಹೊತ್ತುಕೊಳ್ಳಬೇಕೆಂದೂ ಅವರು ಆಗ್ರಹಿಸಿದ್ದಾರೆ.

ದೂರಿನಲ್ಲಿ, ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕೋನದಾಸನಪುರದ ಸರ್ವೆ ನಂಬರ್ 22, 23ಯಲ್ಲಿ ವಸತಿ ಸಮುಚ್ಚಯ ಕಾಮಗಾರಿ ನಡೆಸಲು 586.00 ಕೋಟಿ ರುಪಾಯಿ ಮೊತ್ತಕ್ಕೆ 2017ರ ಆಗಸ್ಟ್ 31ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಡಳಿತಾತ್ಮಕ ಅನುಮೋದನೆ ಪಡೆದಿದ್ದು, ಅನುಮೋದನೆ ಪಡದಿದ್ದ ಮೊತ್ತದ ಪೈಕಿ ಅಂತಿಮವಾಗಿ 56700.00 ಲಕ್ಷ ರುಪಾಯಿಗಳನ್ನು ಟೆಂಡರ್ ಮೊತ್ತ ಎಂದು ನಮೂದಿಸಲಾಗಿತ್ತು ಎಂದು ವಿವರಿಸಲಾಗಿದೆ

ಯೋಜನೆ ಕಾಮಗಾರಿ ಸಂಬಂಧ 2017ರ ಅಕ್ಟೋಬರ್ 11ರಂದು ಟೆಂಡರ್ ಕರೆಯಲಾಗಿತ್ತು. (ಟೆಂಡರ್ ಸಂಖ್ಯೆ BDA/EE/HPD-1/TEN/T=186/2016-17) ಇದರಲ್ಲಿ ನಾಗಾರ್ಜುನ ಮತ್ತು ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಭಾಗವಹಿಸಿ‌ತ್ತು. ನಾಗಾರ್ಜುನ ಕಂಪನಿಯು 691,74,00,00 ಲಕ್ಷ ರು.ಗಳಿಗೆ ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ 675,00,00,000 ಲಕ್ಷ ರು.ಗಳನ್ನು ನಮೂದಿಸಿತ್ತು. ರಾಮಲಿಂಗಂ ಕಂಪನಿ ನಮೂದಿಸಿದ ದರವು 2016-17ನೇ ಸಾಲಿನ ದರಪಟ್ಟಿ ದರಗಳ ಪೈಕಿ ಶೇಕಡವಾರು 19.04ರಷ್ಟಿದ್ದರೆ ನಾಗಾರ್ಜುನ ಕಂಪನಿಯು ನಮೂದಿಸಿದ ದರದಲ್ಲಿ ಶೇ.22.03ರಷ್ಟು ಹೆಚ್ಚುವರಿಯಾಗಿತ್ತು ಎಂದು ಉಲ್ಲೇಖಿಸಿದೆ.

Also Read: ಬಹುಕೋಟಿ ಹಗರಣ ಆರೋಪ: ಬಿ ವೈ ವಿಜಯೇಂದ್ರ ವಿರುದ್ಧ ಡಿಜಿಐಜಿಗೆ ದೂರು

ದರ ಸಂಧಾನದ ನಂತರ ಬಿಡ್ ಮೊತ್ತ 66622.50 ಲಕ್ಷ ರು.ಗೆ 2016-17ನೇ ಸಾಲಿನ ದರಪಟ್ಟಿ ದರಗಳಿಗೆ ಶೇ.17.50 (ಹೆಚ್ಚುವರಿ) ನಮೂದಿಸಿದ ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿಯ ಬಿಡ್ ಗೆ ಅನುಮೋದನೆ ಕೋರಿತ್ತು. ಕಾಮಗಾರಿಗೆ ಬೇಕಾಗಬಹುದಾದ ಆರ್ಥಿಕ ನೆರವನ್ನು ಅಗತ್ಯವಿದ್ದಲ್ಲಿ ಹಣಕಾಸು ಸಂಸ್ಥೆಗಳಿಂದ ಪಡೆದುಕೊಳ್ಳುವ ಅಧಿಕಾರವನ್ನು ಆಯುಕ್ತರಿಗೆ ಪ್ರತ್ಯಾಯೋಜಿಸಲು ಪ್ರಾಧಿಕಾರದ ಆಡಳಿತ ಮಂಡಳಿ ಅನುಮೋದನೆ ಕೋರಿತ್ತು ಎಂದು ಎಸಿಬಿ ಗಮನಕ್ಕೆ ತಂದಿದೆ.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆದಾಯವಿಲ್ಲದೆ ಸೊರಗಿದ್ದರಿಂದ ಕೋನದಾಸನಪುರ ಯೋಜನೆಗೆ ಸಮ್ಮತಿ ವ್ಯಕ್ತಪಡಿಸದ ಹಿಂದಿನ ಆಯುಕ್ತರಾಗಿದ್ದ ರಾಕೇಶ್ ಸಿಂಗ್ ಅವರು 2019ರ ಮಾರ್ಚ್ 20ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು ಎಂದು ತಿಳಿದು ಬಂದಿದೆ. ಆದರೂ ಒಂದೇ ತಿಂಗಳ ಅಂತರದಲ್ಲಿ ಅಂದರೆ 2019ರ ಏಪ್ರಿಲ್ 22 ರಂದು ನಿರ್ಮಾಣ ಕಂಪನಿಗೆ ಪ್ರಾಧಿಕಾರ ಒಪ್ಪಿಗೆ ಪತ್ರ ನೀಡಿತ್ತು (Letter of Acceptence).

ಇದಾದ ಬಳಿಕ 33 ಕೋಟಿ ರು. ಭದ್ರತಾ ಠೇವಣಿ ಮೊತ್ತ ಪಾವತಿಸಲು ಪ್ರಾಧಿಕಾರ ನಿರ್ಮಾಣ ಕಂಪನಿಗೆ ಆದೇಶಿಸಿದ್ದು, ಅಂತಿಮವಾಗಿ ನಿರ್ಮಾಣ ಕಂಪನಿಗೆ ಕಾರ್ಯಾದೇಶ ನೀಡಲಾಗಿತ್ತು ಎಂಬುದು ತಿಳಿದು ಬಂದಿದೆ. ಕಡಿಮೆ ದರ ನಮೂದಿಸಿದ್ದ ಈ ಕಂಪನಿ ಮತ್ತು ಬಿಡಿಎ ಮಧ್ಯ 2019ರ ಜೂನ್ 24ರಂದು ಒಪ್ಪಂದವಾಗಿದ್ದು, ಕಾರ್ಯಾದೇಶವನ್ನೂ ನೀಡಲಾಗಿದೆ. ಇದರ ಪುಕಾರ 30 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಮೈತ್ರಿ ಸರ್ಕಾರ ಬದಲಾದ ನಂತರ ಬಿಡಿಎಗೆ ಆಯುಕ್ತರಾಗಿ ನೇಮಕವಾಗಿದ್ದ ಡಾ ಜಿ ಸಿ ಪುಕಾಶ್ ಅವರು ಲಂಚಕ್ಕಾಗಿ (ಹಣ) ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿಯು, ಆಯುಕ್ತರಾಗಿದ್ದ ಡಾ ಜಿ ಸಿ ಪುಕಾಶ್ ಅವರು ಸುಮಾರು 12 ಕೋಟಿ ಹಣ ಪಡೆದಿದ್ದಾರೆ. ಇದಾದ ನಂತರವೂ ವಿಜಯೇಂದ್ರ ಅವರು ಪ್ರತ್ಯೇಕವಾಗಿ ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ ಎಂದು ದೂರಿದ್ದಾರೆ.

ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿಯ ಪುತಿನಿಧಿಯೊಬ್ಬರು ಮತ್ತು ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ ಮರಡಿ ಅವರ ನಡುವ ಲಂಚದ ಹಣ ತಲುಪಿಸುವ ಭಾಗವಾಗಿ 2019ರ ಅಕ್ಟೋಬರ್ 24ರಿಂದ 2020ರ ಆಗಸ್ಟ್ 17ರ ನಡುವೆ ವಾಟ್ಸಾಪ್ ಮೂಲಕ ಸಂವಹನ ನಡೆದಿರುವುದು ಇದಕ್ಕೆ ಬಲವಾದ ಆಧಾರ ಒದಗಿಸಿದೆ ಎಂದು ಪುಸ್ತಾಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿಯು ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ಸರ್ಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿ ಹಗರಣ ನಡೆಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ವಿವರಿಸಿದೆ.

‘ಒಟ್ಟಾರೆ ಹಲವು ಸಂದರ್ಭಗಳಲ್ಲಿ ಹಣ ತಲುಪಿಸುವ ಬಗ್ಗೆ ಯಾರಿಗೆ ಎಲ್ಲಿ ತಲುಪಿಸಬೇಕು ಎಂದು ಸಂದೇಶ ವಿನಿಮಯ ಮಾಡಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ 13.90 ಕೋಟಿ ಹಣದ ವರ್ಗಾವಣೆ ಬಗ್ಗೆ ಮಾತುಕತೆ ನಡೆದಿರುವುದು ಕಂಡು ಬಂದಿದೆ, ಎಂದು ಆರೋಪಿಸಿಲಾಗಿದೆ.

Tags: ಎಸಿಬಿಕರ್ನಾಟಕ ರಾಷ್ಟ್ರ ಸಮಿತಿಬಿ.ವೈ.ವಿಜಯೇಂದ್ರಭ್ರಷ್ಟಾಚಾರಭ್ರಷ್ಟಾಚಾರ ನಿಗ್ರಹದಳಯಡಿಯೂರಪ್ಪ
Previous Post

ಯಡಿಯೂರಪ್ಪ ಒಬ್ಬ ʼಢೋಂಗಿ ರೈತನಾಯಕʼ – ಸಿದ್ದರಾಮಯ್ಯ

Next Post

ಕರ್ನಾಟಕ ಬಂದ್: ಪ್ರತಿಭಟನಕಾರರು ಪೊಲೀಸ್‌ ವಶಕ್ಕೆ

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಕರ್ನಾಟಕ ಬಂದ್: ಪ್ರತಿಭಟನಕಾರರು ಪೊಲೀಸ್‌ ವಶಕ್ಕೆ

ಕರ್ನಾಟಕ ಬಂದ್: ಪ್ರತಿಭಟನಕಾರರು ಪೊಲೀಸ್‌ ವಶಕ್ಕೆ

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada