Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸಂಗಾತಿಯನ್ನು ಅರಸಿ ಎರಡು ಸಾವಿರ ಕಿಲೋಮೀಟರ್‌ ನಡೆದ ವ್ಯಾಘ್ರ ಹಾಗೂ ರೇಡಿಯೋ ಕಾಲರ್‌ ಪ್ರಯೋಗ

ಸಂಗಾತಿಯನ್ನು ಅರಸಿ ಎರಡು ಸಾವಿರ ಕಿಲೋಮೀಟರ್‌ ನಡೆದ ವ್ಯಾಘ್ರ ಹಾಗೂ ರೇಡಿಯೋ ಕಾಲರ್‌ ಪ್ರಯೋಗ
ಸಂಗಾತಿಯನ್ನು ಅರಸಿ ಎರಡು ಸಾವಿರ ಕಿಲೋಮೀಟರ್‌ ನಡೆದ ವ್ಯಾಘ್ರ ಹಾಗೂ ರೇಡಿಯೋ ಕಾಲರ್‌ ಪ್ರಯೋಗ

March 9, 2020
Share on FacebookShare on Twitter

ವನ್ಯಜೀವಿಗಳು ಸ್ವಚ್ಛಂಧ ಪರಿಸರದಲ್ಲಿ ಎಷ್ಟು ದೂರ ನಡೆಯಬಹುದು, ಹೇಗೆ ವಿರಮಿಸಬಹುದು..? ಆನೆಗಳು ಕಾರಿಡಾರ್‌ ಮೂಲಕ ನೂರಾರು ಕಿಲೋಮೀಟರ್‌ ಸಾಗಿ ಬರುತ್ತವೆಯಂತೆ ಎಂಬುದಷ್ಟೇ ಗೊತ್ತಿದೆ, ಆದರೆ ಹುಲಿ ಎರಡು ಸಾವಿರ ಕಿಲೋಮೀಟರ್‌ ಸಾಗಿದರೆ ಹೇಗಿರಬೇಕು..? ಅಷ್ಟು ಸುದೀರ್ಘ ಪಯಣದಲ್ಲಿ ಹಳ್ಳಿ, ಹೊಲ-ಗದ್ದೆ, ಬೆಟ್ಟ-ಗುಡ್ಡಗಳೆಲ್ಲಾ ಇರುತ್ತವೆ, ಆದರೆ ಎಲ್ಲೂ ತೊಂದರೆ ನೀಡಿಲ್ಲವಂತೆ..! ಹೀಗೊಂದು ಟ್ವಿಟ್ಟರ್‌ ಪೋಸ್ಟ್‌ ಕಳೆದ ವಾರ ಸಾಕಷ್ಟು ಸುದ್ದಿಯಲ್ಲಿತ್ತು. ಭಾರತೀಯ ಅರಣ್ಯ ಸೇವೆಯಲ್ಲಿರುವ ಪರ್ವೀನ್‌ ಕಸ್ವಾನ್‌ ಇಂತಹ ಅಚ್ಚರಿಗಳನ್ನ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಸದಾ ಹಂಚಿಕೊಳ್ಳುತ್ತಿರುತ್ತಾರೆ.

ಇವರು ಬರೆದುಕೊಂಡಂತೆ ಹುಲಿಯೊಂದು ಸಂಗಾತಿಯನ್ನರಸಿ ಸುಮಾರು ಎರಡು ಸಾವಿರ ಕಿಲೋಮೀಟರ್‌ ರಸ್ತೆ, ಕಾಡು, ಕಂದರಗಳಲ್ಲಿ ಸಾಗಿ ಕೊನೆಗೆ ಮಹಾರಾಷ್ಟ್ರದ ಜ್ಞಾನಗಂಗಾ ರಕ್ಷಿತಾರಣ್ಯಕ್ಕೆ ತಲುಪಿದೆ. ಈ ಸುದೀರ್ಘ ಪ್ರಯಾಣದಲ್ಲಿ ಯಾರಿಗೂ ತೊಂದರೆ ನೀಡಿಲ್ಲ, ಹಗಲು ವಿಶ್ರಾಂತಿ ಪಡೆದು ರಾತ್ರಿಯಾಗುತ್ತಿದ್ದಂತೆ ಪಯಣ ಆರಂಭಿಸುತ್ತಿತ್ತು. ಹೀಗೆ ಸಾಗಿದ ಹುಲಿಯನ್ನ ರೇಡಿಯೋ ಕಾಲರ್‌ ಮೂಲಕ ಚಲನವಲನಗಳನ್ನ ದಾಖಲು ಮಾಡಲಾಗಿದೆ.

This #Tiger from India after walking into records has settled to Dnyanganga forest. He walked for 2000 Kms through canals, fields, forest, roads & no conflict recorded. Resting in daytime & walking in night all for finding a suitable partner. Was being continuously monitored. pic.twitter.com/N1jKGXtMh2

— Parveen Kaswan, IFS (@ParveenKaswan) March 5, 2020


ಹೆಚ್ಚು ಓದಿದ ಸ್ಟೋರಿಗಳು

ಪ್ರಧಾನಿ MODI ಮತ್ತು ಅದಾನಿ ನಡುವಿನ ಸಂಬಂಧ ಏನು? ಪ್ರಶ್ನಿಸುವುದನ್ನು ನಾನು ನಿಲ್ಲಿಸಲ್ಲ: Rahul Gandhi

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ಇದೇನೂ ಹೊಸ ಪ್ರಯಾಣವೇನು ಅಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹುಲಿಗಳ ಯಾನವನ್ನ ದಾಖಲಿಸಲಾಗಿದೆ. ಒಮ್ಮೆ ರೇಡಿಯೋ ಕಾಲರ್‌ನ್ನ ಅಳವಡಿಸಿದರೆ ಒಂಭತ್ತು ತಿಂಗಳ ನಂತರ ತೆಗೆಯುತ್ತಾರೆ, ಅದರ ಬ್ಯಾಟರಿ ಬಾಳಿಕೆ ಅಷ್ಟರಲ್ಲಿ ಮುಗಿದಿರುತ್ತೆ. ಈ ಮಧ್ಯೆ ಈ ಕಾಲರ್‌ ಸಂದೇಶಗಳನ್ನ ಆಧರಿಸಿ ಜಿಪಿಎಸ್‌ ಮೂಲಕ ಅದರ ಸ್ಥಳವನ್ನ ದಾಖಲಿಸುತ್ತಾ ಹೋಗುತ್ತಾರೆ. ಹೀಗೆ ನಿರಂತರವಾಗಿ ಏಳು ತಿಂಗಳ ನಂತರ ಈ ಗಂಡು ಹುಲಿ ಎರಡು ಸಾವಿರ ಕಿಲೋಮೀಟರ್‌ ಸಾಗಿ ಬಂದಿದೆ. ಜ್ಞಾನಗಂಗಾ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 2016ರಲ್ಲಿ ಈ ರೀತಿ ರೇಡಿಯೋ ಕಾಲರ್‌ ಅಳವಡಿಕೆ ಶುರುಮಾಡಲಾಗಿದೆ. ಇಲ್ಲಿನ ವಿಭಾಗೀಯ ಅರಣ್ಯಾಧಿಕಾರಿ ಹೇಳುವಂತೆ ಹುಲಿಗಳ ಸ್ವಭಾವವನ್ನ ನಿರ್ಧರಿಸಲು ಸಾಧ್ಯವಿಲ್ಲ, ಹುಲಿಗಳು ತನ್ನ ಸರಹದ್ದನ್ನು ಗುರುತಿಸಿಕೊಳ್ಳುವುದು ನಿಜ, ಆದರೆ ಗಂಡು ಹುಲಿ ಸಾಕಷ್ಟು ದೂರು ಪ್ರಯಾಣ ಮಾಡುತ್ತದೆ. ಕೆಲವೊಮ್ಮೆ ಸೂಕ್ತ ಸಂಗಾತಿಯನ್ನ ಹುಡುಕಿಕೊಂಡು, ಕೆಲವೊಮ್ಮೆ ಆಹಾರವನ್ನ ಹುಡಿಕಿಕೊಂಡು ಸಾಗುತ್ತದೆ. ಕಳೆದ ವರ್ಷ ಎರಡೂವರೆ ವರ್ಷದ ಹುಲಿಯೊಂದು (ಟಿ1ಸಿ1) ಜೂನ್‌ನಿಂದ ಡಿಸೆಂಬರ್‌ವರೆಗೆ ತೆಲಂಗಾಣದಿಂದ ಗಡಿದಾಟಿ ಮಹಾರಾಷ್ಟ್ರದ ತಿಪ್ಪೇಶ್ವರ ಅರಣ್ಯ ಪ್ರದೇಶದಕ್ಕೆ ಸೇರಿತ್ತು. ಅಲ್ಲಿಂದ ಜ್ಞಾನಗಂಗಾ ಅರಣ್ಯಕ್ಕೆ ತಲುಪಿತ್ತು. ಒಟ್ಟು ಸುಮಾರು 1,300 ಕಿಲೋಮೀಟರ್‌ ಕ್ರಮಿಸಿ ಎಲ್ಲರನ್ನ ಅಚ್ಚರಿ ಮೂಡಿಸಿತ್ತು ಎನ್ನುತ್ತಾರೆ.

ಹುಲಿಗಳ ಸಾಂದ್ರತೆ ಹೆಚ್ಚಾದಂತೆ ಗಂಡು ಹುಲಿಗಳು ಹೊಸ ಸರಹದ್ದನ್ನ ಮಾಡಿಕೊಂಡು ಮುನ್ನಡೆಯುತ್ತವೆ. ತಾವು ಸಾಗುವ ದಾರಿಯಲ್ಲಿ ಹೆಣ್ಣು ಹುಲಿಗಳು ಸಿಗದಿದ್ದರೆ ಪ್ರಯಾಣವನ್ನ ಮೊಟಕುಗೊಳಿಸುವುದಿಲ್ಲ, ಅಥವಾ ಕಾಯುತ್ತಾ ಕೂರುವುದಿಲ್ಲ. ಮಹಾರಾಷ್ಟ್ರದ ಜ್ಞಾನಗಂಗಾ ಪ್ರದೇಶವೂ ಸಹ ಅಭಯಾರಣ್ಯಗಳ ಪ್ರದೇಶ. ತೆಲಂಗಾಣದಿಂದಲೂ ಹುಲಿಗಳು ಗಡಿದಾಡಿ ಈಚೆಗೆ ಸಾಗುತ್ತವೆ. ಈ ಪ್ರದೇಶದಲ್ಲಿ ವ್ಯಾಘ್ರಗಳ ಮಹಾಯಾನ ನಿರಂತರವಾಗಿ ದಾಖಲಾಗುತ್ತಿದೆ. ಹುಲಿಗಳ ಸಂತತಿ ವಿಶ್ವದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಒಟ್ಟು ನಾಲ್ಕು ಸಾವಿರ ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ಅದರಲ್ಲೂ ನಿಷೇಧಿತ ಪ್ರದೇಶಗಳಲ್ಲಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ಹುಲಿ ಸಂತತಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ನ್ಯಾಷನಲ್‌ ಟೈಗರ್‌ ಕನ್ಸರ್‌ವೇಷನ್‌ ಅಥಾರಿಟಿ ಮಾಹಿತಿ ನೀಡಿದೆ. ಈಗ ಹುಲಿಗಳು ಗಡಿಗಳನ್ನ ದಾಟಿ, ಜನರಿಗೂ ತೊಂದರೆ ನೀಡದೇ ಧೀರ್ಘ ಪ್ರಯಾಣ ಬೆಳೆಸುತ್ತಿರುವುದರ ಬಗ್ಗೆ ವರದಿಗಳು ಬಂದಿರುವುದು ಸಂತಸದ ವಿಚಾರ.

ರೇಡಿಯೋ ಕಾಲರ್‌ಗಳನ್ನ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತೆ. ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡದಿರುವಂತೆ ತಡೆಯಲೂ ಸಹ ಇದರ ಬಳಕೆಯಾಗಿದೆ. ಮೂರು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಸೆರೆಹಿಡಿದ ಒಂಟಿ ಸಲಗವನ್ನ ಶಿವಮೊಗ್ಗ ಸಕ್ರೆಬೈಲ್‌ಗೆ ತಂದಿದ್ದರು, ಸಾಧು ಸ್ವಭಾವದ ಆನೆಯನ್ನ ಬಿಡಾರದಲ್ಲಿ ಇಟ್ಟುಕೊಳ್ಳುವುದರ ಬದಲು ಕಾಡಿಗೆ ಬಿಡುವ ಹಾಗೂ ಅದನ್ನ ಕೆಲವು ಸಮಯ ರೇಡಿಯೋ ಕಾಲರ್‌ ಮೂಲಕ ಸ್ಯಾಟಲೈಟ್‌ ಸಂಪರ್ಕಕ್ಕೆ ತಂದು ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಅದರ ಇರುವಿಕೆಯನ್ನ ಗಮನಿಸುವ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಕೆಲವು ರೇಡಿಯೋ ಕಾಲರ್‌ಗಳನ್ನ ಪ್ರಾಯೋಗಿಕವಾಗಿ ಆನೆಗಳಿಗೆ ಅಳವಡಿಸುವ ಕೆಲಸವೂ ನಡೆದಿದೆ. ಒಟ್ಟಾರೆ ಹುಲಿಯ ಯಾನದ ಬಗ್ಗೆ ಬೆರಗಿನಿಂದ ನೋಡುವುದಕ್ಕಿಂತ, ಇಷ್ಟು ದೂರ ಸಾಗಲು ಯೋಗ್ಯ ಪರಿಸರ ಇದೆಯಲ್ಲ ಎಂಬುದು ಹೆಮ್ಮೆಯ ವಿಷಯ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಸಿದ್ದರಾಮಯ್ಯ ಎಲೆಕ್ಷನ್ ಗೆ ನಿಲ್ಲಲು ಕ್ಷೇತ್ರ ಹುಡುಕುತ್ತಿರೋದು ನೋಡಿದ್ರೆ ಅನುಕಂಪ ಬರ್ತಿದೆ : ಹೆಚ್ ಡಿಕೆ ವ್ಯಂಗ್ಯ : Siddaramaiah v/s H D Kumaraswamy
Top Story

ಸಿದ್ದರಾಮಯ್ಯ ಎಲೆಕ್ಷನ್ ಗೆ ನಿಲ್ಲಲು ಕ್ಷೇತ್ರ ಹುಡುಕುತ್ತಿರೋದು ನೋಡಿದ್ರೆ ಅನುಕಂಪ ಬರ್ತಿದೆ : ಹೆಚ್ ಡಿಕೆ ವ್ಯಂಗ್ಯ : Siddaramaiah v/s H D Kumaraswamy

by ಪ್ರತಿಧ್ವನಿ
March 21, 2023
ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ : Siddaramaiah Says He won’t be Able to Win in Kolar
Top Story

ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ : Siddaramaiah Says He won’t be Able to Win in Kolar

by ಪ್ರತಿಧ್ವನಿ
March 20, 2023
MINIRATNA | ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಶ್ರೀಗಳು #PRATIDHVANI
ಇದೀಗ

MINIRATNA | ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಶ್ರೀಗಳು #PRATIDHVANI

by ಪ್ರತಿಧ್ವನಿ
March 20, 2023
₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh
Top Story

₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh

by ಪ್ರತಿಧ್ವನಿ
March 20, 2023
ಮೈಸೂರಿನಲ್ಲಿ ಜೆಡಿಎಸ್​ ಪಕ್ಷದ ಐತಿಹಾಸಿಕ ಪಂಚರತ್ನ ಸಮಾರೋಪ..! ವಿಶೇಷತೆ ಗೊತ್ತಾ..?
Top Story

ಮೈಸೂರಿನಲ್ಲಿ ಜೆಡಿಎಸ್​ ಪಕ್ಷದ ಐತಿಹಾಸಿಕ ಪಂಚರತ್ನ ಸಮಾರೋಪ..! ವಿಶೇಷತೆ ಗೊತ್ತಾ..?

by ಕೃಷ್ಣ ಮಣಿ
March 26, 2023
Next Post
ಆಡಳಿತದಲ್ಲಿ ಕುಟುಂಬ ಹಸ್ತಕ್ಷೇಪ: CM BSYಗೆ ಚಾಟಿ ಬೀಸಿದ RSS

ಆಡಳಿತದಲ್ಲಿ ಕುಟುಂಬ ಹಸ್ತಕ್ಷೇಪ: CM BSYಗೆ ಚಾಟಿ ಬೀಸಿದ RSS

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ನಿರ್ಬಂಧಿಸಿ ಸಂವಿಧಾನದ ಕುರಿತು ಚರ್ಚೆ!

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ನಿರ್ಬಂಧಿಸಿ ಸಂವಿಧಾನದ ಕುರಿತು ಚರ್ಚೆ!

ಷೇರುಪೇಟೆಯಲ್ಲಿ ನಿಲ್ಲದ ರಕ್ತದೋಕುಳಿ; ಒಂದೇ ದಿನದಲ್ಲಿ ₹7 ಲಕ್ಷ ಕೋಟಿ ನಷ್ಟ

ಷೇರುಪೇಟೆಯಲ್ಲಿ ನಿಲ್ಲದ ರಕ್ತದೋಕುಳಿ; ಒಂದೇ ದಿನದಲ್ಲಿ ₹7 ಲಕ್ಷ ಕೋಟಿ ನಷ್ಟ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist