• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಅನಂತ್ ಕುಮಾರ್ ಹೆಗಡೆ ವಿಚಾರದಲ್ಲಿ ಬಿಜೆಪಿ ಬೃಹನ್‌ ನಾಟಕ!

by
February 4, 2020
in ಕರ್ನಾಟಕ
0
ಅನಂತ್ ಕುಮಾರ್ ಹೆಗಡೆ ವಿಚಾರದಲ್ಲಿ ಬಿಜೆಪಿ ಬೃಹನ್‌ ನಾಟಕ!
Share on WhatsAppShare on FacebookShare on Telegram

ಅನಂತ್ ಕುಮಾರ್ ಹೆಗಡೆ, ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ. ಮಾಜಿ ಕೇಂದ್ರ ಸಚಿವ. ಕಳೆದ ಶನಿವಾರ ವೀರ್ ಸಾರ್ವಕರ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ ಕುಮಾರ್‌, ಮಹಾತ್ಮ ಗಾಂಧಿಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ತುಚ್ಛವಾಗಿ ಮಾತನಾಡಿದ್ರು. ನೀವು ಬಂಧಿಸಿದಂತೆ ಮಾಡಿ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬ್ರಿಟೀಷರ ಜೊತೆ ಹೊಂದಾಣಿಕೆ ಹೋರಾಟ ಮಾಡಿಕೊಂಡು ಬಂದವರು ಮಹಾತ್ಮರಾಗಿದ್ದಾರೆ ಎಂದು ಹಂಗಿಸಿದ್ದರು. ಅನಂತ್ ಕುಮಾರ್ ಹೆಗಡೆ ಮಾತಿಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಕ್ಷಮಾಪಣೆ ಕೇಳುವಂತೆ ಆಗ್ರಹ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಗಡೆ ಸಂಸದನಾಗಲು ನಾಲಾಯಕ್‌ ಎಂದಿದ್ದರು. ನಾಥೂರಾಮ್‌ ಗೋಡ್ಸೆ ಸಂತತಿಯವರಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯವೆಂದು ವ್ಯಂಗ್ಯವಾಗಿ ಹೇಳಿದ್ದರು. ಇದೀಗ ಎಚ್ಚೆತ್ತಿರುವ ಬಿಜೆಪಿ ಹೈಕಮಾಂಡ್ ನಾಯಕರು ಅನಂತ ಕುಮಾರ್ ಹೆಗಡೆ ಅವರಿಂದ ಕಾರಣ ಕೇಳಿ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಜೊತೆಗೆ ಮಂಗಳವಾರ ನಿಗದಿಯಾಗಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಹಾಜರಾಗದಂತೆ ಸೂಚನೆ ಕೊಟ್ಟಿದೆ.

ADVERTISEMENT

ಅನಂತ್ ಕುಮಾರ್ ಹೆಗಡೆ ಈ ರೀತಿಯ ಹೇಳಿಕೆ ಕೊಡುತ್ತಿರೋದು ಇದೇ ಮೊದಲೇನಲ್ಲ. 2017ರಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತ ಕುಮಾರ್ ಹೆಗಡೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಜಾತ್ಯಾತಿತವಾದಿ ಎಂದು ಕರೆಸಿಕೊಳ್ಳುವ ಬುದ್ಧಿಜೀವಿಗಳಿಗೆ ಅಪ್ಪ ಅಮ್ಮ ಯಾರು ಎನ್ನುವುದು ಗೊತ್ತಿರಲ್ಲ. ಸಂವಿಧಾನದಲ್ಲೂ ಸಾಕಷ್ಟು ಲೋಪಗಳಿವೆ. ನಾವು ಸಂವಿಧಾನದವನ್ನು ಬದಲಾವಣೆ ಮಾಡಲು ಈಗ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಅಬ್ಬರಿಸಿದ್ರು. ಆ ಬಳಿಕ ಸಂಸತ್ತಿನಲ್ಲೂ ಅನಂತ ಕುಮಾರ್ ಹೆಗಡೆ ಮಾತು ಪ್ರತಿಧ್ವನಿಸಿತ್ತು. ಆ ಬಳಿಕ ಕೇಂದ್ರ ಬಿಜೆಪಿ ನಾಯಕರು ಅನಂತ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ. ಪಕ್ಷ ಸಂವಿಧಾನ ಬದಲಾವಣೆ ಮಾತನ್ನು ಬೆಂಬಲಿಸುವುದಿಲ್ಲ ಎಂದು ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಿತ್ತು. ಸಂವಿಧಾನ ಬದಲಾವಣೆ ಚಿಂತನೆ ನಮ್ಮದಲ್ಲ ಎಂದ ಬಳಿಕ ಅನಂತ ಕುಮಾರ್‌ ಹೆಗಡೆ ನಾನು ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಹೇಳಿಲ್ಲ, ನನ್ನ ಮಾತನ್ನು ತಿರುಚಲಾಗಿದೆ ಎಂದು ಮಾತಿನಿಂದಲೇ ಉಲ್ಟಾ ಹೊಡೆದಿದ್ದರು.

ಅನಂತ ಕುಮಾರ ಹೆಗಡೆ ಹೇಳಿಕೆ ಕೇವಲ ಸಂವಿಧಾನ ಬದಲಾವಣೆಗೆ ಮಾತ್ರ ಸೀಮಿತವಾಗಲಿಲ್ಲ. ಮತ್ತೊಮ್ಮೆ ನಾಥೂರಾಮ್‌ ಗೋಡ್ಸೆ ಬಗ್ಗೆ ತಮ್ಮ ಚಾಳಿಯನ್ನು ಮುಂದುವರಿಸಿದ್ದರು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದರು. ಆ ಮಾತನ್ನು ಬೆಂಬಲಿಸಿ ಮಂಗಳೂರು ಸಂಸದ ಇಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಒಂದು ಟ್ವೀಟ್ ಮಾಡಿದ್ದರು. ನಾಥೂರಾಮ್‌ ಗೋಡ್ಸೆ ಕೊಂದಿದ್ದು ಒಬ್ಬರನ್ನು, ಅಜ್ಮಲ್‌ ಕಸಬ್‌ ಕೊಂದಿದ್ದು 170 ಜನರನ್ನು, ರಾಜೀವ್‌ ಗಾಂಧಿ ಕೊಂದಿದ್ದು ಬರೋಬ್ಬರಿ 17,000 ಸಾವಿರ ಜನರನ್ನು. ಈಗ ನೀವೇ ಹೇಳಿ ಈಗ ಯಾರು..? ಕ್ರೂರ ಕೊಲೆಗಾರ ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದರು. ಇದನ್ನೇ ಬಳಸಿಕೊಂಡ ಉತ್ತರ ಕನ್ನಡ ಸಂಸದ ಅನಂತ ಕುಮಾರ್‌ ಹೆಗಡೆ, ʻಕಳೆದ 7 ದಶಕದಲ್ಲಿ ನಾಥೂರಾಮ್ ಗೋಡ್ಸೆ ಬಗ್ಗೆ ಈ ತಲೆಮಾರು ಮೊದಲ ಬಾರಿಗೆ ಬದಲಾದ ಹೊಸ ಗ್ರಹಿಕೆಯ ಪರಿಸರದಲ್ಲಿ ಚರ್ಚೆ ಮಾಡುತ್ತಿದೆ. ಕೊನೆಗೂ ಗೋಡ್ಸೆ ಬಗೆಗಿನ ಇಂತಹ ಚರ್ಚೆಗಳು ಸಂತಸ ನೀಡುತ್ತಿವೆʼ ಎಂದು ಬರೆದುಕೊಂಡಿದ್ದರು. ಇದು ವಿವಾದದ ಕಿಡಿ ಹಚ್ಚುತ್ತಿದ್ದಂತೆ ಟ್ವೀಟ್‌ ಡಿಲೀಟ್‌ ಮಾಡಿ ವಿಷಾದ ವ್ಯಕ್ತಪಡಿಸಿದ್ದರು.

ಇದೀಗ ಅದೇ ಗಾಂಧಿ ವಿಚಾರದಲ್ಲೇ ಮತ್ತೇ ತನ್ನ ಮಾತಿನ ಚಪಲ ಮುಂದುವರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದ ಹಾಗೆ ಶೊಕಾಸ್‌ ನೋಟಿಸ್‌ ಕೊಟ್ಟಿದ್ದಾರೆ. ಆ ಬಳಿಕ ಶೋಕಾಸ್‌ ನೋಟಿಸ್‌ ಕಸದ ಬುಟ್ಟಿ ಸೇರುತ್ತದೆ. ಸಂಸದ ಅನಂತ ಕುಮಾರ್‌ ಹೆಗಡೆ ಮತ್ತೆ ಮಾತು ಹರಿಬಿಡುತ್ತಾ ಓಡಾಡುತ್ತಾರೆ. ದೇಶಕ್ಕೆಲ್ಲಾ ಹಿತವಚನ ಹೇಳುವ ನಮ್ಮ ಪ್ರಧಾನ ಮಂತ್ರಿ ಈ ವಿಚಾರಗಳ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ, ಸಂಸದ ಅನಂತ ಕುಮಾರ್‌ ಹೆಗಡೆ ಹಾಗು ಇತರೆ ವಿವಾದಿತ ಸಂಸದರು, ನಾಯಕರನ್ನು ಕರೆದು ಬುದ್ಧಿ ಹೇಳುವ ಕೆಲಸವನ್ನೂ ಮಾಡುವುದಿಲ್ಲ. ಸ್ವತಃ ತಾವೇ ಮಹಾತ್ಮ ಗಾಂಧಿ ಎಲ್ಲರಿಗೂ ಪ್ರೇರಣೆ ಎಂದು ಹೇಳುವ ಆ ವ್ಯಕ್ತಿಗೆ ಅವಮಾನ ಆದರೂ ತಮ್ಮ ಮೌನಕ್ಕೆ ಸಡ್ಡು ಹೊಡೆಯಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ, ಬಿಜೆಪಿ ಪಕ್ಷಕ್ಕೂ ಇದೇ ರೀತಿ ವಿವಾದ ಮಾಡುವ ನಾಯಕರ ಅವಶ್ಯಕತೆ ಇದೆ. ಕೆಲವೊಮ್ಮೆ ಸಮಾಜದ ದಿಕ್ಕು ತಪ್ಪಿಸಲು ಶೋಕಾಸ್‌ ನೋಟಿಸ್‌ ಎಂಬ ನಾಟಕವಾಡುತ್ತೆ. ಆ ಬಳಿಕ ಮತ್ತೆ ತನ್ನ ಚಾಳಿ ಮುಂದುವರಿಸಲು ಸೂಚಿಸ್ತಾರಾ..? ಎಂಬ ಅನುಮಾನ ಮೂಡತೊಡಗಿದೆ.

Tags: Ananth Kumar HegdeBJPdramaGodseMahatma GandhiShowcase Noticeಅನಂತ್ ಕುಮಾರ್ ಹೆಗಡೆನಾಟಕಬಿಜೆಪಿ
Previous Post

ಹೋರಾಟಗಾರರನ್ನು ಹೊಡೆದುರುಳಿಸಿ ಎಂದು ಹೇಳಿದ್ದಕ್ಕೆ ವಿಷಾದವಿಲ್ಲವಂತೆ!

Next Post

CAA ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಉ.ಪ್ರ. ಪೊಲೀಸರ ಕುಮ್ಮಕ್ಕು?

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
CAA ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಉ.ಪ್ರ. ಪೊಲೀಸರ ಕುಮ್ಮಕ್ಕು?

CAA ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಉ.ಪ್ರ. ಪೊಲೀಸರ ಕುಮ್ಮಕ್ಕು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada