ಹಿಂದೂ ಮಹಾ ಸಾಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನೀ ಪ್ರಭಾವಕ್ಕೆ ಪ್ರತಿಯಾಗಿ ತನ್ನ ನೌಕಾಪಡೆಯ ಸಾಮರ್ಥ್ಯ ಹಾಗೂ ಕ್ಷಮತೆಯನ್ನು ವೃದ್ಧಿಸಿಕೊಳ್ಳಲು ಭಾರತ ಯತ್ನಿಸಬೇಕಿರುವುದು geopolitical necessity. ಅದಾಗಲೇ ಏಕಕಾಲದಲ್ಲಿ ಎರಡು ಯುದ್ಧ ವಿಮಾನ ವಾಹಕ ಹಡಗುಗಳನ್ನು ಹೊಂದಲು ಯತ್ನಿಸುತ್ತಿರುವ ಭಾರತೀಯ ನೌಕಾಪಡೆ, ಅವುಗಳ ಡೆಕ್ ಮೇಲೆ ಇರಿಸಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬಹಳ ದಿನಗಳಿಂದಲೂ ಚಿಂತಮಗ್ನವಾಗಿದೆ.
ಸದ್ಯದ budgetary limitationsಅನ್ನು ಗಮನದಲ್ಲಿಟ್ಟುಕೊಂಡಲ್ಲಿ, ಇರುವ ಶಸ್ತ್ರಾಸ್ತ್ರಗಳ ಆಯುಷ್ಯ ವೃದ್ಧಿಸಲು ತೆಗೆದುಕೊಳ್ಳಬಹುದಾದ economical steps ಮತ್ತು ಸಣ್ಣ ಪುಟ್ಟ ಖರೀದಿಗಳನ್ನು ಬಹಳ ಯೋಜನಾಬದ್ಧವಾಗಿ ಮಾಡುವ ಮೂಲಕ ಸಾಮರ್ಥ್ಯ ಹಾಗೂ ಕ್ಷಮತೆಗಳ ನಡುವಿನ gapಗಳನ್ನು ಸಾಧ್ಯವಾದಷ್ಟು ಪ್ಲಗ್ ಮಾಡುತ್ತಾ ಸಾಗುವ ಕೆಲಸವನ್ನು ಸಶಸ್ತ್ರ ಪಡೆಗಳು ಮಾಡುತ್ತಿವ
ಇಂಥದ್ದೇ ಒಂದು ಕ್ರಮವಾಗಿ, ಅಮೆರಿಕ ನಿರ್ಮಿತ MH-60 ರೋಮಿಯೋ ಹೆಲಿಕಾಪ್ಟರ್‌ಗಳ ಖರೀದಿಯೂ ಒಂದಾಗಿದೆ. $2.5 ಶತಕೋಟಿ ಡಾಲರ್ (18 ಸಾವಿರ ಕೋಟಿ ರೂಗಳು) ವೆಚ್ಚದಲ್ಲಿ 24 ಹೆಲಿಕಾಪ್ಟರ್‌ಗಳನ್ನು ಖರೀದಿ ಮಾಡುವ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಮಹತ್ವದ ಘೋಷಣೆಯಾಗಲಿದೆ.
7516 ಕಿಮೀ ಉದ್ದದ ಕಡಲ ತೀರವನ್ನು ಹೊಂದಿರುವುದಲ್ಲದೇ 23.7 ಲಕ್ಷ ಚದರ ಕಿಮೀ ವ್ಯಾಪ್ತಿಯಷ್ಟು ಸಾಗರಿಕ ಆರ್ಥಿಕ ವಲಯವನ್ನು (EEZ) ಹೊಂದಿರುವ ಭಾರತದಂಥ ದೇಶಕ್ಕೆ ಸಮರ್ಪಕ ನೌಕಾಪಡೆಯ ಅಗತ್ಯ ಎಷ್ಟಿರಲಿದೆ ಎಂಬುದನ್ನು ನಮ್ಮ ದೇಶದ ವಿಸ್ತಾರವೇ ಸಾರಿ ಹೇಳುತ್ತದೆ. ಇಂಥದ್ದರಲ್ಲಿ, ಯಾವುದೇ ಆಧುನಿಕ ನೌಕಾಪಡೆಗೆ ಅಗತ್ಯವಾದ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹೊಂದದೇ ದಶಕಗಳನ್ನೇ ಕಳೆದುಬಿಟ್ಟಿರುವ ಭಾರತೀಯ ನೌಕಾಪಡೆಗೆ ಕೊನೆಗೂ ಒಂದು ಅದ್ಭುತ ಶಕ್ತಿಯ ರೂಪದಲ್ಲಿ ಈ ಹೆಲಿಕಾಪ್ಟರ್‌ಗಳು ಸೇರಿಕೊಳ್ಳಲಿವೆ.
ಆತ್ಯಾಧುನಿಕ ಸೆನ್ಸಾರ್‌ಗಳು, ಕ್ಷಿಪಣಿಗಳು ಹಾಗೂ ಟೋರ್ಪಿಡೋಗಳ ಮೂಲಕ ಸಮುದ್ರದ ಮೇಲೆ ತೇಲುವ ಯುದ್ಧ ನೌಕೆಗಳು, ಆಳದಲ್ಲಿರುವ ಸಬ್‌ಮರೀನ್‌ಗಳ ವಿರುದ್ಧ ಕಾದಾಡಲು ಹಾಗೂ ರಕ್ಷಣಾ ಕಾರ್ಯಗಳಿಗೆಲ್ಲಾ ಬಳಸಬಹುದಾದ ಸಮರ್ಥ ಅಸ್ತ್ರವೊಂದಕ್ಕೆ ಹುಡುಕಾಡುತ್ತಿದ್ದ ನೌಕಾಪಡೆಗೆ ಉತ್ತರದ ರೂಪದಲ್ಲಿ ಈ MH-60 ಸೀಹಾಕ್‌ಗಳು ಸಿಕ್ಕಿವೆ.
ತನ್ನಲ್ಲಿರುವ ರೇಡಾರುಗಳು ಹಾಗೂ ಸೆನ್ಸಾರ್‌ಗಳ ಮೂಲಕ ಸಮುದ್ರದ ಆಳದಲ್ಲಿರುವ ಸಬ್‌ಮೆರೀನ್‌ಗಳನ್ನು ಡಿಟೆಕ್ಟ್ ಮಾಡಬಲ್ಲ ಈ ಸೀಹಾಕ್‌ಗಳು, ಸೋನೋಬೊಯ್ ಲಾಂಚರ್ ಹಾಗೂ ರೇಯಿಥಾನ್ ಹೆಸರಿನ ಅತ್ಯಂತ ಸುಧಾರಿತ airborne low frequency dipping sonar (ALFS) ಮೂಲಕ ಎಷ್ಟೇ ಆಳದಲ್ಲಿ ಸಂಚರಿಸುತ್ತಿರುವ ಸಬ್‌ಮೆರೀನ್‌ಗಳನ್ನೂ ಪತ್ತೆ ಮಾಡಬಲ್ಲದಾಗಿದೆ. ಇದರೊಂದಿಗೆ ತನ್ನಲ್ಲಿರುವ ಲೈಟ್ ವೇಯ್ಟ್ ಟೋರ್ಪಿಡೋಗಳಿಂದ ಅವುಗಳನ್ನು ನಾಶ ಮಾಡಬಲ್ಲದಾಗಿದೆ.
ಲಾಕ್‌ಹೀಡ್ ಮಾರ್ಟಿನ್ ಅಂಗಸಂಸ್ಥೆಯಾದ ಸಿಕಾರ್ಸ್ಕೀ ನಿರ್ಮಾಣದ ಈ ಸೀಹಾಕ್‌ಗಳು, 267ಕಿಮೀ/ಗಂಟೆ ವೇಗದಲ್ಲಿ ಹಾರಬಲ್ಲದಾಗಿದ್ದು, ಒಮ್ಮೆ ಇಂಧನ ತುಂಬಿದಲ್ಲಿ 834 ಕಿಮೀ ರೇಂಜ್‌ನಲ್ಲಿ ಕಾರ್ಯನಿರ್ವಹಿಸಬಲ್ಲವು.
ದೇಶದ ಮೊದಲ ಯುದ್ಧ ವಿಮಾನ ವಾಹಕ ನೌಕೆಯಾದ INS ವಿಕ್ರಾಂತ್‌ನ ಡೆಕ್ ಮೇಲೆ 1971ರಲ್ಲಿ ಲ್ಯಾಂಡ್ ಆಗಿದ್ದ ಬ್ರಿಟನ್ ನಿರ್ಮಿತ ಸೀ ಕಿಂಗ್ ಹೆಲಿಕಾಪ್ಟರ್‌ಗಳೇ ಇಂದಿಗೂ ನೌಕಾಪಡೆಯ ಮಹತ್ವದ ಕಾರ್ಯಾಚರಣೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿವೆ. 48 ವರ್ಷಗಳು ಕಳೆದು, ಖುದ್ದು ವಿಕ್ರಾಂತ್ ಸೇವೆಯಿಂದ ನಿವೃತ್ತಿ ಪಡೆದು ಹಡಗುಗಟ್ಟೆಯಲ್ಲಿ ಚೂರು ಚೂರಾಗಿ ವರ್ಷಗಳೇ ಕಳೆದರೂ ಸಹ ಈ ಸೀ ಕಿಂಗ್‌ಗಳ ಮೇಲಿನ ನೌಕಾಪಡೆಯ ಅವಲಂಬನೆ ಇನ್ನೂ ಹೆಚ್ಚೇ ಆಗಿಬಿಟ್ಟಿದೆ.
ಜಗತ್ತಿನ ಅತ್ಯಂತ advanced ಆಗಿರುವ ಸಮರ ನೌಕೆಗಳನ್ನು ಹೊಂದಿರುವ ಭಾರತೀಯ ನೌಕಾಪಡೆಗೆ, ಈ outdated ಸೀ ಕಿಂಗ್‌ಗಳನ್ನು ಬಳಸುವುದರಷ್ಟೇ ದೊಡ್ಡ ಸವಾಲು ಅವುಗಳ ನಿರ್ವಹಣೆಯ ವಿಚಾರದಲ್ಲೂ ಆಗುತ್ತಿತ್ತು. ಬಹುತೇಕ ನೌಕಾಪಡೆಗಳು ಈ ಹೆಲಿಕಾಪ್ಟರ್ ಬಳಕೆಯನ್ನು ದಶಕಗಳ ಹಿಂದೆಯೇ ನಿಲ್ಲಿಸಿದ ಕಾರಣ ಅವುಗಳ ಬಿಡಿ ಭಾಗಗಳು ಸಿಗುವುದೇ ದುಸ್ತರವಾಗಿಬಿಟ್ಟಿತ್ತು.
Anti-submarine ಕ್ಷಮತೆಗಳೇ ಇಲ್ಲದ ಹೆಲಿಕಾಪ್ಟರ್‌ಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯು, ಈ ಸೀ ಕಿಂಗ್‌ಗಳ ಜೊತೆಗೆ 1959ರ ಮಾಡೆಲ್ ಆದ ಚೇತಕ್‌ಗಳನ್ನೇ ಹೆಚ್ಚಾಗಿ ನಂಬಿಕೊಂಡಿತ್ತು.
$2.94 ಲಕ್ಷ ಕೋಟಿಯ ಅರ್ಥ ವ್ಯವಸ್ಥೆಯಾದ ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕ ಶಕ್ತಿಯಾದರೂ ಸಹ ತನ್ನ ಬೃಹತ್ ಜನಸಂಖ್ಯೆಯ ಹೊಟ್ಟೆ ತುಂಬಿಸಲು ಹಾಗೂ ಕೊನೆಮೊದಲುಗಳೇ ಇಲ್ಲದ ಸಾಮಾಜಿಕ ಸವಾಲುಗಳನ್ನು ಎದುರಿಸಲೆಂದೇ ತನ್ನ ವಾರ್ಷಿಕ ಬಜೆಟ್‌ನ ದೊಡ್ಡ ಅಂಶವನ್ನು ತೆಗೆದಿರಿಸಬೇಕಾಗಿದೆ. ಇಷ್ಟೆಲ್ಲಾ ಆದ ಮೇಲೆ ರಕ್ಷಣೆಗೆಂದು ಕೊಡಮಾಡುವ ಮೂರು ಲಕ್ಷ ಕೋಟಿ ರೂಗಳ ಬಜೆಟ್‌ನಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ಪಿಂಚಣಿ ಪಾವತಿಯೊಂದಿಗೆ ಚಾಲನೆಯಲ್ಲಿರುವ ಮಶಿನರಿಗಳ ನಿರ್ವಹಣೆಗೇ ದೊಡ್ಡ ಅಂಶವು operatioinal expenditure ರೂಪದಲ್ಲಿ ವೆಚ್ಚವಾಗಿಬಿಡುತ್ತದೆ. ಇನ್ನು ಆಧುನೀಕರಣಕ್ಕೆ ಮುಂದಾಗಲು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಖರೀದಿಗೆ ಅಗತ್ಯವಾದ capital expenditure ರೂಪದಲ್ಲಿ ಉಳಿಯುವ ಮೊತ್ತದಲ್ಲಿ ಇಂಥ ಸಣ್ಣ ಪುಟ್ಟ ಡೀಲ್‌ಗಳನ್ನು ಮಾತ್ರವೇ ಕುದುರಿಸಿಕೊಳ್ಳಬಹುದಾಗಿದೆ.
ಅದಕ್ಕೂ ಅಡ್ಡಗಾಲಿಟ್ಟಂತೆ, ರಕ್ಷಣಾ ಖರೀದಿ ವಿಚಾರದಲ್ಲೂ ಸಹ bureaucracyಯ ಮೂಗುತೂರುವಿಕೆ ಹಾಗೂ ಕ್ಲಿಷ್ಟಕರವಾದ & ಸುದೀರ್ಗಾವಧಿಯ ಶಾಸನಾತ್ಮಕ – ಅಧಿಕಾರಶಾಹಿ ಪ್ರಕ್ರಿಯೆಗಳು ಈ ಖರೀದಿ ಪ್ರಕ್ರಿಯೆಗಳನ್ನೂ ವಿಳಂಬ ಮಾಡುವ ಮೂಲಕ ವೆಚ್ಚವನ್ನು ಮತ್ತಷ್ಟು ಹೆಚ್ಚುವಂತೆ ಮಾಡುವುದಲ್ಲದೇ, ರಕ್ಷಣಾ ಪಡೆಗಳ ಮೆಶಿನರಿಯನ್ನು outdated ಮಾಡಲು ಕಾರಣವಾಗುತ್ತಿವೆ.
ಅಮೆರಿಕದ ಪೆಂಟಗನ್‌ನಲ್ಲಿ ರಕ್ಷಣಾ ಅಗತ್ಯತೆಗಳನ್ನು ಅರಿತು, ಶಸ್ತ್ರಾಸ್ತ್ರ ಖರೀದಿ ಸಂಬಂಧ ಆದ್ಯತೆಗಳು ಹಾಗೂ ತೀರ್ಮಾನಗಳನ್ನು ನಿರ್ಧರಿಸಲೆಂದು 1.5 ಲಕ್ಷ ಮಂದಿಯ technocratsಗಳ ದೊಡ್ಡದೊಂದು ಸಮರ್ಥ ವ್ಯವಸ್ಥೆಯೇ ಇದೆ. ಬ್ರಿಟನ್ ಸಹ ಇಂಥದ್ದೇ ಕೆಲಸಕ್ಕೆಂದು 45,000+ ಮಂದಿಯ ಅಂಗವನ್ನೇ ಇಟ್ಟುಕೊಂಡಿದೆ.
ಆದರೆ ಭಾರತದಲ್ಲಿ? ರಕ್ಷಣಾ ಸಚಿವಾಲಯಕ್ಕೆ ಸಶಸ್ತ್ರ ಪಡೆಗಳು ಹಾಗೂ ದೇಶದ ರಕ್ಷಣೆಯ ತುರ್ತುಗಳು ಹಾಗೂ ಅಗತ್ಯತೆಗಳ ಕುರಿತು ಮನವರಿಕೆ ಮಾಡಕೊಟ್ಟು, ಸಲಹೆ ನೀಡಲೆಂದು ಬೇಕಾದ ಏಕ ಗವಾಕ್ಷಿ ಹುದ್ದೆಯ ರೂಪದಲ್ಲಿ Chief of Defence Staff (ರಕ್ಷಣಾ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ) ಸಕ್ರಿಯವಾಗಲೇ ಇಷ್ಟು ದಿನಗಳು ಹಿಡಿದಿವೆ. ಇನ್ನು, ಈ bureaucracy ಎನ್ನುವ ಕ್ಯಾನ್ಸರ್ ಗಡ್ಡೆಯನ್ನು ಕಿತ್ತೊಗೆದು, ಆ ಜಾಗದಲ್ಲಿ technocracy ಎಂಬ ಆಮ್ಲಜನಕದ ಪೂರೈಕೆ ಮಾಡಿ, ರಕ್ಷಣಾ ಸಾಮಗ್ರಿ ಖರೀದಿಯ ಪ್ರಕ್ರಿಯೆಗಳಿಗೆ ವೇಗ ನೀಡಲು ಎಷ್ಟು ಸಮಯ ಬೇಕೋ.