• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರೈತರನ್ನು ಜೀವಂತ ಸಮಾಧಿ ಸ್ಥಿತಿಗೆ ತಂದಿರುವ ರಾಜಸ್ಥಾನ ಸರ್ಕಾರದ ದಿವಾಳಿ ಅಭಿವೃದ್ಧಿ ಪ್ರಾಧಿಕಾರ

by
March 3, 2020
in ದೇಶ
0
ರೈತರನ್ನು ಜೀವಂತ ಸಮಾಧಿ ಸ್ಥಿತಿಗೆ ತಂದಿರುವ ರಾಜಸ್ಥಾನ ಸರ್ಕಾರದ ದಿವಾಳಿ ಅಭಿವೃದ್ಧಿ ಪ್ರಾಧಿಕಾರ
Share on WhatsAppShare on FacebookShare on Telegram

ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್‌ ಸರ್ಕಾರ ಜೆಡಿಎ ( ಜೈಪುರ ಡೆವಲಪ್‌ಮೆಂಟ್‌ ಅಥಾರಿಟಿ) ಅಡಿಯಲ್ಲಿ ರೈತರ ಜಮೀನನ್ನ ಗೂಂಡಾಗಿರಿಯ ತರಹ ಸ್ವಾಧೀನ ಪಡೆದುಕೊಂಡಿರುವುದು ರಾಜಸ್ಥಾನದ ಜನರಿಗಷ್ಟೇ ಅಲ್ಲ ಇಡೀ ದೇಶಕ್ಕೇ ದಿಗಿಲು ಬಡಿಸುವ ವಿಷಯ. ಅದರಲ್ಲೂ ಅಲ್ಲಿನ ನಿಂದಾರ್‌ ಹಳ್ಳಿಯ ರೈತರು ಈ ಧೋರಣೆಯ ವಿರುದ್ಧ ಜಮೀನ್‌ ಸಮಾಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. 2013ರ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲಂತೂ ಸರ್ಕಾರಗಳದ್ದೇ ದರ್ಪ. ಜಿಲ್ಲಾಧಿಕಾರಿಗೆ ನೇರವಾಗಿ ಅಧಿಕಾರ ನೀಡಿರುವುದರಿಂದ ರೈತರು ಒಪ್ಪಲಿ ಒಪ್ಪದಿರಲಿ ನಿಗದಿತ ಸಮಯದೊಳಗೆ ಒಕ್ಕಲೆಬ್ಬಿಸಿ ಕಳಿಸೋದೇ ಎಂಬಂತಾಗಿದೆ ರಾಜಸ್ಥಾನದ ರೈತರ ಪರಿಸ್ಥಿತಿ. ಈ ತಿದ್ದುಪಡಿ ಕಾಯ್ದೆ ವಿರುದ್ಧ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಆದರೆ, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿರುವ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ರೈತರನ್ನ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಜಮೀನ್‌ ಸಮಾಧಿ ಪ್ರತಿಭಟನೆಯೇ ನಿದರ್ಶನ.

ADVERTISEMENT

ಸುಮಾರು ವರ್ಷಗಳ ಹಿಂದೆ ಜೈಪುರ ಜಿಲ್ಲಾ ವ್ಯಾಪ್ತಿಯ ನಿಂದಾರ್‌ ಹಳ್ಳಿಯಲ್ಲಿ ಸುಮಾರು ಐದು ನೂರು ರೈತರಿಗೆ ನೋಟಿಸ್‌ ನೀಡಿದ್ದ ಸರ್ಕಾರ ಸುಮಾರು 286.87 ಹೆಕ್ಟೇರ್‌ ಜಮೀನನ್ನ ಸ್ವಾಧಿನ ಪಡಿಸಿಕೊಳ್ಳುವುದಾಗಿ ಹೇಳಿತ್ತು, ಜೈಪುರ ಅಭಿವೃದ್ಧಿ ಪ್ರಾಧಿಕಾರ ಅಂದರೆ ಕರ್ನಾಟಕದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇರುವಂತೆ, ರೈತರಿಗೆ ಕಿರುಕುಳ ನೀಡಿ ಜಮೀನನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಮೊದಲನೆಯದಾಗಿ ಈ ಜಮೀನುಗಳ ದಾಖಲೆ ಪರಿಶೀಲಿಸದೇ ಮನಬಂದಂತೆ ಪರಿಹಾರ ನಿಗದಿ ಮಾಡಲಾಗಿದೆ. ಅದನ್ನೂ ಇದುವರೆಗೆ ನೀಡದೇ ಏಕಾಏಕಿ ಭೂ ಸ್ವಾಧೀನ ಪಡಿಸಿಕೊಂಡಿದೆ.

ನಿಂದಾರ್‌ ಹಳ್ಳಿಯ ಜನರನ್ನ ಒಕ್ಕಲೆಬ್ಬಿಸಿ ಅಲ್ಲಿ ಹೌಸಿಂಗ್‌ ಪ್ರಾಜೆಕ್ಟ್‌ ಮಾಡಲು ಸನ್ನದ್ಧರಾಗಿರುವ ಅಧಿಕಾರಿಗಳು ಭೂಸ್ವಾಧೀನ ತಿಡ್ಡುಪಡಿ ಕಾಯ್ದೆಯಡಿ ಜಾಗವನ್ನ ಅತಿಕ್ರಮಿಸಿದ್ದಾರೆ, ಸಂತ್ರಸ್ತರು ಬಿಟ್ಟುಕೊಟ್ಟ ಜಾಗಕ್ಕನುಗುಣವಾಗಿ ಪ್ರಾಜೆಕ್ಟ್‌ ಪೂರ್ಣವಾದಾಗ ಶೇ.25ರಷ್ಟು ಹೆಚ್ಚಿಗೆ ಮೌಲ್ಯದಲ್ಲೊಂದು ಮನೆ, ಅದಕ್ಕೂ ಮುಂಗಡ ಹಣ ಕಟ್ಟಬೇಕೆಂದು ತಾಕೀತು ಮಾಡಲಾಗಿದೆ. ಭೂಮಿ ಕಳೆದುಕೊಂಡ ರೈತರು ತಮ್ಮ ಭೂಮಿಯನ್ನ ಪುನಃ ಕೊಂಡು ಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿದ್ದಾರೆ.

ಭರವಸೆ ಕಳೆದುಕೊಂಡ ನಿಂದಾರ್‌ ಗ್ರಾಮಸ್ಥರು ಜಮೀನಿನಲ್ಲಿ ಹೊಂಡಗಳನ್ನ ತೋಡಿಕೊಂಡು, ದೇಹವನ್ನು ಹುದುಗಿಸಿಕೊಂಡು ಸಮಾಧಿ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 21 ರೈತರಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಸಹ ಸೇರಿಕೊಂಡಿದ್ದಾರೆ. ಸಂಘರ್ಷದ ನೇತೃತ್ವ ವಹಿಸಿಕೊಂಡಿರುವ ನಾಗೇಂದ್ರ ಸಿಂಗ್‌ ಎಂಬ ರೈತ ಎಷ್ಟೇ ಕಷ್ಟ ಬಂದರೂ ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಾರೆ. ಸರ್ಕಾರ ವಸಾಹತುಶಾಹಿ ನೀತಿ ತೊಡೆದುಹಾಕಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಲ್ಲಿನ ನೈಜ ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸುತ್ತಾರೆ. ಅಲ್ಲಿರುವ ರೈತರಲ್ಲಿ ಒಬ್ಬರದ್ದು ಒಂದೊಂದು ಕಥೆ. ಅರವತ್ತು ವರ್ಷದ ಚಾಂದ್‌ ಇದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

ನಗರ ಬೆಳೆದಂತೆ ತಮ್ಮ ಜಮೀನು ಅರಿವಿಗೆ ಬಾರದಂತೆ ಸರ್ಕಾರದ ವಶಕ್ಕೆ ಹೋಗಿರೋದನ್ನ ನೋಡಿ ಕಂಗಾಲಾಗಿದ್ದಾರೆ. ಇಪ್ಪತ್ತೊಂದು ವರ್ಷದ ಮಮತಾ ಶರ್ಮಾ ಆಸ್ತಿ ಉಳಿಸಿಕೊಳ್ಳಲು ಹೋರಾಟ ರೂಪಿಸುತ್ತಾ ಸ್ನಾತಕೊತ್ತರ ಪದವಿ ಪರೀಕ್ಷೆಯನ್ನೂ ಬರೆದಿಲ್ಲ. ಮಮತಾದೇವಿ ಹಾಗೂ ಆಚೀ ದೇವಿ ಇಬ್ಬರು ಸಹೋದರಿಯರು ಅಣ್ಣತಮ್ಮಂದಿರನ್ನ ಮದುವೆಯಾಗಿದ್ದರು, ಆದರೆ ಕಳೆದ ವರ್ಷ ಅಪಘಾತದಲ್ಲಿ ಮೃತರಾಗಿಬಿಟ್ಟರು. ಈಗ ಭೂಮಿಯೂ ಇಲ್ಲ ಕುಟುಂಬವೂ ಇಲ್ಲ, ಚಿಕ್ಕಮಕ್ಕಳೊಂದಿಗೆ ಪ್ರತಿಭಟನೆಯ ಟೆಂಟ್‌ನಲ್ಲಿ ಕೂತಿದ್ದಾರೆ.

ಸರ್ಕಾರಕ್ಕೆ ಕಣ್ಣು, ಕಿವಿ ಇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ, ರಾಜ್ಯವನ್ನ ಅಧಃಪತನಕ್ಕೆ ತಳ್ಳಿಕೊಂಡು, ಅಭಿವೃದ್ಧಿ ಹೆಸರಲ್ಲಿ ಪರಿಹಾರ ನೀಡದೇ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ರಾಜಸ್ಥಾನ ಸರ್ಕಾರ ಕೇವಲ ನಿದರ್ಶನವಷ್ಟೇ. ಇನ್ನುಮುಂದೆ ನಮ್ಮ ರಾಜ್ಯವನ್ನೂ ಸೇರಿಕೊಂಡು ಎಲ್ಲರೂ ಹೀಗೆ ಒಕ್ಕಲೆಬ್ಬಿಸಲು ಮುಂದಾಗುವ ದಿನಗಳು ದೂರ ಇಲ್ಲ. ರಸ್ತೆ, ರೈಲು ಮಾರ್ಗ, ಕೈಗಾರಿಕೆಗಳು, ಟೋಲ್‌ ಗೇಟ್‌, ವಾಣಿಜ್ಯ ಸಂಕೀರ್ಣಗಳನ್ನ ನಿರ್ಮಾಣ ಮಾಡಲು ಪ್ರತಿದಿನ ಹತ್ತಾರು ಎಕರೆ ಜಮೀನನ್ನ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಮುಂದೆ ಹೀಗೆ ದಿವಾಳಿ ಸ್ವಾಧೀನಕ್ಕೆ ಸಂಕಲ್ಪ ಮಾಡಿದರೂ ಆಶ್ವರ್ಯವಿಲ್ಲ.

Tags: Development AuthorityRajasthan GovtZameen Samadhi Protestಅಭಿವೃದ್ಧಿ ಪ್ರಾಧಿಕಾರಜೀವಂತ ಸಮಾಧಿರಾಜಸ್ಥಾನ ಸರ್ಕಾರ
Previous Post

ಪಾಕಿಸ್ತಾನ ಮೇಲೆ ಕನ್ನಡಿಗರಿಗೇಕೆ ಇಷ್ಟು ಪ್ರೀತಿ?

Next Post

ನಿಮ್ಮ ದ್ವಿತೀಯ ಪಿಯುಸಿ ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕಾ..?

Related Posts

Gold medal for India's Neeru-Kynan pair in the Asian Games mixed trap event!
Top Story

BREAKING : ಏಷ್ಯನ್ ಗೇಮ್ಸ್ ನ ಮಿಕ್ಸ್‌ಡ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು-ಕೈನಾನ್ ಜೋಡಿಗೆ ಚಿನ್ನದ ಪದಕ!

by ಪ್ರತಿಧ್ವನಿ
September 30, 2026
0

ನವದೆಹಲಿ  : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್...

Read moreDetails
Super Intelligence is the official new name for AI

AI ಇನ್ಮುಂದೆ ‘ಸೂಪರ್ ಇಂಟೆಲಿಜೆನ್ಸ್’ ಅಧಿಕೃತ ಹೆಸರು: ಟೆಕ್ ದಿಗ್ಗಜರ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ | Super intelligence

September 30, 2026
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

September 30, 2026
1.58 crore ration cards deactivated nationwide

ದೇಶಾದ್ಯಂತ 1.58 ಕೋಟಿ `ರೇಷನ್ ಕಾರ್ಡ್‌’ಗಳು ನಿಷ್ಕ್ರಿಯ: ಫಲಾನುಭವಿಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ | Ration Card

September 30, 2026
Another Gold Medal for India in Asian Games Archery

BREAKING : ಏಷ್ಯನ್ ಗೇಮ್ಸ್  ಅರ್ಚರಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ

September 30, 2026
Next Post
ನಿಮ್ಮ ದ್ವಿತೀಯ ಪಿಯುಸಿ ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕಾ..?

ನಿಮ್ಮ ದ್ವಿತೀಯ ಪಿಯುಸಿ ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada