Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವಿಶ್ವ ಕಂಡ ಆಜಾತಶತ್ರುವ ನೆನೆಯುತಾ. . .

ವಿಶ್ವ ಕಂಡ ಆಜಾತಶತ್ರುವ ನೆನೆಯುತಾ. . .
ವಿಶ್ವ ಕಂಡ ಆಜಾತಶತ್ರುವ ನೆನೆಯುತಾ. . .

December 25, 2019
Share on FacebookShare on Twitter

ಎತ್ತರದ ಬೆಟ್ಟಗಳಲಿ ಮರ ಹುಟ್ಟುವುದಿಲ್ಲ,

ಹೆಚ್ಚು ಓದಿದ ಸ್ಟೋರಿಗಳು

“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು

“ರಾಜಕೀಯ ಭ್ರಷ್ಟಾಚಾರವೂ ಸಾಂಸ್ಥಿಕ ಬೇರುಗಳೂ”

ಅದಾನಿ ಸಮೂಹವನ್ನು ಅಲುಗಾಡಿಸಿರುವ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳ ದಾಖಲೆಗಳು

ಗಿಡಗಳೂ ಇರುವುದಿಲ್ಲ, ಹುಲ್ಲೂ ಬೆಳೆಯುವುದಿಲ್ಲ.

ಎಷ್ಟೆಷ್ಟು ಎತ್ತರವಿರುವನೋ, ಅಷ್ಟಷ್ಟು ಒಬ್ಬಂಟಿಯಾಗಿರುತ್ತಾನೆ,

ಎಲ್ಲ ಭಾರ ಒಬ್ಬನೇ ಹೊತ್ತಿರುತ್ತಾನೆ, ವಸಂತವೂ ಇಲ್ಲ, ಶಿಶಿರವೂ ಇಲ್ಲ

ಎತ್ತರದ ಬರೀ ಬಿರುಗಾಳಿ ಮಾತ್ರ ಓ ನನ್ನ ಪ್ರಭುವೆ…

ಕೊಡಬೇಡ ನನಗಿಂತಹ ಎತ್ತರ ಅನ್ಯರನು ಆಲಂಗಿಸಲಾಗದು

-ಅಟಲ್ ಬಿಹಾರಿ ವಾಜಪೇಯಿ

ಉದಾರ ವಿಶ್ವ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ಆಲೋಚನೆಗಳಿಗೆ ಬೆಲೆ ಕೊಡುವ ಧೀಮಂತ ನಾಯಕ, ಶ್ರೇಷ್ಠ ಕವಿಯೆಂದೇ ಹೆಸರಾಗಿದ್ದ ಆಟಲ್‌ ಬಿಹಾರಿ ವಾಜಪೇಯಿ ಅವರನ್ನು ಜನರು ಎಂದೆದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾಗಿದ್ದವರು. ತಮ್ಮ ಅಸಾಮಾನ್ಯ ವಾಕ್‌ ಚಾತುರ್ಯದಿಂದ, ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದವರು. ಒಂದು ಸಂದರ್ಶನದಲ್ಲಿ ವಾಜಪೇಯಿ ಅವರೇ ಹೇಳಿದಂತೆ “ನನಗೆ ಪತ್ರಕರ್ತನಾಗಬೇಕೆಂಬ ಆಸೆಯಿತ್ತು. ಆದರೆ ಆಗಿದ್ದು ಮಾತ್ರ ರಾಜಕಾರಣಿ” ಎಂದಿದ್ದರು.

ಡಿಸೆಂಬರ್‌ 25, 1924ರಂದು ಮಧ್ಯಪ್ರದೇಶದ ಗ್ವಾಲಿಯರ್‌ನ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದ ಆದರ್ಶ ಶಿಕ್ಷಕರ ಕುಟುಂಬದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜನಿಸಿದರು. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ವಾಜಪೇಯಿ ಅವರ ಪೋಷಕರು ಬ್ರಿಟಿಷ್‌ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿ ಸ್ವಲ್ಪಕಾಲ ಜೈಲು ವಾಸ ಕೂಡ ಅನುಭವಿಸಿದ್ದರು. ಗ್ವಾಲಿಯರ್‌ನಲ್ಲೇ ವಿದ್ಯಾಭ್ಯಾಸ ಮುಗಿಸಿದ ವಾಜಪೇಯಿ ಹಿಂದಿ, ಇಂಗ್ಲೀಷ್‌ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪರಿಣಿತಿ ಪಡೆದಿದ್ದರು. ನಂತರ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ತನ್ನ ತಂದೆಯ ಜೊತೆಗೆ ಒಂದೇ ತರಗತಿಯಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ಉಳಿದುಕೊಂಡು, ಅಭ್ಯಾಸ ಮಾಡಿ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು.

50ರ ದಶಕದಲ್ಲಿ ಆರ್‌ಎಸ್‌ಎಸ್‌ ನಿಯತಕಾಲಿಕವೊಂದನ್ನು ನಡೆಸುವ ಉದ್ದೇಶದಿಂದ ಕಾನೂನು ವ್ಯಾಸಂಗವನ್ನೇ ಕೈಬಿಟ್ಟರು. ವಾಜಪೇಯಿ ಅವರು ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ಆಪ್ತ ಅನುಯಾಯಿಯಾಗಿದ್ದವರು. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್‌ ಮತ್ತು ವೀರ್‌ ಅರ್ಜುನ್‌ ಪತ್ರಿಕೆಗಳಲ್ಲೂ ವಾಜಪೇಯಿ ಕೆಲಸ ಮಾಡಿದ್ದರು. 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಕಾಲ ಬಂಧನಕ್ಕೊಳಗಾಗಿದ್ದ ವಾಜಪೇಯಿ ಅವರ ರಾಜಕೀಯ ಬದುಕಿನ ಆರಂಭವಾಗಿದ್ದು ಆಗಲೇ.

1951ರಲ್ಲಿ ಭಾರತೀಯ ಜನಸಂಘದ ನಾಯಕರಾಗಿದ್ದಂತಹ ಶಾಮ್‌ ಪ್ರಸಾದ್‌ ಮುಖರ್ಜಿ ಮತ್ತು ದೀನ ದಯಾಳ್‌ ಉಪಾಧ್ಯಾಯ ಅವರ ಒಡನಾಟ ಬೆಳಸಿ, ಜನಸಂಘ ಪಕ್ಷಕ್ಕೆ ಸಕ್ರಿಯವಾಗಿ ತಮ್ಮ ಸೇವೆಯನ್ನು ಸಲ್ಲಿಸಲು ಮುಂದಾದರು. 1957ರಲ್ಲಿ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನುಂಡರೂ, ಬಲರಾಮ್ಪುರ ಕ್ಷೇತ್ರದಿಂದ ಗೆದ್ದ ವಾಜಪೇಯಿ ಅವರ ಮಾತಿನ ಶೈಲಿಗೆ ಸ್ವತಃ ಜವಾಹರ್‌ ಲಾಲ್‌ ನೆಹರೂ ಧಿಗ್ಬ್ರಾಂತರಾದರು. “ಮುಂದೊಂದು ದಿನ ವಾಜಪೇಯಿ ಭಾರತದ ಪ್ರಧಾನಿಯಾಗುತ್ತಾರೆ: ಎಂದು ಸ್ವತಃ ನೆಹರೂ ಭವಿಷ್ಯ ನುಡಿದಿದ್ದರು.

ವಾಜಪೇಯಿ ಅವರು 1975ರಿಂದ 1977ರ ವರೆಗೆ ತುರ್ತು ಪರಿಸ್ಥಿತಿ ಸಮಯದಲ್ಲಿ ಸಾಕಷ್ಟು ಬಾರಿ ಜೈಲಿಗೂ ತೆರಳಿದ್ದರು. ಕಾಂಗ್ರೆಸ್‌ ಪಕ್ಷದ ಸರ್ವಾಧಿಕಾರಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು. ನಂತರ 1977ರ ಚುನಾವಣೆಯಲ್ಲಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು. 1980ರಲ್ಲಿ ತಮ್ಮ ಬಹುಕಾಲದ ಸ್ನೇಹಿತರಾದ ಎಲ್‌ ಕೆ ಅಡ್ವಾಣಿ, ಭೈರಾನ್‌ ಸಿಂಗ್‌ ಶೆಖಾವತ್‌ ಸೇರಿದಂತೆ ಜನಸಂಘ ಮತ್ತು ಆರ್‌ಎಸ್‌ಎಸ್‌ನ ಹಲವು ಸಹೋದ್ಯೋಗಿಗಳನ್ನೂ ಹಾಗೂ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿದರು. ಇದರಿಂದಾಗಿ ʼಭಾರತೀಯ ಜನತಾ ಪಕ್ಷʼ (ಬಿಜೆಪಿ) ಸ್ಥಾಪನೆಯಾಯಿತು. ಅಲ್ಲದೆ, ವಾಜಪೇಯಿ ಅವರು ಪಕ್ಷದ ಮೊದಲ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು. ತಮ್ಮ ಅತ್ಯುತ್ತಮ ಮಾತುಗಾರಿಕೆ, ಸರಳತೆಯಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದರು. 1995ರಲ್ಲಿ ಗುಜರಾತ್‌ ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿತು. ಈ ಗೆಲುವಿಗೆ ವಾಜಪೇಯಿ ಅವರು ಸಾಕಷ್ಟು ಶ್ರಮಿಸಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾದಾಗ ವಾಜಪೇಯಿ ಕುಸಿದುಹೋಗಿದ್ದರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಹಲವು ನಿಮಿಷಗಳ ಕಾಲ ಭಾವುಕರಾಗಿ ಕುಳಿತಲ್ಲೇ ಕುಳಿತಿದ್ದರು. ನಂತರ ಅವರು ಹೇಳಿದಿಷ್ಟೆ, “ಸರಿಪಡಿಸಲಾಗದ ಹಾನಿ” ಎಂದು ಹೇಳಿ ದುಖಃಪಟ್ಟಿದ್ದರು.

ಇವರ ಕಾರ್ಯವೈಖರಿಗೆ ಬಂದ ಪ್ರಶಸ್ತಿಗಳು ಹಲವು. 1992ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, 1993ರಲ್ಲಿ ಕಾನ್ಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪ್ರಶಸ್ತಿ, 1994ರಲ್ಲಿ ಲೋಕಮಾನ್ಯ ತಿಲಕ್‌ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಸಂದೀಯಪಟು ಪ್ರಶಸ್ತಿಗಳು ವಾಜಪೇಯಿ ಅವರ ಮಡಿಲಿಗೆ ಸೇರಿವೆ. ರಾಜಕೀಯದಲ್ಲಿ ಸಕ್ರಿಯವಾಗಿದ್ದರಿಂದ, ಜನತೆಯ ಅಗಾದ ಬೆಂಬಲವಿದ್ದರಿಂದ 1995ರ ಮುಂಬೈಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಎಲ್‌ ಕೆ ಅಡ್ವಾಣಿ ಅವರು ಅಟಲ್‌ ಬಿಹಾರಿ ವಾಜಪೇಯಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು.

1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿಯಾದರು. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದರು. ಆದರೆ ಎಐಎಡಿಎಂಕೆ ನಾಯಕಿ ಜಯಲಲಿತಾ ಬೆಂಬಲ ವಾಪಸ್ ಪಡೆದ ಕಾರಣ 13 ತಿಂಗಳುಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. 1999ರಲ್ಲಿ 303 ಸೀಟುಗಳು ಗೆಲ್ಲುವ ಮೂಲಕ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಎನ್‌ಡಿಎ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೇ ವರ್ಷದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್‌ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಉತ್ತೇಜಿಸಿ, ಗೆಲ್ಲುವಂತೆ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲಬೇಕು.

ಅಟಲ್‌ ಬಿಹಾರಿ ವಾಜಪೇಯಿ ಅವರು ಒಬ್ಬ ವ್ಯಕ್ತಿಯಲ್ಲ ಅಥವಾ ರಾಜಕಾರಣಿ ಮಾತ್ರ ಆಗಿರಲಿಲ್ಲ. ಅವರೊಂದು ಶಕ್ತಿ, ಬಹುಮುಖಿ, ಅಜಾತಶತ್ರು ಹಾಗೂ ದೇಶ ಕಂಡ ಒಂದು ದಂತಕತೆ. ಇವರನ್ನು ಯಾವರೀತಿ ವರ್ಣಿಸಬೇಕು ಅಥವಾ ವರ್ಣಿಸಲು ಮುಂದಾದರೆ ಪದಗಳೇ ಸಾಲದು. ಏಕೆಂದರೆ, ವಾಜಪೇಯಿ ಅವರು ವಿಶಿಷ್ಟ ರಾಜಕಾರಣಿ ಹೌದು. ಅದರ ಹೊರತಾಗಿ ಮಹಾ ಮಾನವತಾವಾದಿ, ಕವಿ, ಪತ್ರಕರ್ತ, ವಾಗ್ಮಿ, ಸರಳ-ಸ್ನೇಹಮಯಿ. ಮಾತಿಗೆ ನಿಂತರೆ ಅವರೊಲ್ಲಬ್ಬ ಕವಿ, ಸಂತ, ತತ್ವಜ್ಞಾನಿ, ಮಾರ್ಗದರ್ಶಕ ಜಾಗೃತನಾಗುತ್ತಿದ್ದ.

ಜನಸಂಘದ ಸ್ಥಾಪಕ ಸದಸ್ಯರಾಗಿ, ನಂತರ ಭಾರತೀಯ ಜನತಾಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರಾಗಿ, ಪ್ರಧಾನಿಯಾಗಿದ್ದ ಅವರು ಕಾಂಗ್ರೆಸ್‌ಗೆ ಸಮರ್ಥ ಪ್ರತಿಪಕ್ಷವನ್ನು ಕಟ್ಟಿಬೆಳೆಸಲು ತಪಸ್ಸಿನಂತೆ ದುಡಿದರು. ಹಾಗೆಂದು ಅವರೆಂದೂ ಉಗ್ರ ಹಿಂದುತ್ವವಾದಿಯಾಗಿರಲಿಲ್ಲ. ಬದಲಾಗಿ ಸೌಮ್ಯವಾದಿ, ಉದಾರವಾದಿ, ಸುಧಾರಣಾವಾದಿ ಎನಿಸಿದ್ದರು. ಈ ಕಾರಣಕ್ಕಾಗಿಯೇ ಎಲ್ಲ ಪಕ್ಷಗಳಲ್ಲೂ ಒಪ್ಪಿತರಾಗಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಜತೆ ಶಾಂತಿ, ಸೌಹಾರ್ದ ಬೆಸೆಯಲು ಸಾಕಷ್ಟು ಪ್ರಯತ್ನಿಸಿದರು. ”ಸ್ನೇಹಿತರನ್ನು ಬದಲಾಯಿಸಬಹುದೇ ಹೊರತು ನೆರೆಹೊರೆಯವರನ್ನಲ್ಲ”, ಎಂದು ಹೇಳುತ್ತಿದ್ದ ಮಾತು ಪಾಕಿಸ್ತಾನ ಕುರಿತು ಅವರು ಹೊಂದಿದ್ದ ವಾಸ್ತವಿಕ ನಿಲುವಿನ ಪ್ರತೀಕವಾಗಿತ್ತು. ಈ ಕಾರಣಕ್ಕಾಗಿ 1999 ರಲ್ಲಿ ದೆಹಲಿ- ಲಾಹೋರ್‌ ಬಸ್‌ ಸಂಚಾರ ಸೇರಿ ಹಲವು ಉಪಕ್ರಮಗಳ ಮೂಲಕ ಆ ದೇಶದೊಡನೆ ಸಂಬಂಧ ಸುಧಾರಣೆಗೆ ಸಾಕಷ್ಟು ಪ್ರಯತ್ನಿಸಿದರು. ಭಾರತ ಕ್ರಿಕೆಟ್‌ ತಂಡವು ಪಾಕ್‌ ಪ್ರವಾಸಕ್ಕೆ ಹೊರಟು ನಿಂತಾಗ, ”ಪಂದ್ಯದ ಜತೆಗೆ ಆ ದೇಶದ ಜನರ ಹೃದಯವನ್ನೂ ಗೆದ್ದು ಬನ್ನಿ,” ಎಂದು ಹೇಳಿದ್ದು ಅವರ ಉದಾರ ಹಾಗೂ ಉದಾತ್ತ ವಿಚಾರಕ್ಕೆ ಸಾಕ್ಷಿ.

RS 500
RS 1500

SCAN HERE

Pratidhvani Youtube

«
Prev
1
/
5477
Next
»
loading
play
Kaveri | ಕಾವೇರಿ ಯಾರಿಗೆ ಸೇರಿದ್ದು..? ಯಾರ್ಯಾರ ರಾಜಕೀಯ ಏನು..? | HD Kumaraswamy | @PratidhvaniNews
play
Lakshmi Hebbalkar | ಆತ್ಮ ವಿಶ್ವಾಸದಿಂದ ಪಕ್ಷ ಸಂಘಟಿಸೋಣ | Congress Leader | @PratidhvaniNews
«
Prev
1
/
5477
Next
»
loading

don't miss it !

ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಗ್ರಹ: ಹೆಚ್‌ ಡಿ ಕುಮಾರಸ್ವಾಮಿ
Top Story

ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಗ್ರಹ: ಹೆಚ್‌ ಡಿ ಕುಮಾರಸ್ವಾಮಿ

by ಪ್ರತಿಧ್ವನಿ
September 21, 2023
BJP strongly opposed to Rahul Gandhi’s statement : ಪ್ರಧಾನಿ ಮೋದಿ ದೇವರನ್ನೂ ಕನ್ಫ್ಯೂಸ್ ಮಾಡುತ್ತಾರೆ ಹೇಳಿಕೆ ; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿ ..!
Top Story

ಭಾರತೀಯರ ಸಾಧನೆಗಳು ವಿಶ್ವದಾದ್ಯಂತ ಚರ್ಚಿಸಲ್ಪಡುತ್ತಿವೆ ; ಪ್ರಧಾನಿ ಮೋದಿ

by ಪ್ರತಿಧ್ವನಿ
September 18, 2023
ಮುಖ್ಯಮಂತ್ರಿ ಆಕಾಂಕ್ಷಿ ನಾಯಕರಿಗೆ ಇಷ್ಟೊಂದು ಕಠಿಣ ಭಾಷೆ ಅವಶ್ಯವೇ..?
Top Story

ಮುಖ್ಯಮಂತ್ರಿ ಆಕಾಂಕ್ಷಿ ನಾಯಕರಿಗೆ ಇಷ್ಟೊಂದು ಕಠಿಣ ಭಾಷೆ ಅವಶ್ಯವೇ..?

by ಲಿಖಿತ್‌ ರೈ
September 21, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ ಕೋರ್ಟ್
Top Story

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ ಕೋರ್ಟ್

by ಪ್ರತಿಧ್ವನಿ
September 20, 2023
ಅಂಕಣ | ನೆನಪಿನ ಚೌಕಗಳಲ್ಲಿ ವಿನಾಯಕ ಚೌತಿ
ಅಂಕಣ

ಅಂಕಣ | ನೆನಪಿನ ಚೌಕಗಳಲ್ಲಿ ವಿನಾಯಕ ಚೌತಿ

by ನಾ ದಿವಾಕರ
September 18, 2023
Next Post
ಹರ್ಯಾಣದಲ್ಲಿ ಹರಕು ಬಾಯಿ ಹರಿ ಬಿಟ್ಟ ಬಿಜೆಪಿ MLA!

ಹರ್ಯಾಣದಲ್ಲಿ ಹರಕು ಬಾಯಿ ಹರಿ ಬಿಟ್ಟ ಬಿಜೆಪಿ MLA!

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಹೆಸರು ಮುಂಚೂಣಿಯಲ್ಲಿರುವುದೇಕೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಹೆಸರು ಮುಂಚೂಣಿಯಲ್ಲಿರುವುದೇಕೆ?

ಮಣ್ಣಿನಿಂದ ಹೊನ್ನು

ಮಣ್ಣಿನಿಂದ ಹೊನ್ನು, ಹೊನ್ನಿನಿಂದ ಮಣ್ಣಿನೆಡೆಗೆ ಬಳ್ಳಾರಿ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist