ಮಹಾ ಶಿವರಾತ್ರಿಯ ಪ್ರಯುಕ್ತ ಇಡೀ ದೇಶದೆಲ್ಲೆಡೆ ಶಿವನಾಮ ಮೊಳಗುತ್ತಿದೆ. ಆದ್ರೆ ಕಲಬುರಗಿ ಆಳಂದ ಪಟ್ಟಣದಲ್ಲಿ ಮಾತ್ರ ಆತಂಕದ ವಾತಾವರಣ. ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಪ್ರತಿವರ್ಷ ಹಿಂದೂಗಳು ಹೋರಬೇಕಿದೆ.. ಈ ಹಿಂದೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಕಿಡಿಗೆಡಿಗಳು ಅಪಮಾನ ಮಾಡಿದ್ದನ್ನ ಖಂಡಿಸಿ ಹಿಂದೂ ಸಂಘಟನೆಗಳು ಶಿವರಾತ್ರಿಯಂದು ಶಿವಲಿಂಗ ಶುದ್ಧೀಕರಣ ಕಾರ್ಯಕ್ಕೆ ತೆರಳಿದ್ದ ವೇಳೆ ಇಲ್ಲಿ ದೊಡ್ಡಮಟ್ಟದ ಘರ್ಷಣೆ ಕಲ್ಲೂ ತೂರಾಟ ನಡೆದಿತ್ತು.
2022 ರಲ್ಲಿ ಹಿಂದೂ ಸಂಘಟನೆಗಳು ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಹೊರಬರುವಾಗ ಅನ್ಯ ಧರ್ಮದ ಜನ ಏಕಾಏಕಿ ಮಾರಕಾಸ್ತ್ರಗಳು, ಬಡಿಗೆ ಹಿಡಿದು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಸಚಿವ, ಸಂಸದರು, ಡಿಸಿ, ಎಸ್ಪಿ ಸೇರಿದಂತೆ ಅನೇಕರ ವಾಹನಗಳು ಜಖಂಗೊಂಡಿದ್ದವು. ಹೀಗಾಗಿ ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಲಾಡ್ಲೇ ಮಶಾಕ್ ದರ್ಗಾದ ಸುತ್ತ ಸಿಸಿ ಕ್ಯಾಮರಾಗಳನ್ನ ಅಳವಡಿಸಿ ಖಾಕಿ ಪಡೆ ಸರ್ಪಗಾವಲು ಹಾಕಲಾಗಿದೆ
ಈ ವಿವಾದ ಈಗಾಗಲೇ ಕೋರ್ಟ್ ಮೆಟ್ಟಿಲೇರಿ ತೀರ್ಪು ಕೂಡ ಬಂದಿದ್ದು, ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹೈಕೋರ್ಟ್ ಹದಿನೈದು ಜನಕ್ಕೆ ಮಾತ್ರ ಅವಕಾಶ ನೀಡಿದೆ. ಹಾಗಾಗಿ ಹಿಂದೂ ಮುಖಂಡರು, ಕಾರ್ಯಕರ್ತರು ಶಿವಮಾಲಾ ಧರಿಸಿ, ಆಳಂದ ಚಲೋಗೆ ಮುಂದಾಗಿದ್ದಾರೆ . ಇತ್ತ ಪೂಜೆ ವೇಳೆ ಅಹಿತಕರ ಘಟನೆ ನಡೆಯದಂತೆ ದರ್ಗಾ ಸುತ್ತಲೂ ಪೊಲೀಸ್ ಸಿಬ್ಬಂಧಿ ನಿಯೋಜನೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರಿಂದ ಬಾಂಡ್ ಬರೆಯಿಸಿಕೊಂಡು ಕೆಲವರನ್ನ ಗಡಿಪಾರು ಮಾಡಲಾಗಿದೆ . ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಕಣ್ಗಾವಲಿರಿಸಿದ್ದಾರೆ. ಮಧ್ಯಾನ 2.30 ರ ನಂತರ ಪೂಜೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತೆ.