ಕರೋನಾ ಏರುವಿಕೆಯ ವೇಗಕ್ಕೆ ಕಡಿವಾಣ ಹಾಕಲು ಭಾನುವಾರ ನಗರದಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಕಮಿಷನರ್ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆಗಳಿಗೆ ಹೊರಗೆ ಹೋಗಬಹುದು ಎಂದು ಬಿಬಿಎಂಪಿ ಕಮಿಷನರ್ ತಿಳಿಸಿದ್ದಾರೆ.
Night curfew on till Monday 5 am.
ಬೆಂಗಳೂರಿನಲ್ಲಿ ಇಂದು ರಾತ್ರಿ 9ಗಂಟೆಯಿಂದ ಸೋಮವಾರ ಮುಂಜಾನೆ 5ಗಂಟೆಯ ವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಅಗತ್ಯ ಸೇವೆಗಳಿಗೆ ಹೊರತು ಪಡಿಸಿ, ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.#BBMP @CMofKarnataka @BBMP_MAYOR @BlrCityPolice @CPBlr
— N. Manjunatha Prasad,IAS (@BBMPCOMM) July 25, 2020
ಈ ಕುರಿತು ನಗರ ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ಕೂಡಾ ಟ್ವೀಟ್ ಮಾಡಿದ್ದಾರೆ. ದಯವಿಟ್ಟು ಮನೆಯಲ್ಲಿಯೇ ಇರಿ ಎಂದು ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ನಿಮ್ಮ ರಕ್ಷಣೆಗಾಗಿ ನಾವು ರಸ್ತೆಯಲ್ಲಿ ನಿಲ್ಲುತ್ತೇವೆ ಎಂದೂ ಅವರು ಹೇಳಿದ್ದಾರೆ.
Please remain home and stay safe for tomorrow’s lockdown. It’s in your own interest to break the chain… so faar you have been wonderful citizens..we will be out on streets to ensure your safety…
— Bhaskar Rao IPS (@deepolice12) July 25, 2020













